ಧಾರವಾಡ 22: ಬಂಡಾಯೋತ್ತರ ಸಂದರ್ಭದಲ್ಲಿ ಬೇಂದ್ರೆ ಕಾವ್ಯದ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ. ದೇಶೀ ಭಾಷಾ ಶೈಲಿಗೆ ಮಾರ್ಗ ಭಾಷಾ ಶೈಲಿ ಬೇಂದ್ರೆ ಕಾವ್ಯಕ್ಕೆ ಗಂಭೀರತ್ವ ಒದಗಿಸಿದೆ. ಬೇಂದ್ರೆಯವರ ಜನಪದಿಯ ಅಂಶಗಳ ಮೇಲೆ ಹೆಚ್ಚಿನಒತ್ತು ನೀಡಲಾಗಿದೆ. ಆದರೆ ಬೇಂದ್ರೆಯವರ ಕಾವ್ಯದ ಮೇಲೆ ಭಾರತೀಯ ಪರಂಪರೆಗಳು ಗಾಢವಾದ ಪ್ರಭಾವ ಬೀರಿವೆ. ಕನ್ನಡ ಮತ್ತು ಮರಾಠಿ ಭಕ್ತಿಪರಂಪರೆಗಳು ಬೇಂದ್ರೆ ಕಾವ್ಯಕ್ಕೆ ಭವ್ಯತೆ ತಂದು ಕೊಟ್ಟಿವೆ. ಸಂಸ್ಕೃತ ಸಾಹಿತ್ಯದ ತೀವ್ರ ಪ್ರಭಾವಕ್ಕೂ ಅವರು ಒಳಗಾಗಿದ್ದರು. ಬೇಂದ್ರೆಯವರು ಭಾಷೆಯ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದರು. ಭಾಷೆಯ ಸಾಧ್ಯತೆಗಳನ್ನು ಸಾದ್ಯಂತಿಕವಾಗಿ ಬಳಸಿಕೊಂಡರು. ಅವರ ಭಾಷೆ ಪಿಸುಮಾತಾಗುತ್ತಿತ್ತು. ಒಮ್ಮೊಮ್ಮೆ ಘಜರ್ಿಸುತ್ತಿತ್ತು ಎಂದು ಖ್ಯಾತಕವಿ ಪ್ರೊ.ಎಚ್.ಎಸ್.ಶಿವಪ್ರಕಾಶ ಹೇಳಿದರು.
ದಿ.21ರಂದು ನವದೆಹಲಿಯ ಕನರ್ಾಟಕ ಸಂಘದ ಸಭಾಂಗಣದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕಟ್ರಸ್ಟ್, ಧಾರವಾಡ, ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಅಮರಕಂಟಕ ಹಾಗೂ ದೆಹಲಿ ಕನರ್ಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ 'ದ.ರಾ.ಬೇಂದ್ರೆ : ಆಧುನಿಕ ಭಾರತೀಯಕಾವ್ಯ ಪರಂಪರೆ' ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಆಶಯ ನುಡಿಗಳನ್ನಾಡುತ್ತ ಬೇಂದ್ರೆಯವರ ಕಾವ್ಯದಲ್ಲಿ ಜಾಗೃತಿ, ನಿದ್ದೆ, ಸ್ವಪ್ನವೂ ಕಾಣುತ್ತದೆ. ಪಾಶ್ಚಾತ್ಯ ಕವಿಗಳಲ್ಲಿ ಕಾಣಿಸಿಕೊಳ್ಳುವ ಮುಂಚೆಯೇ ಅತಿವಾಸ್ತವತೆ ಬೇಂದ್ರೆಯವರ ಕಾವ್ಯದಲ್ಲಿ ಕಂಡದ್ದು ವಿಸ್ಮಯಕಾರಿ. ಆದರೆ ಬೇಂದ್ರೆ ಅರವಿಂದರ ಪ್ರಭಾವಕ್ಕೆ ಒಳಗಾದ ಮೇಲೆ ತನ್ನ ಮೊನಚು, ಸೂಕ್ಷ್ಮತೆ ಕಳೆದುಕೊಂಡಿತು. ಸ್ವಾತಂತ್ರೋತ್ತರ ಭಾರತದ ಒಡಕುಗಳನ್ನು, ಬಿರುಕುಗಳನ್ನು ಬೇಂದ್ರೆ ಕಾವ್ಯ ಅಭಿವ್ಯಕ್ತಿಸಲಿಲ್ಲ. ಕನ್ನಡ ಕಾವ್ಯ ಭಾಷೆ ತನ್ನ ಸೂಕ್ಷ್ಮತೆ ಕಳೆದುಕೊಳ್ಳುವ ಸಂದರ್ಭದಲ್ಲಿ ಬೇಂದ್ರೆಯವರ ಕಾವ್ಯದ ಮರುಮೌಲೀಕರಣ ನಡೆದಿರುವುದು ಸ್ವಾಗತಾರ್ಹ ಎಂದು ಪ್ರೊ.ಶಿವಪ್ರಕಾಶ ಹೇಳಿದರು.
ಮಧ್ಯಪ್ರದೇಶದ ಅಮರಕಂಟದ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟೀಮನಿಯವರು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತ ಬೇಂದ್ರೆಯವರ ಭಾರತದ ಸರ್ವಶ್ರೇಷ್ಠ ಕವಿಗಳಲ್ಲಿ ಪ್ರಮುಖರು. ಅವರ ಕಾವ್ಯದ ಸಮಕಾಲೀನ ಪ್ರಸ್ತುತತೆ ಬೆರಗುಗೊಳಿಸುವಂಥದ್ದು, ಅವರ ಕಾವ್ಯ ಭೂತ, ವರ್ತಮಾನ ಮತ್ತು ಭವಿಷ್ಯದ ಸವಾಲುಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕ ಬಸವರಾಜ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೆಹಲಿ ಕನರ್ಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧಕ್ಷ ಡಾ.ಡಿ.ಎಂ.ಹಿರೇಮಠರು ಸ್ವಾಗತಿಸಿದರು. ಎಸ್.ಕುಮಾರ ಹಾಗೂ ನೇತ್ರಾವತಿ ನಾಡಗೀತೆಯನ್ನು ಪ್ರಸ್ತುತಪಡಿಸಿದರು. ದೆಹಲಿ ಕನರ್ಾಟಕ ಸಂಘದ ಉಪಾಧ್ಯಕ್ಷ ಡಾ.ಅವಣೀಂದ್ರನಾಥ ರಾವ್ ನಿರೂಪಿಸಿದರು. ದೆಹಲಿ ಕನರ್ಾಟಕ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಎಂ.ನಾಗರಾಜ ವಂದಿಸಿದರು.
ಕಾರ್ಯಕ್ರಮದಲ್ಲಿ ಜೆ.ಎನ್.ಯು. ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ, ಡಾ. ಬಸವರಾಜ ಕಲ್ಗುಡಿ, ಡಾ. ಶಾಂತಾ ಇಮ್ರಾಪೂರ, ಡಾ. ಗುರುಪಾದ ಮರಿಗುದ್ದಿ, ಡಾ. ಜಿ.ಕೃಷ್ಣಪ್ಪ, ಡಾ.ಟಿ.ಎಂ.ಭಾಸ್ಕರ್, ಡಾ.ಶಿವಾನಂದ ಕೆಳಗಿನಮನಿ, ಡಾ.ಬಾಳಾಸಾಹೇಬ ಲೋಕಾಪೂರ, ಆನಂದ ಝುಂಜರವಾಡ, ಡಾ.ಎಂ.ಎಸ್.ಆಶಾದೇವಿ, ಡಾ.ವಿಕ್ರಮ ವಿಸಾಜಿ, ಡಾ.ತಾರಿಣಿ ಶುಭದಾಯಿನಿ, ಡಾ.ಸೋಮಶೇಖರ ಅಪ್ಪಗೆರೆ, ಡಾ.ವೆಂಕಟಗಿರಿ ದಳವಾಯಿ, ಡಾ.ಸಂಗಮನಾಥ ಲೋಕಾಪೂರ, ಡಾ.ರಾಜಣ್ಣ ತಗ್ಗಿ, ಡಾ.ರಮೇಶ ಅರೋಲಿ, ಡಾ.ಬಸು ಬೇವಿನಗಿಡದ, ಶಂಕರ ಹಲಗತ್ತಿ, ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದಶರ್ಿ ಮಂಜುಳಾ ಯಲಿಗಾರ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಅನಂತ ದೇಶಪಾಂಡೆ, ಕುಮಾರ ಮರಡೂರ ಮುಂತಾದವರು ಉಪಸ್ಥಿತರಿದ್ದರು. ನಂತರ ವಿವಿಧ ಗೋಷ್ಠಿಗಳು, ಅನಂತ ದೇಶಪಾಂಡೆ ಅವರಿಂದ ಬೇಂದ್ರೆ ದರ್ಶನ, ಕುಮಾರ ಮರಡೂ ಅವರಿಂದ ಬೇಂದ್ರೆ ಗೀತಗಾಯನ, ಯಕ್ಷಗಾನ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಜರುಗಿದ