ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಸಂಭ್ರಮಾಚರಣೆ
Celebrating the success of the Crore Tree Campaign
ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಸಂಭ್ರಮಾಚರಣೆ
ವಿಜಯಪುರ 05: ಬಸವನಾಡಿನಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಾದ್ಯಂತ ಸದ್ದು ಮಾಡಿದ್ದು, ಅಮೇರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಕುರಿತು ವಿಶೇಷ ವರದಿ ಪ್ರಕಟಿಸಿದೆ. ಈ ಸಂತಸವನ್ನು ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರು ಸಸಿ ನೆಡುವ ಮೂಲಕ ಸಂಭ್ರಮಿಸಿದರು. ಇಂದು ಶುಕ್ರವಾರ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಕಚೇರಿಯ ಬಳಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ನಲ್ಲಿ ನೆಲೆಸಿರುವ ವಿಜಯಪುರ ಮೂಲದ ಸಾಫ್ಟವೇರ್ ಎಂಜಿನಿಯರ್ ಸದಾನಂದ ಬಿರಾದಾರ ಅವರು ಸಸಿ ನೆಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನ ಇಂದು ಯಶಸ್ವಿಯಾಗಿ ಇಡೀ ಪ್ರಪಂಚವನ್ನು ತಲುಪಿದೆ. ಅದೇ ರೀತಿ ಜಲ, ನೀರು, ಶಿಕ್ಷಣ ಹಾಗೂ ಆರೋಗ್ಯ ಧ್ಯೇಯವನ್ನೊಳಗೊಂಡಿರುವ ವೃಕ್ಷಥಾನ್ ಹೆರಿಟೇಜ್ ರನ್ ಕೂಡ ಶೀಘ್ರದಲ್ಲಿ ಜಗತ್ತಿನಾದ್ಯಂತ ಖ್ಯಾತಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು. ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲಿ ಡಾ. ಮಹಾಂತೇಶ ಬಿರಾದಾರ ಅವರು ಡಿಸೆಂಬರ್ 7ರಂದು ನಡೆಯಲಿರುವ ಹೆರಿಟೇಜ್ ರನ್- 2025ರ ಪೂರ್ವ ಸಿದ್ಧತೆಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು15 ಸಾವಿರ ಓಟಗಾರರು ಪಾಲ್ಗೊಳ್ಳುವ ನೀರೀಕ್ಷೆಯಿದೆ. ಹೆಸರಾಂತ ಓಟಗಾರರು, ಗಣ್ಯರು ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಿನಿಂದಲೇ ಎಲ್ಲ ಸಮಿತಿ ಸದಸ್ಯರು ಯೋಜನಾಬದ್ಧವಾಗಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಡಿ, ಶಂಭು ಕಪೂರಮಠ, ವೀರೇಂದ್ರ ಗುಚ್ಚೆಟ್ಟಿ, ಡಾ. ರಾಜು ಯಲಗೊಂಡ, ಸಂತೋಷ ಓರಸಂಗ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಸೋಮು ಮಠ, ಸಂಕೇತ ಬಗಲಿ, ಅಪ್ಪು ಭೈರಗೊಂಡ, ಡಾ. ಪ್ರವೀಣ ಚೌರ, ಎಂ. ಎನ್. ಕುಪ್ಪಿ, ವಿಜಯಕುಮಾರ ಕೋರಿ, ಕನಕರಡ್ಡಿ, ಉಪಾಸೆ, ಸಮೀರ ಬಳಿಗಾರ, ಡಾ. ಅಮೀತ, ಉಮೇಶ ಮೆಟಗಾರ, ದಿನೇಶ ಹಳ್ಳಿ, ಅಶ್ಪಾಕ್ ಮನಗೂಳಿ, ಅಮಿತ ಬಿರಾದಾರ, ಜಗದೀಶ ಪಾಟೀಲ, ಮಹೇಶ ವಿ. ಶಟಗಾರ, ಶ್ರೀಕಾಂತ ಹಡಲಗೇರಿ, ನವೀದ ನಾಗಠಾಣ, ವೀಣಾ ದೇಶಪಾಂಡೆ, ನಾಗೇಂದ್ರ ಹಳೆಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 