70ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ :ಶಾಸಕ ಆನಂದ ನ್ಯಾಮಗೌಡ

70ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ :ಶಾಸಕ ಆನಂದ ನ್ಯಾಮಗೌಡ Celebrating the 70th Kannada Rajyotsava: MLA Ananda Nyamagowda


ಜಮಖಂಡಿ  03 : ರಾಜ್ಯದಲ್ಲಿ ಸ್ಯಾಂಡಲ್ ಉಡ್ಡ್‌, ಮಿಲ್ಕ್‌, ಸಕ್ಕರೆ, ಕಾಫಿ ಉತ್ಪಾದನೆ ಮತ್ತು ಜ್ಞಾನಪೀಠ ಪ್ರಶಸ್ತಿಯನ್ನು ಹೊಂದಿರುವ ನಮ್ಮ ಕರ್ನಾಟಕ ರಾಜ್ಯವಾಗಿದೆ. ದೇಶಕ್ಕೆ ಹೆಚ್ಚು ಆದಾಯವನ್ನು ನೀಡುವ ರಾಜ್ಯ ನಮ್ಮದಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ಹೊಕ್ಕಳ ಬಾವಿಯಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿದ ಜಮಖಂಡಿ ರಾಜ್ಯರಾದ ಪಟವರ್ಧನ ಮಹಾರಾಜರು ಸಾಕಷ್ಟು ಅಭಿವೃದ್ದಿಯ ಬಗ್ಗೆ ಮುಂದಾಲೋಚನೆಯನ್ನು ಹೊಂದಿದರು. ಇಲ್ಲಿನ ರೈತರು ಸರಕಾರದ ಯಾವುದೇ ಅನುದಾನವನ್ನು ಪಡೆಯದೆ ಚಿಕ್ಕಪಡಸಲಗಿ ಬ್ಯಾರೇಜ್‌ವನ್ನು ದಿ, ಸಿದ್ದು ನ್ಯಾಮಗೌಡರು ನಿರ್ಮಿಸಿದರು. ರಾಷ್ಟ್ರಪತಿ ಬಿ,ಡಿ, ಜತ್ತಿ ಅವರು ನಮ್ಮ ತಾಲೂಕಿನವರು. ರಾಷ್ಟ್ರದ ಮಾಜಿ ಪ್ರಧಾನಿ ದೇವೆಗೌಡ ಅವರು ಸಹ ನಮ್ಮ ರಾಜ್ಯದವರು ಹೀಗೆ ಹಲವಾರು ಮಹನೀಯರ ಕೊಡುಗೆ ನೀಡಿದ ರಾಜ್ಯ ಕರ್ನಾಟಕವಾಗಿದೆ. ದಿ, ಸಿದ್ದು ನ್ಯಾಮಗೌಡ ಅವರ ಕನಸು ಜಮಖಂಡಿ ರಾಜ್ಯರಾದ ಪಟವರ್ಧನ ಮಹಾರಾಜರ ಸರ್ಕಲ್ ಮಾಡುವ ಕನಸು ಹೊಂದಿದರು. ಇವಾಗ  ಬಿಎಲ್‌ಡಿ ಕಾಲೇಜ ಹತ್ತಿರ ಪಟವರ್ಧನ ಮಹಾರಾಜರ ಸರ್ಕಲ್ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು. 

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, 70 ನೇ ವರ್ಷ ಪೊರೈಯಿಸಿದ  ಕನ್ನಡ ರಾಜ್ಯೋತ್ಸವವಾಗಿದೆ. ಕುವೆಂಪು, ಮಾಸ್ತಿ ಅಯ್ಯಂಗಾರ ಹೀಗೆ ಹಲವಾರು ಮಹನೀಯರು ಕರ್ನಾಟಕ ಎಂದು ನಾಮಕರಣಕ್ಕೆ ಹೋರಾಟವನ್ನು ಮಾಡಿದರು. ಕನ್ನಡ ಬಗ್ಗೆ ಹೆಮ್ಮೆ ಇರಬೇಕು. ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಜಮಖಂಡಿ ಸಂಪೂರ್ಣ ಮರಾಠಿಗರ ಸಂಸ್ಥಾನವಾಗಿತು. ಪಟವರ್ಧನ ಮಹಾರಾಜರು ಕನ್ನಡ ಬಗ್ಗೆ ಅಪಾರ ಕಾಳಜಿ ಹೊಂದಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶ ಒಂದಾಗಬೇಕೆಂಬ ಆಶೆಯನ್ನು ಹೊಂದಿದರು. ಜಂಬಿಗಿ ಬ್ರೀಜ್‌. ರೈಲು ಸಂಚಾರ. ಜಿಲ್ಲಾ ಕೇಂದ್ರವಾಗಬೇಕೆಂದು ಕನಸು ಕಂಡಿದರು. ದಿ,ಬಿ,ಡಿ,ಜತ್ತಿ ಅವರನ್ನು ನೆನಪ್ಪಿಸುವ ಕೆಲಸ ಮಾಡಬೇಕಾಗಿದೆ. ಅವರ ಮೊಮ್ಮಗ ಅರವಿಂದ ಜತ್ತಿ ಮೊಧಿಜೀ ಅವರಿಗೆ ಭೇಟಿ ನೀಡಿ. ಬಸವಣ್ಣವರ ವಚನಗಳ ಬಗ್ಗೆ ತಿಳಿಸಿ ಮಾಹಿತಿಯನ್ನು ನೀಡಿದ್ದಾರೆ.  ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳೆ ಇರುವುದಿಲ್ಲ. 13 ಶಾಲೆಗಳಲ್ಲಿ ಮಕ್ಕಳೆ ಇಲ್ಲ. ಖಾಸಗಿ ಶಾಲೆಯಲ್ಲಿ ಇಂಗ್ಲೀಷ್ ಭಾಷೆಗಳು ಮುಂದುವರಿಯುತ್ತಿದೆ. ಕನ್ನಡ ಭಾಷೆ ಉಳಿಸುವ ಕೆಲಸ ಮಾಡಬೇಕಾಗಿದೆ. ಸರಕಾರ ಕೋಟ್ಯಾಂತರ ರೂ,ಗಳ ಖರ್ಚುಗಳನ್ನು ಮಾಡುತ್ತಿದೆ. ರಾವಬಹದ್ದೂರ ಅವರ ಬಗ್ಗೆ ಪುಸ್ತಕಗಳನ್ನು ಓದಿಕೊಂಡು ಅವರ ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಜಂಬಗಿ ಬ್ರೀಜ್‌ಗೆ ರಾವಬಹದ್ದೂರ ನಾಮಕರ ಮಾಡಬೇಕು ಎಂದು ಸರಕಾರದ ಮೇಲೆ ಒತ್ತಡ ತರಲು ಸ್ಥಳೀಯ ಶಾಸಕರು ಮತ್ತು ಮಾಜಿ ಶಾಸಕರು ಮಾಡಬೇಕು ಎಂದರು. 

ಉಪವಿಭಾಗಾಧಿಕಾರಿ ಕನ್ನಡ ಧ್ವಜಾರೋಹಣವನ್ನು ನೇರವೆರಿಸಿ ಮಾತನಾಡಿದರು, ಮಾಜಿ ವಿಪ, ಸದಸ್ಯ ಜಿ,ಎಸ್, ನ್ಯಾಮಗೌಡ. ದೇವಲ ದೇಸಾಯಿ. ಡಾ,ಎಸ್,ಬಿ, ಮೊಟ್ಟೋಳಿ ಮಾತನಾಡಿದರು.  

ಇದೇ ಸಂದರ್ಭದಲ್ಲಿ ವಿಶೇಷಚೇತನ ಇಲಾಖೆಯಿಂದ ವಿಕಲಚೇತನ ಬಿಎ,ವಿದ್ಯಾರ್ಥಿ ಲೋಕೆಶ. ಪಿಯುಸಿ ವಿದ್ಯಾರ್ಥಿನಿ ಸೌಮ್ಯಾ ನಾವಿ ಅವರಿಗೆ ಲ್ಯಾಫ್ ಟ್ಯಾಪ್ ವಿತರಣೆ ಮಾಡಿದರು. ಡಾ, ಎಸ್,ಬಿ, ಮಟ್ಟೋಳಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಿದರು.