ಸರಕು ವಾಹನದಲ್ಲಿ ಶಾಲಾ ಮಕ್ಕಳನ್ನು ಒಯ್ಯುವುದು ಅಪರಾಧ: ರೇಣುಕಾದೇವಿ

ಹಾವೇರಿ:29:   ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಕಾಮರ್ಿಕರು, ಸಾರ್ವಜನಿಕರನ್ನು ಕರೆದೊಯ್ಯುವುದು ಕಾನೂನಿನ್ವಯ ಅಪರಾಧವಾಗಿದೆ ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಸ್. ರೇಣುಕಾದೇವಿ ಅವರು ಹೇಳಿದರು.

ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಡಿ.ದೇವರಾಜ ಅರಸು ಭವನದಲ್ಲಿ ಸರಕು ವಾಹನಗಳಲ್ಲಿ ಕಾಮರ್ಿಕರನ್ನು ಕರೆದೊಯ್ಯುವುದು ಹಾಗೂ ಆಟೋರಿಕ್ಷಾಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು  ಶಾಲಾ ಮಕ್ಕಳನ್ನು ಕರೆದೊಯ್ಯುವುದುನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ವಾಹನ ಚಾಲಕರು, ಮಾಲಿಕರು ಹಾಗೂ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಪೋಷಕರಿಗಾಗಿ ಆಯೋಜಿಸಲಾದ  ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

      ಪ್ರತಿಯೊಬ್ಬ ಚಾಲಕನು ಮೋಟಾರು ವಾಹನ ಕಾಯ್ದೆ ಬಗ್ಗೆ  ತಿಳಿದುಕೊಳ್ಳಬೇಕು.  ವಾಹನಗಳಿಗೆ ವಿಮೆ ಮಾಡಿಸಿರಬೇಕು. ವಾಹನ ಚಾಲಕ ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಬೇಕು. ಅವಸರ ಹಾಗೂ ನಿರ್ಲಕ್ಷ್ಯ ಚಾಲನೆ ಮಾಡಬಾರದು ಒಂದೊಮ್ಮೆ ಕಾನೂನು ಬಾಹೀರವಾಗಿ ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವುದು, ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೋ ಹಾಗೂ ಇತರ ವಾಹನಗಳಲ್ಲಿ ಕೊಂಡೊಯ್ಯುವುದು ಕಾನೂನಿನನ್ವಯ ಅಪರಾಧವಾಗಿದೆ. ಇಂತಹ ನಿರ್ಲಕ್ಷ್ಯತನದಿಂದ ಆಕಸ್ಮಿಕ ರಸ್ತೆ ಅವಘಡಗಳು  ನಡೆದು ಸಾವುಗಳು ಸಂಭವಿಸಿದರೆ ಇಂತಹ ಸಾವಿನ ಪರಿಣಾಮ ಉದ್ದೇಶಿತ ಕೊಲೆಗೆ ಸಮಾನವಾಗಿರುತ್ತದೆ, ಘೋರ ಅಪರಾಧವಾಗಿರುತ್ತದೆ ಎಂದು ಎಚ್ಚರಿಸಿದರು.

 ವಿದ್ಯಾಥರ್ಿಗಳ ಪೋಷಕರು, ಕಾಮರ್ಿಕರು ಹಾಗೂ ಸಾರ್ವಜನಿಕರು ಸಹ ಸರಕು ಸಾಗಾಣಿಕೆ ವಾಹನಗಳಲ್ಲಿ  ಪ್ರಯಾಣಿಸಬಾರದು. ಹಣದ ಆಸೆಗೆ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯುವ ಶಾಲಾ ಆಟೋ ಸೇರಿದಂತೆ ಯಾವುದೇ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಬಾರದು ಎಂದು ಸಲಹೆ ನೀಡಿದ ನ್ಯಾಯಾಧೀಶರು, ಶಾಲಾ ಆಡಳಿತ ಮಂಡಳಿ ಹಾಗೂ ಕಾಖರ್ಾನೆಗಳ ಮಾಲಿಕರು ವಿದ್ಯಾಥರ್ಿಗಳು ಹಾಗೂ ಕಾಮರ್ಿಕರ ಜೀವನ ಸರುಕ್ಷತೆಯ ಹಿತದೃಷ್ಟಿಯಿಂದ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಹೊಂದುವಂತೆ ಸಲಹೆ ನೀಡಿದರು.

ಚಾಲಕರಿಗೆ ವಾಹನ ಚಾಲನೆ ಪರವಾನಿಗೆ ಮಾತ್ರ ಇದ್ದರೆ ಸಾಲದು, ಅಪಘಾತ ಸಂದರ್ಭದಲ್ಲಿ  ಪರಿಹಾರ  ನೀಡಲು ವಾಹನಗಳಿಗೆ ವಿಮೆ ಮಾಡಿಸುವುದು ಅತೀ ಮುಖ್ಯವಾಗಿದೆ. ಪ್ರತಿ ವಾಹನದ ಮಾಲಿಕ ಕಡ್ಡಾಯವಾಗಿ ವಾಹನಗಳಿಗೆ ವಿಮೆ ಮಾಡಿಸಬೇಕು. ಪರವಾನಿಗೆ ಹೊಂದಿದ ಚಾಲಕನಿಗೆ ಮಾತ್ರ ವಾಹನ ಓಡಿಸಲು ಅವಕಾಶನೀಡಬೇಕು ಎಂದು ತಿಳಿಸಿದರು. 

ಟ್ರಾಪಿಕ್ ಸಿಗ್ನಲ್ಗಳಲ್ಲಿ ಅತೀ ಅವಸರದಲ್ಲಿ  ವಾಹನಗಳನ್ನು ಓಡಿಸುವುದು ಸಾಮಾನ್ಯವಾಗಿದೆ.  ಇಂತಹ ಅವಸರದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ. ಒಂದು ನಿಮಿಷ  ತಾಳ್ಮೆಯಿಂದ ತಡವಾಗಿ ಚಲಿಸಿದರೆ ನಾವು ಏನನ್ನು ಕಳೆದುಕೊಳ್ಳುವುದಿಲ್ಲ ಎಂದು ಪ್ರತಿಯೊಬ್ಬ ಚಾಲಕನು ಅರ್ಥಮಾಡಿಕೊಳ್ಳಬೇಕು. ಇಂತಹ ತಾಳ್ಮೆಯ ಚಾಲನಾ ಪ್ರವೃತ್ತಿ ಪ್ರಯಾಣಿಕರ ಹಾಗೂ ಮಕ್ಕಳ ಜೀವ ರಕ್ಷಣೆಗೆ  ಪೂರಕವಾಗಿರುತ್ತದೆ. ಅಪಘಾತದ ಭೀಕರತೆ, ಅಪಘಾತ ನಂತರದ ತೀವ್ರತರವಾದ ಪರಿಣಾಮ, ಅಂಗವೈಕಲ್ಯತೆ, ಜೀವನ ನಿರ್ವಹಣೆಯ ಸನ್ನಿವೇಶಗಳನ್ನು ಪ್ರತಿಯೊಬ್ಬ ಚಾಲಕನು ನೆನಪಿನಲ್ಲಿಟ್ಟುಕೊಂಡು ರಸ್ತೆ ಸುಕ್ಷತಾ ಮಾರ್ಗಸೂಚಿ, ತಾಳ್ಮೆ, ಸಹನೆಯಿಂದ ಚಾಲನೆ ಮಾಡುವಂತೆ ಚಾಲಕರಿಗೆ ಕಿವಿಮಾತು ಹೇಳಿದರು.

         ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಡಿ.ವೈ.ಎಸ್.ಪಿ. ಕುಮಾರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕ ಸೈಯದ್ ಪೀರಜಾದೆ, ಕಾಮರ್ಿಕ ಇಲಾಖೆ ಅಧಿಕಾರಿ  ಇಸ್ಮಾಯಿಲ್ ಅವರು ಉಪಸ್ಥಿತರಿದ್ದರು.