ಅ.29ಕ್ಕೆ ತಾಳಿಕೋಟಿ ಸಂಪೂರ್ಣ ಬಂದ್‌ಗೆ ಕರೆ
Call for complete shutdown in Talikoti on October 29th
ಅ.29ಕ್ಕೆ ತಾಳಿಕೋಟಿ ಸಂಪೂರ್ಣ ಬಂದ್‌ಗೆ ಕರೆ
ತಾಳಿಕೋಟಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗವಾಯಿ ಅವರ ಅಪಮಾನ, ದಲಿತ ಮಹಿಳೆ ಬಸ್ಸಮ್ಮ ಚಲವಾದಿ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳಿಗೆ ಗಡಿಪಾರಿಗೆ ಆಗ್ರಹಿಸಿ ಅಕ್ಟೋಬರ್ 29ರಂದು ತಾಳಿಕೋಟಿ ಸಂಪೂರ್ಣ ಬಂದ್ ನಡೆಸಲು ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಶನಿವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರೆದ ವಿವಿಧ ದಲಿತಪರ ಸಂಘಟನೆಗಳ ಹಾಗೂ ತಾಲೂಕಿನ ಗ್ರಾಮಗಳ ದಲಿತ ಮುಖಂಡರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಅಂದು ನಡೆಯುವ ತಾಳಿಕೋಟಿ ಸಂಪೂರ್ಣ ಬಂದ್ ನ ಯಶಸ್ವಿಗೆ ಪಟ್ಟಣದ ಎಲ್ಲ ನಾಗರೀಕರು ಸಹಕರಿಸಬೇಕೆಂದು ಮುಖಂಡರು ಕೇಳಿಕೊಂಡಿದ್ದಾರೆ.
ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಡಿಎಸ್‌ಎಸ್ ವಿಭಾಗಿಯ ಸಂಚಾಲಕ ದೇವೇಂದ್ರ ಹಾದಿಮನಿ, ಒಕ್ಕೂಟದ ಪದಾಧಿಕಾರಿಗಳಾದ ಜೈ ಭೀಮ್ ಮುತ್ತಗಿ, ಮಹೇಶ ಚಲವಾದಿ, ಸಿದ್ದಪ್ಪ ಕಟ್ಟಿಮನಿ, ರೇವಣಪ್ಪ ದಲ್ಲಾಳಿ, ಮಾಳಪ್ಪ ಮಾಳಳ್ಳಿ, ಕಾಶಿನಾಥ ಕಾರಾಗನೂರ, ಶಂಕರ ಪಡಸಾಲಿ, ಗುರುಪ್ರಸಾದ ಗೊಟಖಂಡಕಿ, ಮಲ್ಲು ನಾಟಿಕರ್, ಬಸವರಾಜ ಮಾದರ, ಗೋಪಾಲ ಕಟ್ಟಿಮನಿ, ಬಸವರಾಜ ಬಿಸನಾಳ, ಲತೀಫ ಬೀಳಗಿ, ಶರಣು ತಳವಾರ, ಸಿದ್ದಪ್ಪ ಕಟ್ಟಿಮನಿ, ಶರಣು ರಕ್ಕಸಗಿ, ದಲಿತ ಸಮಾಜದ ಮುಖಂಡರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 