ಮುಂಬೈ, ನ 28- ಉದ್ದವ ಠಾಕ್ರೆ ಮನೋಹರ್ ಜೋಶಿ ಮತ್ತು ನಾರಾಯಣ್ ರಾಣೆ ನಂತರ ಸಿಎಂ ಹುದ್ದೆ ಅಲಂಕರಿಸುತ್ತಿರುವ ಪಕ್ಷದ ಮೂರನೇ ನಾಯಕರಾಗಿದ್ದಾರೆ.
ಜುಲೈ 27, 1960 ರಂದು ಮುಂಬೈಯಲ್ಲಿ ಜನಿಸಿದ ಠಾಕ್ರೆ ದಿವಂಗತ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರ ಪುತ್ರ ಮತ್ತು ಜೆಜೆ ಸ್ಕೂಲ್ ಆಫ್ ಆರ್ಟ್ ನ ಪದವೀಧರ ಮತ್ತು ಮತ್ತು ಲೇಖಕ ಮೇಲಾಗಿ ವೃತ್ತಿಪರ ಛಾಯಾಗ್ರಾಹಕರಾಗಿದ್ದಾರೆ. ಅವರ ಛಾಯಾ ಚಿತ್ರಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.
ಠಾಕ್ರೆ ಹುಟ್ಟುಹಾಕಿದೆ ಪ್ರಮುಖ ಮರಾಠಿ ಪತ್ರಿಕೆ 'ಸಾಮ್ನಾ'ದ ಪ್ರಧಾನ ಸಂಪಾದಕರಾಗಿದ್ದಾರೆ. 2002ರ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿ ಈ ವರೆಗೂ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.
ಮಹಾರಾಷ್ಟ್ರ ರಾಜಕಾರಣದ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ ಉದವ್ ಠಾಕ್ರೆ, ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿರುವ ಠಾಕ್ರೆ ಕುಟುಂಬದ ಮೊದಲ ಸದಸ್ಯ. 59 ವರ್ಷದ ಠಾಕ್ರೆ ಅವರನ್ನು 2003 ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ನಂತರ ಅವರು 2004 ರಲ್ಲಿ ಪಕ್ಷದ ಅಧ್ಯಕ್ಷರಾಗಿದ್ದಾರೆ.
2007 ರಲ್ಲಿ ರೈತರು ಬೆಳೆ ನಾಶದಿಂದ ಸಂಕಷ್ಟಕ್ಕೆ ಸಿಲುಕಿದಾಗ ರೈತರಿಗಾಗಿ ಠಾಕ್ರೆ ಯಶಸ್ವಿ ಸಾಲ ಪರಿಹಾರ ಅಂದೋಲನವನ್ನೂ ಏರ್ಪಡಿಸಿದ್ದರು.