ಸಂಶಯಾಸ್ಪದ ಕೌಟುಂಬಿಕ ಕಲಹ ಪೊಲೀಸ್ ಇಲಾಖೆಗೆ ನೀಡಲು ಸಿಇಒ ಸೂಚನೆ

ಕಾರವಾರ, ಜೂನ್ 20:ಸಂಶಯಾಸ್ಪದ ಕೌಟುಂಬಿಕ ಕಲಹದಂತಹ ಯಾವುದೇ ಪ್ರಕರಣಗಳು ಸಾಂತ್ವನ ಕೇಂದ್ರಕ್ಕೆ ಬಂದರೆ ಶಿಶು ಅಭಿವೃದ್ಧಿ ಅಧಿಕಾರಿಗಳ ಮೂಲಕ ತಕ್ಷಣ ಪೊಲೀಸ್ ಇಲಾಖೆಗೆ ಶಿಫಾರಸು ಮಾಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಂ.ರೋಷನ್ ಸಾಂತ್ವನ ಕೇಂದ್ರದ ಸಮಾಲೋಚಕರಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ನಡೆದ ವರದಕ್ಷಿಣೆ ನಿಮರ್ೂಲನಾ ಜಿಲ್ಲಾ ಮಟ್ಟದ ಸಮಿತಿ ಹಾಗೂ ಸಾಂತ್ವನ ಕೇಂದ್ರಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಸಾಂತ್ವನ ಕೇಂದ್ರಗಳಲ್ಲಿ ಮಹಿಳೆಯರಿಗೆ ಸಾಂತ್ವನ ನೀಡುವ ಸಂಬಂಧ ಸಮಲೋಚನೆಗಳನ್ನು ಮಾಡುವಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಒಂದೊಮ್ಮೆ ಸಂಶಯಾಸ್ಪದ ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಪ್ರಕರಣವೆಂದು ಮೇಲ್ನೋಟಕ್ಕೆ ಗೊತ್ತಾದರೆ ತಕ್ಷಣ ಆ ಪ್ರಕರಣವನ್ನು ಪೊಲೀಸ್ ಇಲಾಖೆಗೆ ವಗರ್ಾಯಿಸಬೇಕು ಎಂದರು.

ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣಗಳನ್ನು ಹೊರತುಪಡಿಸಿ ತಮ್ಮ ಹಂತದಲ್ಲಿ ಬಗೆಹರಿಸುವ ಪ್ರಕರಣಗಳನ್ನು ಆದಷ್ಟು ವೇಗವಾಗಿ ಬಗೆಹರಿಸಿ ನೊಂದ ಮಹಿಳೆ ಕುಟುಂಬದೊಂದಿಗೆ ಬಾಳು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಾಂತ್ವನ ಕೇಂದ್ರ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.

ಕೆಲವು ಪ್ರಕರಣಗಳನ್ನು ವಿಚಾರಣೆಗೆ ಬಾರದ ಕುಟುಂಬಗಳಿಗೆ ಸಮಾಲೋಚಕರು ಪೊಲೀಸ್ ಠಾಣೆಗೆ ಹೋಗುವ ಮುನ್ನ ಮೂರು ಬಾರಿ ನೋಟಿಸ್ ನೀಡಿ, ಆಗಲೂ ವಿಚಾರಣೆಗೆ ಬರದಿದ್ದರೆ ಸ್ಥಳೀಯ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳ ಮೂಲಕ ಒಂದು ನೋಟಿಸ್ ಕೊಡಿಸಿ ಅಂತಿಮವಾಗಿ ಪೊಲೀಸ್ ಸಹಕಾರ ಪಡೆಯುವಂತೆ ಸಲಹೆ ಮಾಡಿದರು.

ಶಿಶು ಅಭಿವೃದ್ಧಿ ಅಧಿಕಾರಿಗಳು ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಪ್ರಕರಣಗಳ ಕುರಿತು ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದರ್ೇಶಕರಿಗೆ ವರದಿ ಸಲ್ಲಿಸಬೇಕು. ಅಲ್ಲದೆ ಶಿಶು ಅಭಿವೃಧ್ಧಿ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಪ್ರವಾಸ ಮಾಡಿದ ಬಗ್ಗೆ ಚಲನ ವಲನ ಪುಸ್ತಕದಲ್ಲಿ ನಮೂದಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪ ನಿದರ್ೇಶಕ ರಾಜೇಂದ್ರ ಬೇಕಲ್, ಡಿವೈಎಸ್ಪಿ ಮಾರಿಹಾಳ್ ಸೇರಿದಂತೆ ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಅಧಿಕಾರಿಗಳು, ಸಾಂತ್ವನ ಕೇಂದ್ರಗಳ ಸಮಾಲೋಚಕರು ಮತ್ತಿತರರು ಉಪಸ್ಥಿತರಿದ್ದರು.