ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು ಹೋರಾಟಕ್ಕೆ ಇಳಿದ ವಿದ್ಯಾರ್ಥಿಗಳು
ಇಂಡಿ 23 :ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು ಧೀಡಿರಣೆ ರಸ್ತೆಗಿಳಿದು ಹೋರಾಟ ಮಾಡಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು, ಹೌದು ಇಂಡಿ ತಾಲ್ಲೂಕಿನ ತಡವಲಗಾ ಹಂಜಗಿ ಆಳೂರ, ಮಸಳಿ,ನಾದ ಮಿರಗಿ ಸಾಲೂಟಿಗಿ ಮಣ್ಣೂರ ರೋಡಗಿ ಖೇಡಗಿ ಶಿರಕನಹಳ್ಳಿ ನಿಂಬಾಳ ಬೈರೂಣಿಗಿ,ನಂದ್ರಾಳ ಸೇರಿದಂತೆ ವಿವಿಧ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಾಲೆ ಕಾಲೇಜು ಶಿಕ್ಷಣ ಪಡೆಯಲು ಎಲ್ಲ ವಿದ್ಯಾರ್ಥಿಗಳು ಹೋಗಬೇಕು ಬರಬೇಕು ಎಂದರೆ ಸರಿಯಾದ ಸಮಯಕ್ಕೆ ಬಸ್ಸು ಇಲ್ಲದೆ ಕಾರಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಆದರೆ ಎಷ್ಟು ಬಾರಿ ಮನವಿ ಮಾಡಿದರೂ ಕೂಡಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಮನವಿ ಮಾಡಿದರು ಯಾವುದೇ ಪರಿಹಾರ ದೊರೆಯುತ್ತಿಲ್ಲ ಎಂದು ಇಂದು ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕರಾದ ಶ್ರೀ ಸಚೀನ ದಾನಗೊಂಡ ಅವರು ಹೇಳಿದರು.ಧರಣಿ ನಿರಂತರ ಸ್ಥಳಕ್ಕೆ ಆಗಮಿಸಿದ ಇಂಡಿ ಘಟಕ ವ್ಯವಸ್ಥಾಪಕರ(ಪ್ರಭಾರಿ) ವೀರೇಶ್ ನಡವಮನಿ ಅವರು ಒಂದಿಷ್ಟು ಬಸ್ಸುಗಳು ಶಾಲೆಯ ಪ್ರವಾಸಕ್ಕೆ ಹೋಗಿವೆ.ಆದ್ದುರಿಂದ ಈ ಸಮಸ್ಯೆ ಆಗಿದೆ ಬರುವ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.ಆದರೆ ಶಕ್ತಿ ಯೋಜನೆ ವೀಫ್ಕ್ಟವೋ ಅಥವಾ ವ್ಯೆವಸ್ಥಾಪಕರು ಕಾರ್ಯನಿರ್ವಹಣಾ ವಿಫಲವೋ ಗೋತ್ತಿಲ್ಲ ವಿದ್ಯಾರ್ಥಿಗಳ ಬಸ್ ಸಮಸ್ಯೆ ಅಂತೂ ಹೇಳುತಿರದ್ದಾಗಿದೆ. ಈ ಹೋರಾಟದಲ್ಲಿ ವಿದ್ಯಾರ್ಥಿಗಳಾದ ಗಣೇಶ್ ಹಂಜಗಿ, ರಾಹುಲ್ ಜಾಧವ ಸಮರ್ಥ ಗಾಯಕವಾಡ ಚಂದ್ರಾಮ ಕಾಂಬಳೆ, ದೀಪಾ ಗಿರಣಿವಡ್ಡರ ದಾನೇಶ್ವರಿ ನಾವಿ ದಾನಮ್ಮ ಪತ್ತಾರ ಅಮುಲ್ಯ್ ಯಂಕಂಚಿ ಗಂಗಾ ವಾಲಿ ಐಶ್ವರ್ಯ ಬಡಿಗೇರ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.