ಎಸ್‌ಎಫ್‌ಐ ವಿದ್ಯಾರ್ಥಿ ನಿರಂತರ ಹೋರಾಟದಿಂದ ಪ್ರತಿಫಲಿಸಿದ ಬಸ್ಸ ವ್ಯವಸ್ಥೆ
Bus system reflected by continuous struggle of SFI students
ಎಸ್‌ಎಫ್‌ಐ ವಿದ್ಯಾರ್ಥಿ ನಿರಂತರ ಹೋರಾಟದಿಂದ ಪ್ರತಿಫಲಿಸಿದ ಬಸ್ಸ ವ್ಯವಸ್ಥೆ
ಹಾವೇರಿ 10: ತಾಲ್ಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಅನೇಕ ಬಾರಿ ಬೃಹತ್ ಹೋರಾಟ ಮಾಡಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಎಸ್‌ಎಫ್‌ಐ ಹೋರಾಟದ ಪ್ರತಿಫಲವಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಯು ನಿರಂತರ ಸಂಚಾರಕ್ಕೆ ಸಿಟಿ ಬಸ್ ಬಿಟ್ಟ ಹಿನ್ನೆಲೆ ಮಹಾವಿದ್ಯಾಲಯ ಎದುರು ಕಾರ್ಯಕರ್ತರು ಬಸ್‌ಗೆ ಮಾಲಾರೆ್ಣ ಮಾಡಿ ಸಂಭ್ರಮಿಸಿದರು.
ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ತೆರನಾದ ಪ್ರತಿಭಟಿಸಿ, ಬಸ್ ನಿಲ್ದಾಣ ಬಂದ್ ಮಾಡಿ ಗ್ರಾಮೀಣ ಪ್ರದೇಶಗಳಿಗೆ ಸಮರ್ಕ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ನಗರ ಸಾರಿಗೆ ಪ್ರಾರಂಭಿಸಲು ಒತ್ತಾಯಿಸಲಾಗಿತ್ತು. ಪ್ರತಿಭಟನೆ ಸ್ಥಳಕ್ಕೆ ಕೆಎ???ರ್ಟಿಸಿ ಘಟಕ ವ್ಯವಸ್ಥಾಪಕರು ಆಗಮಿಸಿ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಹಾವೇರಿಯಿಂದಗುತ್ತಲ/ಹೊಸರಿತ್ತಿ ಮಾರ್ಗವಾಗಿ ಹಾಗೂ ಮುಂದಕ್ಕೆ ಸಂಚರಿಸುವ (ಹೋಗುವಾಗ/ಬರುವಾಗ) ಎಲ್ಲಾ ಸಾರಿಗೆಗಳನ್ನು ಸರ್ಕಾರಿ ಪ್ರಥಮದರ್ಜೆಕಾಲೇಜು, ಗಾಂಧಿಪುರಕ್ಕೆಕಡ್ಡಾಯವಾಗಿ ನಿಲ್ಲಿಸಿ, ವಿದ್ಯಾರ್ಥಿಗಳು/ಸಾರ್ವಜನಿಕ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿಕೊಂಡು ಕಾರ್ಯಾಚರಣೆ ಮಾಡುವಂತೆ ಸದರಿ ಮಾರ್ಗದಲ್ಲಿಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಲಾಗಿದೆ.ಹಾವೇರಿಘಟಕದಅನುಸೂಚಿ ಸಂಖ್ಯೆ-159/160 ರಲ್ಲಿಆರ್.ಟಿ.ಓಕಚೇರಿಯಿಂದ ಸಿಂದಗಿ ಶಾಂತವೀರೇಶ್ವರಕಾಲೇಜ, ಲಕಮಾಪುರ, ಎಲ್.ಐ.ಸಿ. ಹಾವೇರಿ ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್. ಯತ್ನಳ್ಳಿ, ಗಾಂಧೀಪುರಕಾಲೇಜ ಮಾರ್ಗವಾಗಿ ಅಗಡಿಗೆ 16 ಸರತಿಗಳನ್ನು ಕಾರ್ಯಾಚರಣೆ ಮಾಡಲು ನಮೂನೆ-4 ನ್ನು ನೀಡಿದ್ದು, ಸಾರ್ವಜನಿಕರು/ವಿದ್ಯಾರ್ಥಿಗಳಿಂದ ಯಾವುದೇ ದೂರುಗಳು ಬರದಂತೆ ಸದರಿ ಅನುಸೂಚಿಗಳನ್ನು ನಮೂನೆ-4 ರಂತೆ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಲು ತಿಳಿಸಲಾಗಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೋರಡಿಸಿದ್ದಾರೆ.
ಎ?????? ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳ ನಡೆಸಿದ ಹೋರಾಟಕ್ಕೆಜಯ ಸಿಕ್ಕಿದ್ದು.ಅನೇಕ ಜನ ಸಾಮಾನ್ಯರ ಬೇಡಿಕೆಕೂಡವಾಗಿದ್ದು ಹಾಗೂ ಅನೇಕ ಬಾರಿ ಮಾದ್ಯಮ ಬಳಗವು ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ವರದಿ ಮಾಡುವ ಮೂಲಕ ನಗರ ಸಾರಿಗೆ ಬೇಡಿಕೆಯನ್ನು ಒತ್ತಾಯಿಸಿದರು. ಸಾರಿಗೆ ಸಂಸ್ಥೆಗೆ ವಿದ್ಯಾರ್ಥಿ ಸಮುದಾಯದ ಪರವಾಗಿಎಸ್‌ಎಫ್‌ಐಕೃತಜ್ಞತೆಯನ್ನು ಸಲ್ಲಿಸುತ್ತದೆಎಂದುಎಸ್‌ಎಫ್‌ಐಜಿಲ್ಲಾಧ್ಯಕ್ಷ ಬಸವರಾಜಎಸ್ ತಿಳಿಸಿದರು.ಈ ಸಂದರ್ಭದಲ್ಲಿಎಸ್‌ಎಫ್‌ಐಕಾಲೇಜ್‌ಘಟಕಅಧ್ಯಕ್ಷತಿರಕಪ್ಪ ಬಾತಿ, ಕಾರ್ಯದರ್ಶಿ ಲಕ್ಷ್ಮಿ ಲಮಾಣಿ, ಉಪಾಧ್ಯಕ್ಷೆ ಲಿಂಗರಾಜ ಸಿ ಎಮ್, ಜ್ಯೋತಿ ಪಟ್ಟಣಶೆಟ್ಟಿ, ಸಂಜನಾ ಬಾರ್ಕಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 