ಬಜೆಟ್ ದೇಶದಅಭಿವೃದ್ಧಿಯನ್ನುತಿಳಿಸುತ್ತದೆ : ಪ್ರೊ. ಮಹೇಬೂಬ್ ಆರೀಫ್ ಸೋದರವಾಲೆ

ಬಜೆಟ್ ದೇಶದಅಭಿವೃದ್ಧಿಯನ್ನುತಿಳಿಸುತ್ತದೆ : ಪ್ರೊ. ಮಹೇಬೂಬ್ ಆರೀಫ್ ಸೋದರವಾಲೆ Budget reflects the development of the country: Prof. Mahebub Arif Sodarwale

.  

ಗದಗ 25 : ನಗರದ ಪ್ರತಿಷ್ಠಿತ ಕೆ. ಎಲ್‌. ಇ.ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿವಾಣಿಜ್ಯ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ದಿನಾಂಕ 25-02-2026 ಬುಧವಾರದಂದು ಇತ್ತೀಚಿಗೆ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ 2026-2027 ರ ವಾರ್ಷಿಕ ಬಜೆಟ್ ನ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  

ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಹಿಳಾ ಸರ್ಕಾರಿ ಪ್ರಥಮ ಧರ್ಜೆ ಕಾಲೇಜು, ಗದಗನ ಐ. ಕ್ಯೂ. ಏ. ಸಿ. ಸಂಯೋಜಕರು ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಹೇಬೂಬ್ ಆರೀಫ್ ಸೋದರವಾಲೆ ಅವರು ಬಜೆಟ್ ಬಗ್ಗೆ ಮಾತನಾಡುತ್ತಾ ಬಜೆಟ್ ಯಾವಾಗ ಪ್ರಾರಂಭ ಆಯಿತು, ಯಾರು ಪ್ರಾರಂಭಿಸಿದರು,ಹೇಗೆ ಪ್ರಾರಂಭಿಸಿದರು, ಹೇಗೆ ತಯಾರಿಸುತ್ತಾರೆ, ಹೇಗೆ ಮಂಡಿಸುತ್ತಾರೆ, ಬಜೆಟ್ ದೇಶದ ಅಭಿವೃದ್ಧಿಯನ್ನು ತಿಳಿಸುತ್ತದೆ, ಬಜೆಟ್ ಹೇಗೆ ಅರ್ಥ ಮಾಡಿಕೊಳ್ಳಬೇಕು, ವಿಧಗಳು ಯಾವವು, ಬಜೆಟ್‌ನ ಉದ್ಧೇಶಗಳು, ಅಂಗಗಳು, ಸರ್ಕಾರದ ಆದಾಯದ ಮೂಲಗಳು, ಅದನ್ನು ಹೇಗೆ ಹಂಚಿಕೆ ಮಾಡುತ್ತಾರೆ, 2026-2027 ರ ಬಜೆಟ್ ಅವಶ್ಯಕತೆಗಳು, ಅದರಿಂದ ಕರ್ನಾಟಕಕ್ಕೆ ಆಗಿರುವ ಲಾಭಗಳು ಮತ್ತು ಗದಗ ಜಿಲ್ಲೆಗೆ ಆಗಿರುವ ಲಾಭಗಳನ್ನು ತಿಳಿಸುತ್ತಾ 2026-2027 ರ ಕೇಂದ್ರ ಸರ್ಕಾರದ ಬಜೆಟ್ ನ್ನು ಕೂಲಂಕುಶವಾಗಿ ಚರ್ಚಿಸಿ, ಮಾತನಾಡಿದರು.  

ಕಾರ್ಯಾಗಾರದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ. ಡಾ. ಎ. ಕೆ. ಮಠ ಅವರು ಮಾತನಾಡಿ ಯುವಕರನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಬೇಕು, ಯುವ ಶಕ್ತಿ ದೇಶದ ಶಕ್ತಿ, ಭಾರತದ ಆರ್ಥಿಕತೆ ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ದೇಶದ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.  

ಈ ಕಾರ್ಯಾಗಾರದಲ್ಲಿ ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಪ್ರೊ. ಎಸ್‌. ಸಿ. ನಿಲೂಗಲ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಐ. ಬಿ. ಪಾಟೀಲ್, ಮಹಾವಿದ್ಯಾಲಯದ ಸಿಬಂದ್ದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ ವಿಭಾಗದ ಪ್ರಾದ್ಯಾಪಕರಾದ ಪ್ರೊ. ಯಲ್ಲಪ್ಪಾ ಅಡಕಾವು ಅವರು ಪರಿಚಯಿಸಿದರು, ಪ್ರೊ. ಎಸ್‌. ಸಿ. ನಿಲೂಗಲ್ ಅವರು ಸ್ವಾಗತಿಸಿದರು, ಬಿ. ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ ಕುಮಾರಿ. ಪಲ್ಲವಿ ಹಂಚನಾಳ ನಿರೂಪಿಸಿದರು.