ಲೋಕದರ್ಶನ ವರದಿ
ವಿಜಯಪುರ 02:ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಕರ್ಾರ ವಿತ್ತ ಮಂತ್ರಿಗಳಾದ ಪಿಯುಷ್ ಗೋಯಲ್ ಅವರು ನಿನ್ನೆ ದಿ: 01 ರಂದು ಮಂಡಿಸಿದ ಬಜೆಟ್ನ್ನು ಭಾರತೀಯ ಜನತಾ ಪಾಟರ್ಿ ವಿಜಯಪುರ ಜಿಲ್ಲೆ ವತಿಯಿಂದ ಕೇಂದ್ರ ಸಕರ್ಾರಕ್ಕೆ ಮತ್ತು ಪ್ರಧಾನ ಮಂತ್ರಿಗಳಿಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತ್ತು ಸಿಹಿ ಹಂಚುವುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಕರ್ಾರದ ಪರವಾಗಿ ಜಯ ಘೊಷಣೆಗಳನ್ನು ಉಪಸ್ಥಿತರಿದ್ದ ಕಾರ್ಯಕರ್ತರು ಕೂಗಿದರು.
ಈ ಸಂದರ್ಭದಲ್ಲಿ ರೈತ ಮೋಚರ್ಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪಂಚಪ್ಪಾ ಕಲಬುಗರ್ಿ ಮಾತನಾಡಿ ದೇಶದ ಬೆನ್ನಲಬು ಆದ ರೈತ ಸಮುದಾಯಕ್ಕೆ ಈ ಬಾರಿ ಮಂಡಿಸಿದ ಕೇಂದ್ರ ಸಕರ್ಾರದ ಬಜೆಟ್ ಸಂತಸ ತಂದಿದೆ. ಕಳೆದ 5 ವರ್ಷಗಳಲ್ಲಿ ರೈತರಿಗೆ ಅನಕೂಲವಾಗುವ ಹಾಗೆ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸಕರ್ಾರ ರೂಪಿಸಿದ್ದು ಅದರಲ್ಲಿ ಪ್ರಮುಖವಾದ ಫಸಲ್ ಬೀಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ದೇಶದ ಬಹುಪಾಲು ರೈತರಿಗೆ ಸಹಾಯವಾಗಿದೆ. ಈ ಹಿಂದೆ ಯೂರಿಯಾ ಮತ್ತು ಇನ್ನಿತರ ಫಟರ್ಿಲೈಸರ್ಗಳ ಕೊರತೆ ಆಗುತಿತ್ತು ಮತ್ತು ಸಾಕಷ್ಟು ಪ್ರಮಾಣದಲ್ಲಿ ಕಲಬೆರಕೆಯಾಗಿ ಬರುತ್ತಿದ್ದವು ಆದರೆ ಬಿಜೆಪಿ ಸಕರ್ಾರ ಅಸ್ಥಿತ್ವಕ್ಕೆ ಬಂದ ಮೇಲೆ ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಎಲ್ಲಿಯೂ ಫಟರ್ಿಲೈಸರಗಳ ಕೊರತೆ ಆಗಿಲ್ಲ. ಈ ಬಜೆಟ್ನಲ್ಲಿ ಪ್ರತಿ ವರ್ಷ 6 ಸಾವಿರ ರೂಪಾಯಿ ರೈತರ ಖಾತೆಗಳಿಗೆ ನೇರವಾಗಿ ಹಾಕುವುದರ ಮೂಲಕ ಕೇಂದ್ರ ಸಕರ್ಾರಕ್ಕೆ ರೈತರ ಬಗ್ಗೆ ಕಾಳಜಿ ಇರುವುದು ಕಂಡು ಬರುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರ ಅರುಣ ಶಾಹಪುರ ಮಾತನಾಡಿ ನಿನ್ನೆ ಮಂಡಿಸಿದ ಕೇಂದ್ರ ಸಕರ್ಾರದ ಬಜೆಟ್ನ್ನು ನಾವೆಲ್ಲರೂ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಮಾನ್ಯ ಚಂದ್ರಶೇಖರ ಪ್ರಧಾನ ಮಂತ್ರಿ ಆಗಿದ್ದಾಗ ದೇಶದ ಬಂಗಾರವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಒತ್ತಿ ಇಟ್ಟು ಸಾಲ ತಂದಿದ್ದನ್ನು ಮತ್ತು ಕಳೆದ ಯುಪಿಎ ಸಕರ್ಾರದ ಹತ್ತು ವರ್ಷಗಳಲ್ಲಿ ಮಾಡಿದ ಆಥರ್ಿಕ ಅವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಆದರೆ ನಮ್ಮ ಬಿಜೆಪಿ ಸಕರ್ಾರ ಬಂದ ಮೇಲೆ ದೇಶದ ಬಹುಪಾಲು ಸಾಲವನ್ನು ತಿರಿಸಿ ಕಳೆದ 5 ವರ್ಷಗಳಲ್ಲಿ ದೇಶವನ್ನು ಸದೃಡಗೊಳಿಸಿ ಭಾರತವನ್ನು ಜಗತ್ತೀನಲ್ಲೆ ಬಲಿಷ್ಠ ರಾಷ್ಟ್ರವನ್ನಾಗಿಸುವ ಕನಸು. ಸನ್ಮಾನ್ಯ ನರೇಂದ್ರ ಮೋದಿ ಅವರಿಗೆ ಇದೆ. ಈ ಬಾರಿಯು ಕೂಡ ಬಿಜೆಪಿಗೆ ನಾವು ಮತ ನೀಡುತ್ತೆವೆ ಎಂಬ ಪ್ರತಿಕ್ರಿಯೆಗಳು ವ್ಯಕ್ತ ಮಾಡುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಕವಟಗಿ ಮಾತನಾಡಿ ಕೇಂದ್ರ ಸಕರ್ಾರವು ನಿನ್ನೆ ಮಂಡಿಸಿದ 2019-20ನೇ ವರ್ಷದ ಕೇಂದ್ರ ಸಕರ್ಾರದ 6ನೇ ಪೂರ್ಣ ಪ್ರಮಾಣದ ಬಜೆಟ್ ಇವತ್ತು ವಿತ್ತ ಮಂತ್ರಿಗಳಾದ ಪಿಯುಷ್ ಗೋಯಲ್ ಅವರು ಮಂಡಿಸಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಕರ್ಾರ ಉತ್ತಮ ಆಡಳಿತ ನೀಡಿದೆ ಎಂದು ಕಂಡು ಬರುತ್ತದೆ. ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದಕ್ಕೆ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸುತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಜುಗೌಡ ಪಾಟೀಲ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಆರ.ಎಸ್.ಪಾಟೀಲ ಕುಚಬಾಳ, ಚಿದಾನಂದ ಚಲವಾದಿ, ರಾಜು ಬಿರಾದಾರ, ಶಿವರುದ್ರ ಬಾಗಲಕೋಟ, ಪಾಲಿಕೆ ಸದಸ್ಯರಾದ ರಾಹುಲ ಜಾಧವ, ಉಮೇಶ ವಂದಾಲ, ಶಿವಾನಂದ ಭುಯ್ಯಾರ, ಗೋಪಾಲ ಘಟಕಾಂಬಳೆ, ಎಮ್.ಎಸ್.ಕರಡಿ, ಭಾಗಪ್ಪಾ ಕನ್ನೊಳ್ಳಿ, ಮಳುಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಾನಂದ ಮಖನಾಪೂರ, ಸಂಗಮೇಶ ಹೌದೆ, ರಮೇಶ ಪಡಸಲಗಿ, ಕೃಷ್ಣಾ ಗುನ್ನಾಳಕರ, ಮಲ್ಲಮ್ಮಾ ಜೋಗುರ್, ಗೀತಾ ಕುಗನೂರ, ಮಂಜುಳಾ ಅಂಗಡಿ, ಭಾರತೀ ಸೂರ್ಯವಂಶಿ, ಲಕ್ಷ್ಮೀ ಕನ್ನೊಳ್ಳಿ, ಶಾಂತಾ ಉತ್ಲಾಸ್ಕರ, ಭಾರತೀ ಭುಯ್ಯಾರ, ಛಾಯಾ ಮಶಿಯಣ್ಣವರ, ಸುಮಂಗಲಾ ಕೋಟಿ, ಶಶಿಕಲಾ ಈಜೇರಿ, ಚಿದಾನಂದ ಔರಂಗಾಬಾದ, ಸತೀಶ ಡೊಬಳೆ, ವಿಠ್ಠಲ ನಡುವಿನಕೇರಿ, ಉಮೇಶ ವೀರಕರ್, ಸಂಗಮೇಶ ಉಕ್ಕಲಿ, ವಿಜಯ ಜೋಶಿ, ರಾಕೇಶ ಕುಲಕಣರ್ಿ, ಹವರ್ಿ ಬಿರಾದಾರ, ಅಜಿತ್ ಹಿರೇಮಠ, ವಿರೇಶ ಕವಟಗಿ, ಗುರುರಾಜ ದೇಶಪಾಂಡೆ, ಬಸವರಾಜ ಬಿರಾದಾರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.