ಸಾಯಿ ಬುಡೋಕಾನ್ ಕರಾಟೆ ಕ್ಲಬ್ ನಲ್ಲಿ ಬ್ರುಸ್ಲಿಯರ್ ರವರ ಜನ್ಮದಿನ ಆಚರಣೆ
ಕೊಪ್ಪಳ 28: ಕರಾಟೆ ಜನಕನಾದ ಬ್ರುಸ್ಲಿಯರ್ ರವರ 84ನೇ ಜನ್ಮದಿನಾಚರಣೆಯನ್ನು ನಗರದಲ್ಲಿ ಸಾಯಿ ಬುಡೋಕಾನ್ ಕರಾಟೆ ಕ್ಲಬ್ ವತಿಯಿಂದ ಆಚರಿಸಲಾಯಿತು, ಕರಾಟೆ ಕ್ಲಬ್ಬಿನ ಮುಖ್ಯಸ್ಥರಾದ ಶ್ರೀಕಾಂತ್ ಕಲಾಲ್ ರವರು ಬ್ರುಸ್ಲಿ ಯರ ರವರ ಬಗ್ಗೆ ಮತ್ತು ಅವರ ಜೀವನ ಚರಿತ್ರೆ ಕುರಿತು ಶಿಬಿರಾರ್ಥಿ ಕರಾಟೆ ಪಟುಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭ ದಲ್ಲಿ ಕರಾಟೆ ಪಟುಗಳಾದ ಕುಮಾರಿ ಐಶ್ವರ್ಯ ಕಲಾಲ್, ಮೌಲ ಸೇರಿದಂತೆ ಇತರ ಕರಾಟೆ ಪಟುಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.