ಹಾರೂಗೇರಿಯಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಕಂಚಿನ ಮೂರ್ತಿ ಪ್ರತಿಷ್ಠಾಪನೆ
Bronze statue of revolutionary hero Sangolli Rayanna installed in Harugeri
ಹಾರೂಗೇರಿಯಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಕಂಚಿನ ಮೂರ್ತಿ ಪ್ರತಿಷ್ಠಾಪನೆ
ಹಾರೂಗೇರಿ, 26 : ಕಷ್ಟಪಟ್ಟು ಓದಿಸಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಶ್ರಮಿಸಿದ ತಮ್ಮ ತಂದೆ-ತಾಯಿಗಳ ಹೆಸರು ಚಿರಸ್ಥಾಯಿಗೊಳಿಸಲು ಹಾರೂಗೇರಿಯಲ್ಲಿ ಸುಮಾರು 17ಲಕ್ಷರೂ. ಮೌಲ್ಯದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಲೇಖಕ ಬಿ.ಎ.ಜಂಬಗಿ ದಂಪತಿಗಳು ಬದುಕಿನ ಸಾರ್ಥಕತೆ ಮೆರೆದಿದ್ದಾರೆ ಎಂದು ಕೌಲಗುಡ್ಡದ ಶ್ರೀ ಅಮರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರವಿವಾರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸಮಾಜದ ಹೆಸರಿನಲ್ಲಿ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಸ್ವಾರ್ಥ ಜಗತ್ತಿನಲ್ಲಿ ಬಿ.ಎ.ಜಂಬಗಿ ದಂಪತಿಗಳು ತಾವು ಶ್ರಮಪಟ್ಟ ಹಣವನ್ನು ಸಮಾಜ ಸೇವೆಗೆ ನೀಡಿ, ಮಹನೀಯರಾಗಿದ್ದಾರೆ. ತಾಯಿ ಮತ್ತು ಗುರುವಿನ ಮಾತನ್ನು ಯಾರು ಮೀರುವುದಿಲ್ಲವೋ ಅವರು ಜಗತ್ತಿನಲ್ಲಿ ಯುಗಪುರುಷರಾಗುತ್ತಾರೆ ಎಂದರು.
ಲೇಖಕ ಬಾಲಕೃಷ್ಣ ಜಂಬಗಿ ಆಶಯ ನುಡಿಗಳನ್ನಾಡುತ್ತ ಸಮಾಜದಲ್ಲಿನ ಡೊಂಗಿ ಸಾಧಕರು ಹಂದಿಗೆ ಸಮಾನ. ಸಮಾಜದ ವಿಷಯ ಬಂದಾಗ ರಾಜಕಾರಣ ಮಾಡಬಾರದು. ಜೀವನದಲ್ಲಿ ಯಶಸ್ವಿಯಾಗಲು ಸಮಾಜಕ್ಕಾಗಿ ತ್ಯಾಗ ಮಾಡಬೇಕು. ಸಂಗೋಳ್ಳಿ ರಾಯಣ್ಣ ಕಂಚಿನ ಮೂರ್ತಿ ಸ್ಥಾಪನೆಯ ಮೂಲಕ ಸಮಾಜವನ್ನು ಒಂದು ಗೂಡಿಸುವುದು ನನ್ನ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು. ಜಿಲ್ಲಾ ಕೆಪಿಸಿಸಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಯಣ್ಣ ಜನ್ಮಸ್ಥಳದಲ್ಲಿ ಅವರ ಹೆಸರಿನಲ್ಲಿ 268ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆಯನ್ನು ತೆರೆದಿದ್ದಾರೆ. ಮುಂದಿನ ರಾಜಕಾರಣಿಗಳು ರಾಷ್ಟ್ರಾದ್ಯಂತ ಸಂಗೋಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪಿಸಬೇಕೆಂದರು.
ಕಾಂಗ್ರೆಸ್ ಮುಖಂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ರಾಹುಲ್ ಜಾರಕಿಹೊಳಿ, ಶಾಸಕ ಮಹೇಂದ್ರ ತಮ್ಮಣ್ಣವರ, ಮಾಜಿ ಶಾಸಕ ಪಿ.ರಾಜೀವ್, ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾತನಾಡಿದರು. ಈವೇಳೆ ಸ್ವಂತ ಖರ್ಚಿನಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿಯನ್ನು ಮಾಡಿಸಿದ ಬಿ.ಎ.ಜಂಬಗಿ ದಂಪತಿ ಮತ್ತು ಪರಿವಾರದವರನ್ನು ಗಣ್ಯರು ಗೌರವಿಸಿ, ಅಭಿನಂದಿಸಿದರು. ನಂತರ ಮೂರ್ತಿ ಕಲಾವಿದ ನಂದಕುಮಾರ ಚಂದರಗಿ, ಇಂಜೀನೀಯರ ಪ್ರದ್ಯುಮ್ನಕುಮಾರ ಬದ್ನಿಕಾಯಿ ಮತ್ತು ಸಮಾಜದ ಸಾಧಕರನ್ನು ಸತ್ಕರಿಸಲಾಯಿತು.
ಹಡಗಿನಾಳದ ಶ್ರೀ ಮುತ್ತೇಶ್ವರ ಸ್ವಾಮೀಜಿ, ಪ್ರತಾಪರಾವ ಪಾಟೀಲ, ಅಮರಸಿಂಹ ಪಾಟೀಲ, ಐ.ಆರ್.ಮಠಪತಿ, ಕರೆಪ್ಪ ಓಲೇಕಾರ, ಜಿನ್ನಪ್ಪ ಅಸ್ಕಿ, ಎನ್.ಎಸ್.ಚೌಗಲಾ, ಡಾ.ಎಲ್.ಎಸ್.ಜಂಬಗಿ, ತಹಸೀಲ್ದಾರ ಮಹದೇವ ಸನಮೂರೆ, ಸದಾಶಿವ ದೇಶಿಂಗೆ, ತಾಲೂಕು ಕಸಾಪ ಅಧ್ಯಕ್ಷ ಈರಣ್ಣಗೌಡ ಪಾಟೀಲ, ವಸಂತ ಲಾಳಿ, ಮಾಲಿಂಗ ಸಾಯನ್ನವರ, ರಾಮಣ್ಣ ಗಸ್ತಿ, ಡಿ.ಎಸ್.ನಾಯಿಕ, ಅಜ್ಜಪ್ಪ ಕುರಿ, ಎಸ್.ಎ.ದಟವಾಡ, ತಮ್ಮಣ್ಣಿ ಕುರಿ, ಬಿ.ಬಿ.ಮುಗಳಿಹಾಳ, ಬಿ.ಆರ್.ಆಜೂರೆ, ಸಿದ್ದಪ್ಪ ಹಾಡಕಾರ, ಗೀರೀಶ ದರೂರ, ಧರೆಪ್ಪ ಅಥಣಿ, ಸುರೇಶ ಐಹೊಳೆ, ಡಾ.ರವಿ ಇಂಚಲಕರಂಜಿ, ವಸಂತ ಅಲಖನೂರ, ಅಪ್ಪಾಸಾಬ ಸರಿಕರ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಸಿದ್ದಪ್ಪ ಬನಾಜ ಸ್ವಾಗತಿಸಿದರು. ಭೀಮರಾವ ಘಂಟಿ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 