ಅಲೆಮಾರಿ ಜನಾಂಗದೊಂದಿಗೆ ಬೊಮ್ಮಾಯಿ ಅವರ ಹುಟ್ಟುಹಬ್ಬ ಬದುಕಿಗೆ ಸ್ಪೂರ್ತಿ ನೀಡಿದೆ : ಮ್ಯಾಗೇರಿ
ಶಿಗ್ಗಾವಿ 29: ಅಲೆಮಾರಿ ಜನಾಂಗದೊಂದಿಗೆ ಬೊಮ್ಮಾಯಿ ಅವರ ಹುಟ್ಟುಹಬ್ಬ ಆಚರಣೆ ನಮ್ಮ ಬದುಕಿಗೆ ಸ್ಪೂರ್ತಿ ನೀಡಿದೆ ಎಂದು ನಿಕಟ ಪೂರ್ವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ 65ನೆಯ ಹುಟ್ಟುಹಬ್ಬವನ್ನು ಮಾರುತಿ ನಗರದ ಅಲೆಮಾರಿ ಕುಟುಂಬಗಳ ಹೆಣ್ಣು ಮಕ್ಕಳಿಗೆ ಬಟ್ಟೆ ವಿತರಿಸಿ ಮಕ್ಕಳಿಗೆ ಸಿಹಿ ವಿತರಿಸಿ ಹಾಲು ವಿತರಿಸಿ ಮಾತನಾಡಿದ ಅವರು ಮನುಷ್ಯರಾದ ಮೇಲೆ ವೇಳೆ ವ್ಯರ್ಥ ಮಾಡದೆ ಸೋಮಾರಿಯಾಗದೆ ಮಾಡುವ ಕಾಯಕ ಯಾವುದೇ ಇರಲಿ ಮೇಲು ಕೀಳು ಎನ್ನದೆ ಪ್ರತಿ ನಿತ್ಯ ಸಮಯ ಪ್ರಜ್ಞೆ ಮತ್ತು ನಿಯತ್ತಿನಿಂದ ಹಳ್ಳಿ ಹಳ್ಳಿಗೆ ತಿರುಗಿ ದುಡಿದು ಬಂದು ಕುಟುಂಬದ ಸರ್ವ ಸದಸ್ಯರೊಂದಿಗೆ ಗುಡಿಸಿಲಲ್ಲಿ ಕುಳಿತು ಉಂಡ ಖುಷಿ ಅರಮನೆಯಲ್ಲಿ ಸಿಂಹಾಸನದ ಮೇಲೆ ಕುಳಿತು ಉಂಡರೂ ಸಿಗುವುದಿಲ್ಲ ಎನ್ನುವುದನ್ನು ಅರಿಯಬೇಕಾದರೆ ಇಂತಹ ಅಲೆಮಾರಿ ಜನಾಂಗದೊಂದಿಗೆ ಕಾಲ ಕಳೆದಾಗ ತಿಳಿಯುತ್ತದೆ. ಇಂದು ಬಸವರಾಜ್ ಬೊಮ್ಮಾಯಿ ಅವರ ಹುಟ್ಟುಹಬ್ಬ ನಮ್ಮೆಲ್ಲರಿಗೂ ಭಾವೈಕ್ಯತೆಯ ಬದುಕಿಗೆ ಸ್ಪೂರ್ತಿ ನೀಡಿತು ಎಂದರು. ಈ ಸಂದರ್ಭದಲ್ಲಿ ಕೆಎಂಎಫ್ ಉಪಾಧ್ಯಕ್ಷ ಬಸನಗೌಡ್ರ ಮೇಲಿನಮನಿ, ಪ್ರಥಮ ದರ್ಜೆ ಗುತ್ತಿಗೆದಾರ ಮಂಜುನಾಥ ಕಾರಡಗಿ, ಮುತ್ತು ಎಲಿಗಾರ. ಪ್ರಶಾಂತ್ ಬಡ್ಡಿ, ಸಂತೋಷ ದೊಡ್ಡಮನಿ,ಮಂಜುನಾಥ ಮಿರ್ಜಿ, ಶಂಕರ ಮುಂದಿನಮನಿ. ಲಿಂಬುನಗೌಡ್ರು ಪಾಟೀಲ. ಸಂತೋಷ್ ಕಟ್ಟಿಮನಿ. ಮಾದೇವ ಹಡಪದ.ಫಕ್ಕೀರ ಗೌಡ ಪಾಟೀಲ್.ಸಂತೋಷ ದೊಡ್ಡಮನಿ,ಕೃಷ್ಣ ಬಂಡಿವಡ್ಡರ, ವಿಜಯ ಕಳ್ಳಿಮನಿ ಸೇರಿದಂತೆ ಅನೇಕ ಮುಖಂಡರು ಪದಾಧಿಕಾರಿಗಳು ಅಭಿಮಾನಿಗಳು ಪಾಲ್ಗೊಂಡಿದ್ದರು.