ಕಣ್ಣು ಮುಚ್ಚಿ ಕುಳಿತ ಪ್ರಾಣಿ ದಯಾ ಸಂಸ್ಥೆ
Blindfolded animal charity
ಯಮಕನಮರಡಿ 05 : ಇತ್ತಿಚಿನ ದಿನಗಳಲ್ಲಿ ಮತ್ತೆ ಪ್ರಾರಂಭವಾಗಿದೆ ಮುಗ್ದ ಪ್ರಾಣಿಗಳಿಗೆ ಹೊಂಸೆ ಕೊಡುವ ಕಾರ್ಯಕ್ರಮಗಳು ಸರಾಗವಾಗಿಯೇ ನಡೆದಿವೆ ಹಳ್ಳಿ ಪಟ್ಟನಗಳಲ್ಲಿ ನಡೆಯುವ ಜಾತ್ರೇ ಸಮಾರಂಭಗಳಲ್ಲಿ ಎತ್ತಿನ ಗಾಡಿ ಶರ್ಯತ್ತು ಆಯೋಜಿಸಿ ಮನಸ್ಸಿಗೆ ಬಂದಂತೆ ಬೆಳೆಬಾಳುವ ಎತ್ತುಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಹೊಡೆದು ಬಡೆದು ತಮ್ಮ ಸ್ವಾರ್ಥಕ್ಕಾಗಿ ಹಣ ಗಳಿಸಿ ಮುಗ್ದ ಪ್ರಾಣಿಗಳನ್ನು ಬಲಿ ಕೊಡುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನಕ್ಕೆ ಬೆಸರವಾಗುತ್ತದೆ. ಆದರೇ ಇಂತಹ ಸ್ಪರ್ದೇಗಳಿಗೆ ಪ್ರಾಣಿ ದಯಾ ಸಂಸ್ಥೆ ಆಗಲಿ ಪೋಲಿಸ ಇಲಾಖೆಗಳಾಗಲಿ ಯಾಕೇ ಕಡಿವಾಣ ಹಾಕುತ್ತಿಲ್ಲ?ಪೋಲಿಸ ಠಾಣೆಗಳ ಸಮೀಪದಲ್ಲಿಯೇ ಎತ್ತಿನ ಗಾಡಿಗಳ ಸ್ಪರ್ದೇ ಇರುತ್ತದೆ. ಆದರೂ ಸಹಿತ ಅವರು ಕಣ್ಣು ಮುಚ್ಚಿ ಕುಳಿತಿರುತ್ತಾರೆ.
ಕೆಲ ರಾಜಕೀಯ ವ್ಯಕ್ತಿಗಳು ಎತ್ತಿನ ಗಾಡಿ ಸ್ಪರ್ದೇ ಮಾಡಲು ಕುಮ್ಮಕ್ಕು ನಿಡುತ್ತಾರೆ. ಇಂತಹವರನ್ನು ಪೋಲಿಸ ಇಲಾಖೆಯಾಗಲಿ ಪ್ರಾಣಿ ದಯಾ ಸಂಸ್ಥೆಗಳಾಗಲೀ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಸನಾತನ ದರ್ಮದಲ್ಲಿ ಎತ್ತುಗಳನ್ನು ಬಸವಣ್ಣ ನಂದಿ ಎಂದು ಪೂಜಿಸುತ್ತಾರೆ. ಅಲ್ಲದೆ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ ಆದರೇ ದಯವಿಲ್ಲದ ದರ್ಮಯಾವುದಯ್ಯ ದಯವೇ ದರ್ಮದ ಮೂಲವಯ್ಯು ಎಂಬ ವಚನಗಳನ್ನು ಇತ್ತಿಚಿನ ರಾಜಕೀಯ ಮುಖಂಡರು ಗಾಳಿಗೆ ತೂರುತ್ತಿದ್ದಾರೆ. ಕೆಲ ಪೋಲಿಸ ಇಲಾಖೆಗಳು ತಮ್ಮ ಕಾರ್ಯಕ್ರಮದಲ್ಲಿ ಪ್ರಾಣಿಗಳ ಹಿಂಸೆ ಮಾಡುವವರ ವಿರುದ್ದ ಭಾಷಣ ಮಾಡುತ್ತಾರೆ.
ಜೋತೆಗೆ ಇದನ್ನು ನಿಲ್ಲಿಸುವಿದಕ್ಕಾಗಿ ಸಮಾರಂಭದ ಮುಖ್ಯ ಅತಿಥಿ ಸ್ಥಾನದಲ್ಲಿದ್ದು ಮಾತನಾಡುತ್ತಾರೆ. ಆದರೂ ಸಹಿತ ಎತ್ತಿನ ಗಾಡಿಗಳ ಸ್ಪರ್ದೇಗಳು ಸರಾಗವಾಗಿಯೇ ನಡೆದಿರುತ್ತವೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂದು ಕತ್ತಲೆಯಲ್ಲಿ ಹುಡುಕುವುದಾಗಿದೆ ತಮ್ಮ ಸ್ವಾರ್ಥಕ್ಕಾಗಿ ಕೆಲ ಜನರು ತಮ್ಮ ಪ್ರತಿಷ್ಠಯನ್ನು ಉಪಯೋಗಿಸುತ್ತಾರೆ. ಕಾರಣ ಇಂತಹ ಸ್ಪರ್ದೆಗಳಿಗೆ ಅವಕಾಶ ನಿಡಬಾರದೆಂದು ಕೆಲ ಸನಾತನ ಧರ್ಮ ಒತ್ತಾಯಿಸುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 