ಬೈಕ್ ಕಳ್ಳನ ಬಂಧನ : 5 ವಾಹನ ವಶ
ಬೆಳಗಾವಿ 07: ಬೆಳಗಾವಿಯ ಶಹಾಪುರ ಪೊಲೀಸರು ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.
ಹೀರೋ ಹೋಂಡಾ ಸ್ಪ್ಲೆಂಡರ್ ಕಂಪನಿಯ 5 ಬೈಕ್ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಕಿಮ್ಮತ್ತು ಎರಡು ಲಕ್ಷದ ಎಂಟು ಸಾವಿರ ರೂ. ಆಗಿದೆ. ವಡಗಾವಿ ಮಲಪ್ರಭಾ ನಗರದ ಮೂಲತಃ ಖನಗಾವಿ ಬಿ.ಕೆ. ಗ್ರಾಮದ ಲಕ್ಷ್ಮಿಗಲ್ಲಿಯ ಬಾಲಕೃಷ್ಣ ಪರಸಪ್ಪ ಹೊಸಮನಿ (27)ಬಂಧಿತ ವ್ಯಕ್ತಿ.
ಶುಕ್ರವಾರ ಶಹಾಪುರ ಖಾಸಬಾಗ ಬಸವೇಶ್ವರ ವೃತ್ತದ ಬಳಿ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೈಕ್ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.