ಮೊಬೈಲ್ ಮತ್ತು ಅಂತರ್ಜಾಲ ಮಾಧ್ಯಮ ರಂಗಕ್ಕೆ ದೊಡ್ಡ ಸವಾಲು: ಯಾಳ್ಪಿ ವಲಿಬಾಷ
Biggest challenge for mobile and internet media sector: Yaalpi Valibasha
ಬಳ್ಳಾರಿ 06: ರಂದು ಜಿಲ್ಲೆಯಲ್ಲಿ ಪತ್ರಕರ್ತರು ಹಾಗೂ ಸಂಪಾದಕರು ವಿವಿಧ ರೀತಿಯ ಸುದ್ದಿಗಳು ಮತ್ತು ಕಾರ್ಯಕ್ರಮಗಳ ಜಾಹೀರಾತುಗಳ ಮೂಲಕ ಪತ್ರಿಕೆ ಹಾಗೂ ಮಾಧ್ಯಮಗಳನ್ನು ನಡೆಸುತ್ತಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಿಗೆ ಹಾಗೂ ಮಾಧ್ಯಮಗಳಿಗೆ ಜಾಹೀರಾತು ಕೂಡ ಕಡಿಮೆಯಾಗಿದ್ದು, ಮೊಬೈಲ್, ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪತ್ರಕರ್ತರ ಜೀವನ ಕಷ್ಟಕರವಾಗಿದೆ, ರಸ್ತೆಬದಿ ಅಥವಾ ಹಳ್ಳಿಗಳಲ್ಲಿನ ಸಣ್ಣ ಸಮಸ್ಯೆಗಳನ್ನೂ ಕೂಡ ತಕ್ಷಣವೇ ವಾಟ್ಸಪ್ ಅಥವಾ ಫೇಸ್ಬುಕ್ ಮೂಲಕ ಅಪ್ಲೋಡ್ ಮಾಡುವ ಪದ್ಧತಿ ಬಂದಿರುವುದರಿಂದ ಮುದ್ರಣ ಮಾಧ್ಯಮಗಳಿಗೆ ದೊಡ್ಡ ಸವಾಲು ಎದುರಾಗಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳಪಿ ವಲಿಬಾಶ ಅಭಿಪ್ರಾಯಪಟ್ಟರು.
ಅವರು ನಗರದ ಮರ್ಚೆಟ್ ಹೋಟೆಲ್ ನಲ್ಲಿ ಹೇಮಂತ್ ರಾಜ್ ಸಾರಥ್ಯದ ಸೂರ್ಯ ನ್ಯೂಸ್ ನ 2026ನೇ ಹೊಸ ವರ್ಷದ ಕ್ಯಾಲೆಂಡರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲೂ ಹೇಮಂತರಾಜ್ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಸಂಪರ್ಕದ ಮೂಲಕ ಸುದ್ದಿಗಳನ್ನು ಸಮರ್ಕವಾಗಿ ಪ್ರಸಾರ ಮಾಡುತ್ತಾ, ತಮ್ಮದೇ ಆದ ಸೂರ್ಯ ನ್ಯೂಸ್ ಮಾಧ್ಯಮವನ್ನು ಹಂತಹಂತವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಯುವ ಪತ್ರಕರ್ತರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿಯೂ ಅವರಿಗೆ ಗಟ್ಟಿಯಾಗಿ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕ ಯರಗುಡಿ ಮುದಿ ಮಲ್ಲಯ್ಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.ಕ್ಯಾಲೆಂಡರ್ ಬಿಡುಗಡೆ ನಂತರ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಂ. ಪಾಟೀಲ್ ಮಾತನಾಡಿ ಸೂರ್ಯ ನ್ಯೂಸ್ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ವತಿಯಿಂದ ಬಳ್ಳಾರಿ ಜಿಲ್ಲೆಯಿಂದ ಪ್ರಶಸ್ತಿ ಪಡೆದಿರುವಂತ ಡಾ.ಮುನಿಸ್ವಾಮಿ ಮತ್ತು ಚಾನೆಲ್ ಅಮರೇಶಪ್ಪ ಕುರುಗೋಡು ಮತ್ತು ನೂತನ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಯಾಳ್ಪಿ ವಲಿಬಾಷ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಜಾರ್ಪ,ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿಎಸ್.ಈರನಗೌಡ, ಧಾರ್ಮಿಕ ಜಾಗೃತರತ್ನ ಪ್ರಶಸ್ತಿ ಪುರಸ್ಕೃತ ಕುರುಗೋಡು ಚಾನಾಳ ಅಮರೇಶಪ್ಪ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಮುನಿಸ್ವಾಮಿ, ಬಿಸಿ ಚೈತನ್ಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ವರದಿಗಾರ ಗಿರಿ ಯಾದವ್, ಡಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಬಿ.ಎಂ. ಮಲ್ಲೇಶ್ವರಿ, ಕಾಂಗ್ರೆಸ್ ಮುಖಂಡರಾದ ಅತಾವುಲ್ಲಾ, ವಕೀಲ ಬಾದಾಮಿ ಶಿವಲಿಂಗ, ಚಲನಚಿತ್ರ ನಿರ್ದೇಶಕ ಕೃಷ್ಣ ಮೋಹನ್ ಶೆಟ್ಟಿ, ಸಂಗನಕಲ್ಲು ವಿಜಯ್, ಹಾಗೆಯೇ ಪತ್ರಕರ್ತರಾದ ಈ. ಜಿ.ರೆಡ್ಡಿ, ಕೆ.ಟಿ. ಹೊನ್ನೂರುಸ್ವಾಮಿ, ಮಲ್ಲಿಕಾರ್ಜುನ, ಸುನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 