ಯಲ್ಲಮ್ಮನ ಗುಡ್ಡದಲ್ಲಿ ಭರತ ಹುಣ್ಣಿಮೆ ಅಂಗವಾಗಿ ಬುಧವಾರ ಬೃಹತ್ ಜಾತ್ರೆ
ಉಗರಗೋಳ 12 : ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭರತ ಹುಣ್ಣಿಮೆ ಅಂಗವಾಗಿ ಬುಧವಾರ ಬೃಹತ್ ಜಾತ್ರೆಯೇ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯಗಳಿಂದ ಬಂದಿದ್ದ ಲಕ್ಷೊಪಲಕ್ಷ ‘ಭಕ್ತರು, ಯಲ್ಲಮ್ಮ ದೇವಿ ದರ್ಶನ ಪಡೆದು ಕೃತಾರ್ಥರಾದರು. ಯಲ್ಲಮ್ಮ ದೆವಿ ದೇವಸ್ಥಾನ ಅಭಿವೃದ್ಧಿ ಪ್ರಾಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ನಂತರ ಮೊದಲ ಬಾರಿ ಭರತ ಹುಣ್ಣಿಮೆ ಜಾತ್ರೆಗೆ ಯಲ್ಲಮ್ಮನ ಸನ್ನಿದಾನ ಸಾಕ್ಷಿಯಾುತು. ಪ್ರಾಧಿಕಾರ, ಮಂಡಳಿಯೊಂದಿಗೆ ಬೆಳಗಾವಿ ಜಿಲ್ಲಾಡಳಿತವೂ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಿತ್ತು.ಮಂಗಳವಾರ ಬೆಳಿಗ್ಗೆಯಿಂದಲೇ ಯಲ್ಲಮ್ಮನ ಸನ್ನಿಯತ್ತ ಭಕ್ತಸಾಗರ ಹರಿದುಬಂತು. ಬುದವಾರ ಬೆಳಿಗ್ಗೆ ವೇಳೆಗೆ ಇಡೀ ಗುಡ್ಡದ ಪರಿಸರದಲ್ಲಿ ಜನಸಾಗರವೇ ಕಂಡುಬಂತು. ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿತು. ಸುಡು ಬಿಸಿಲಲ್ಲೂ ಭಕ್ತರು ಸರದಿ ಸಾಲಿನಲ್ಲಿ ನಿಂತು ರೇಣುಕಾ ಯಲ್ಲಮ್ಮ ದರ್ಶನ ಪಡೆದರು. ದೇವಸ್ಥಾನದಿಂದ ಮುಖ್ಯದ್ವಾರದವರೆಗೂ ಸರದಿ ಸಾಲು ಕಂಡುಬಂತು. ಮಲಪ್ರಭಾ ನದಿ ಮಡಿಲಲ್ಲಿರುವ ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. ನಂತರ ಉರುಳುಸೇವೆ, ದೀಡ್ ನಮಸ್ಕಾರ ಹಾಕಿ ಅಮ್ಮನ ಕೃಪೆಗೆ ಪಾತ್ರವಾದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವಿಗೆ ಕೆಲವರು ಕಾಣಿಕೆಗಳನ್ನು ಅರ್ಿಸಿದರು.
ಗುಡ್ಡದ ಪರಿಸರದಲ್ಲಿ ಉಳಿದುಕೊಂಡಿದ್ದ ಭಕ್ತರು ಒಲೆ ಹೂಡಿ ಅಡುಗೆ ಮಾಡಿ ಬಗೆಬಗೆಯ ಖಾದ್ಯಗಳನ್ನು ಒಳಗೊಂಡ ನೈವೇದ್ಯ ತಯಾರಿಸಿದರು. ನಂತರದಲ್ಲಿ ಜೋಗತಿಯರ ಸಮ್ಮುಖದಲ್ಲಿ ಪರಡಿ ತುಂಬಿ, ಯಲ್ಲಮ್ಮನ ನಾಮಸ್ಮರಣೆ ಮಾಡಿ ಭಕ್ತಿ ಮೆರೆದರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೂ ಎಂಬ ಜೈಂಕಾರ ಮುಗಿಲು ಮುಟ್ಟಿತ್ತು. ಸಂಭ್ರಮದಲ್ಲಿ ಮುಳುಗಿದ್ದ ಯುವಜನರ ಪಡೆ ಭಂಡಾರದ ಓಕುಳಿಯಲ್ಲಿ ಮಿಂದೆದ್ದಿತು. ಇಡೀ ಗುಡ್ಡ ಹೊಂಬಣಕ್ಕೆ ತಿರುಗಿತ್ತು.ಕುಂಕುಮ-ಭಂಡಾರ, ತೆಂಗಿನಕಾು, ಬಾಳೆಹಣ್ಣು, ಕರ್ೂರ, ಖಣ, ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಬಹುತೇಕ ಅಂಗಡಿಗಳಲ್ಲಿ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಉತ್ತಮ ಆದಾಯ ಗಳಿಸಿದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿತು.ಚೌಡಕಿಯ ನಿನಾದದೊಂದಿಗೆ ಜೋಗತಿಯರ ನೃತ್ಯ ಮನಸೆಳೆುತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಜಾನಪದ ಕಲಾತಂಡಗಳ ಪ್ರದರ್ಶನ ಜಾತ್ರೆಗೆ ಮೆರುಗು ತಂದಿತು.ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ನಿರ್ವವಸಲು ಪೊಲೀಸ್ ಇಲಾಖೆ ಕ್ರಮ ವಹಿಸಿತ್ತು. ಗುಡ್ಡದ ಮಾರ್ಗದುದ್ದಕ್ಕೂ 1 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೇಕಾಬಿಟ್ಟಿಯಾಗಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ವಾಹನಗಳಲ್ಲಿ ತೆಗೆದುಕೊಂಡು ಹೋಗಲಾುತು. ಹಾಗಾಗಿ ಪ್ರತಿವರ್ಷದಂತೆ ಈ ವರ್ಷ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಕಾಡಲಿಲ್ಲ.
ಇನ್ನೂ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಚೈನ ಗೇಟ್‌ನಿಂದ ಯಲ್ಲಮ್ಮ ದೇವಸ್ಥಾನ ಆವರಣದವರೆಗೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಉಗರಗೋಳದಿಂದ ದೇವಸ್ಥಾನದವರೆಗೆ ತೆರಳುವವರಿಗಾಗಿ ಉಚಿತವಾಗಿ ಮಿನಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಯೊಬ್ಬರಿಗೂ ದೇವಿಯ ದರ್ಶನ ಸಿಗಲೆಂದು ಅಲ್ಲಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಾಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಮತ್ತಿತರರು ಇಡೀ ಗುಡ್ಡದಲ್ಲಿ ಸುತ್ತಾಡಿ ಮೂಲಸೌಕರ್ಯ ಪರೀಶೀಲಿಸಿದರು. ಕರ್ನಾಟಕ ಮಿಲ್ಕ್ ಫೆಡರೇಷನ್(ಕೆಎಂಎಫ್)ನವರು ಜಾತ್ರೆಗೆ ಬಂದ ಸಾವಿರಾರು ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಿಸಿದರು. ಗುಡ್ಡಕ್ಕೆ ಸಾಗುವ ಮಾರ್ಗದಲ್ಲಿದ್ದ ಕೃಷಿಭೂಗಳ ರೈತರು ಭಕ್ತರ ಸ್ನಾನ ಮತ್ತು ಜಾನುವಾರಗಳ ದಾಹ ನೀಗಿಸಲು ತಮ್ಮ ಕೊಳವೆಬಾವಿಗಳ ಮೂಲಕ ಉಚಿತವಾಗಿ ನೀರಿನ ವ್ಯವಸ್ಥೆ ಮಾಡಿದರು.ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ಹಾಗೂ ಭಕ್ತರ ಸಹಕಾರದಿಂದ ಈ ಬಾರಿ ವ್ಯವಸ್ಥಿತವಾಗಿ ಜಾತ್ರೆ ಮಾಡಿದ್ದೇವೆ ಎಂದು ಶಾಸಕ ವಿಶ್ವಾಸ ವೈದ್ಯ ಸುದ್ದಿಗಾರರಿಗೆ ತಿಳಿಸಿದರು.