ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ನಾಡಗೌಡರಿಂದ ಭೂಮಿ ಪೂಜೆ
Bhoomi Puja by MLA Nad Gowda for road improvement work
ತಾಳಿಕೋಟಿ 16: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2022- 23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯ ರೂ.210 ಲಕ್ಷ ಮೊತ್ತದ ಬಳಗಾನೂರದಿಂದ ಕೊಣ್ಣೂರ ಕ್ಯಾನಲ್ ದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕ ಅಪ್ಪಾಜಿ ನಾಡಗೌಡರು ಗುರುವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಕಳೆದ ಎರಡು ವರ್ಷಗಳಲ್ಲಿ ರೂ.200 ಕೋಟಿ ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ. ಕೆಲವರು ಕೇವಲ ರಾಜಕಾರಣಕ್ಕಾಗಿ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.
ಇಂಥವರ ಮಾತುಗಳನ್ನು ನೀವು ನಂಬಬೇಡಿ.ಇದು ಹಿಂದಿನ ಅವಧಿಯಲ್ಲಿಯೇ ಆಗಬೇಕಾದ ಕಾಮಗಾರಿ ಅನುದಾನ ಇಲ್ಲದೆ ಇರುವುದರಿಂದ ಬಹಳಷ್ಟು ವಿಳಂಬವಾಗಿದ್ದು ಇದೀಗ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಚಾಲನೆ ಕೊಟ್ಟಿದ್ದೇನೆ, ಕ್ಷೇತ್ರದಲ್ಲಿ ಹಿಂದಿನ ಅವಧಿಯ ಇಂತಹ 9 ಕಾಮಗಾರಿಗಳು ಇವೆ ನಾನು ಅವುಗಳನ್ನು ರದ್ದುಗೊಳಿಸದೆ ಮುಂದುವರಿಸಿದ್ದೇನೆ ಅಭಿವೃದ್ಧಿ ಕಾರ್ಯಗಳು ಯಾರೇ ಮಾಡಿದರು ಅದನ್ನು ನಾನು ವಿರೋಧಿಸುವುದಿಲ್ಲ ಅಭಿವೃದ್ಧಿಯಲ್ಲಿ ರಾಜಕಾರಣ ನನಗೆ ಬೇಕಾಗಿಲ್ಲ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕೆಂಬುದು ನನ್ನ ಧೋರಣೆಯಾಗಿದೆ ಎಂದ ಅವರು ಬಳಗಾನೂರದಿಂದ ಮಿಣಜಗಿ ಕೂಡು ರಸ್ತೆ ಅಭಿವೃದ್ಧಿಯ ಅಗತ್ಯವಿದ್ದು ಇದಕ್ಕಾಗಿ ಈಗಾಗಲೇ ರೂ.2 ಕೋಟಿ ಕಾಯ್ದಿರಿಸಿದ್ದು ಟೆಂಡರ್ ಹಂತದಲ್ಲಿದೆ ಆದಷ್ಟು ಬೇಗ ಆರಂಭಿಸಲಾಗುವುದು.
ಕ್ಷೇತ್ರದ ಜನರ ಸಾಕಷ್ಟು ಬೇಡಿಕೆಗಳಿವೆ ಆದರೆ ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುವುದು ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು. ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕ ಅಪ್ಪಾಜಿ ನಾಡಗೌಡರು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ಮಾತಿನಲ್ಲಿ ವಿಶ್ವಾಸ ಇಟ್ಟಂತವರು, ದ್ವೇಷ ರಾಜಕಾರಣ ಮಾಡದ ಪ್ರಚಾರ ಬಯಸದ ವ್ಯಕ್ತಿಗಳಾಗಿದ್ದಾರೆ ಬೇರೆಯವರಂತೆ ಸುಳ್ಳು ಆಶ್ವಾಸನೆಗಳನ್ನು ಅವರು ಕೊಡುವುದಿಲ್ಲ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳುತ್ತಾರೆ ಈಗಾಗಲೇ ಕ್ಷೇತ್ರದಲ್ಲಿ 200 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಇದರ ಸಂಪೂರ್ಣ ಮಾಹಿತಿಯನ್ನು ನಾನು ಕೊಡಬಲ್ಲೆ, ಸುಳ್ಳು ಹೇಳುವರನ್ನು ನಂಬದೇ ಶಾಸಕರೊಂದಿಗೆ ನಾವೆಲ್ಲರೂ ಸಹಕರಿಸೋಣ ಎಂದರು.ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೇ.ಮೂ. ಶಾಂತಯ್ಯ ಹಿರೇಮಠ, ಮುಖಂಡರಾದ ನಿಂಗನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಬಸನಗೌಡ ಬಗಲಿ,ಮಲ್ಲಣ್ಣ ದೋರನಹಳ್ಳಿ,ಚೆನ್ನಣ್ಣ ಅಲದಿ, ಶಿವಣ್ಣ ಕಡಕೋಳ,ನಿವೃತ್ತ ಶಿಕ್ಷಕ ಹೂಗಾರ, ಪಿಕೆಪಿಎಸ್ ಅಧ್ಯಕ್ಷ ನೀಲಪ್ಪ ನರಸಣಗಿ, ಮಲ್ಲನಗೌಡ ಬಿರಾದಾರ, ಸಂಗನಗೌಡ ಅಸ್ಕಿ, ಗುತ್ತಿಗೆದಾರ ಬಿಎಸ್ ಪಾಟೀಲ (ವಣಕಿಹಾಳ),ಎಇಇ ಜ್ಞಾನೇಶ ಮುರಾಳ, ಜೆಇ ವಿನಯ ಹಳ್ಳೂರ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 