ಡಿಸಿಸಿ ಬ್ಯಾಂಕಿನ 7 ಜನ ನಿರ್ದೇಕರಿಗೆ ಅನರ್ಹತೆಗೆ ಭೀಮಪ್ಪ ಗಡಾದ ಒತ್ತಾಯ

ಡಿಸಿಸಿ ಬ್ಯಾಂಕಿನ  7 ಜನ ನಿರ್ದೇಕರಿಗೆ ಅನರ್ಹತೆಗೆ ಭೀಮಪ್ಪ ಗಡಾದ ಒತ್ತಾಯ Bhimappa Gada demands disqualification of 7 directors of DCC Bank

ಬೆಳಗಾವಿ, 16  : ಭಾರತೀಯ ರಿಸರ್ವ್‌ ಬ್ಯಾಂಕಿನ  ಹೊಸ ತಿದ್ದುಪಡಿ ಕಾಯ್ದೆ ಈಗ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ’ಬ್ಯಾಂಕಿನಲ್ಲಿ ಸಂಚಲನ ಮೂಡಿಸಿದೆ. ಸತತ 10 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಹೋರಾಟಕ್ಕೆ ಇಳಿದಿದ್ದಾರೆ. ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.ಭಾರತೀಯ ರಿಸರ್ವ್‌ ಬ್ಯಾಂಕ ತಿದ್ದುಪಡಿ ನಿರ್ದೇಶನಗಳು 2026ರ ಅನ್ವಯ, ಸಹಕಾರಿ ಹಾಗೂ ಅರ್ಬನ ಬ್ಯಾಂಕಗಳನ್ನು  ನಿರ್ದೇಶಕರು ಸತತವಾಗಿ ಕೇವಲ 10 ವರ್ಷಗಳ ಕಾಲ ಮಾತ್ರ ಅಧಿಕಾರದಲ್ಲಿರಲು ಅವಕಾಶವಿದೆ. 

 ಈ ಕಾಯ್ದೆಯು 2025ರ ಆಗಸ್ಟ್‌ ನಿಂದಲೇ  ಜಾರಿಗೆ ಬಂದಿದ್ದರೂ, ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ನಿಯಮ ಉಲ್ಲಂಘಿಸಿ ಹತ್ತು ವರ್ಷ ಮೀರಿದವರಿಗೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಗಂಭೀರ ಆರೋಪಿಸಿ, ರಾಜಕೀಯ ಒತ್ತಡಕ್ಕೆ ಮಣಿದು ಸಹಕಾರಿ ಇಲಾಖೆ ಅಧಿಕಾರಿಗಳು ಈ ಕಾಯ್ದೆ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ಹೋರ ಹಾಕಿದರು. 

   ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಪ್ರಮುಖ ನಾಯಕರಾದ ರಮೇಶ್ ಕತ್ತಿ, ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ ಮತ್ತು ಅಪ್ಪಾಸಾಹೇಬ ಕುಲಗೋಡ ಅವರು ನಿಯಮದ ಪ್ರಕಾರ ಅನರ್ಹಗೊಳ್ಳಬೇಕು ಎಂದು ಗಡಾದ ಒತ್ತಾಯಿಸಿದ್ದಾರೆ.ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದ್ದು, ಒಂದು ತಿಂಗಳೊಳಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇದು ಕೇವಲ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಗೆ  ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೆ  ಅನ್ವಯವಾಗಲಿದ್ದು, ದೊಡ್ಡ ಮಟ್ಟದ ರಾಜಕೀಯ ತಲ್ಲಣಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.