ಮುಚ್ಚಿಟ್ಟ ಚಾರಿತ್ರಿಕ ಸತ್ಯಗಳನ್ನು ನಿರ್ಭೀತವಾಗಿ ಹೊರತೆಗೆದು ತೋರಿಸಿದವರು ಭೈರ್ಪನವರು: ಎಲ್. ಎಸ್. ಶಾಸ್ತ್ರಿ
Bhairava was the one who fearlessly exposed hidden historical truths: L. S. Shastri
ಬೆಳಗಾವಿ 06: ಕೆಲವು ನಿರ್ದಿಷ್ಟ ಹಿತಾಸಕ್ತಿಯ ಜನ ತಮ್ಮದೇ ಆದ ಕಾರಣಗಳಿಗಾಗಿ ಮುಚ್ಚಿಟ್ಟ ಚಾರಿತ್ರಿಕ ಸತ್ಯಗಳನ್ನು ತಮ್ಮ ಕಾದಂಬರಿಗಳ ಮೂಲಕ ನಿರ್ಭೀತಿಯಿಂದ ಹೊರತೆಗೆದು ತೋರಿಸಿದವರು ಎಸ್. ಎಲ್. ಭೈರ್ಪನವರು ಎಂದು ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರು ಹೇಳಿದರು. ಕೆಎಲ್‌ಇ ಸಂಸ್ಥೆಯ ನಿಪ್ಪಾಣಿ ಜಿ. ಐ. ಬಾಗೇವಾಡಿ ಕಲಾ ವಿಜ್ಞಾನ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗ ಏರಿ್ಡಸಿದ್ದ ವಿಶೇಷ ಉಪನ್ಯಾಸದಲ್ಲಿಂದು ಭೈರ್ಪನವರ ಸಾಹಿತ್ಯದಲ್ಲಿನ ಸತ್ಯಶೋಧನೆಯ ಪ್ರಯತ್ನ ಎಂಬ ವಿಷಯವಾಗಿ ಮಾತನಾಡಿದ ಶಾಸ್ತ್ರಿಯವರು ಭೈರ್ಪನವರ ಆವರಣ ಕಾದಂಬರಿ ಸತ್ಯಕ್ಕೆ ಹಿಡಿದ ಕನ್ನಡಿ. ಎಲ್ಲವನ್ನೂ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಅನಾವರಣಗೊಳಿಸಿದ ಅವರ ಆಳವಾದ ಅಧ್ಯಯನ ಅದರಲ್ಲಿ ಪ್ರತಿಬಿಂಬಿತವಾಗಿದ್ದು, ಈ ಕೃತಿಯ ಮೂಲಕ ಭಾರತೀಯ ಜಡ ಮನಸ್ಸುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ. 74 ಮರುಮುದ್ರಣಗಳನ್ನು ಕಂಡಿರುವುದೇ ಅದರ ಅಪಾರ ಜನಪ್ರಿಯತೆಗೆ ಸಾಕ್ಷಿ ಎಂದರು.
ಭೈರ್ಪನವರನ್ನು ಕೇವಲ ಕನ್ನಡಕ್ಕೆ ಸೀಮಿತಗೊಳಿಸಲು ಬರುವುದಿಲ್ಲ. ಅವರು ವಿಶ್ವಸಾಹಿತಿ. ಕನ್ನಡ ಸಾಹಿತ್ಯದಲ್ಲಿ ಅವರಷ್ಟು ವ್ಯಾಪಕ ಓದುಗರನ್ನು ಪಡೆದವರು ಇನ್ನೊಬ್ಬರಿಲ್ಲ. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಕಷ್ಟ ಅನುಭವಿಸಿದರೂ ಧೈರ್ಯಗೆಡದೆ ಎಲ್ಲ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಮೇಲೆದ್ದು ಬಂದವರು ಭೈರ್ಪನವರು. ಅವರ ಅಸಾಧಾರಣ ಸಾಮರ್ಥ್ಯಕ್ಕೆ ಅಧ್ಯಯನ ಮತ್ತು ಲೋಕಾನುಭವಗಳೇ ಕಾರಣ ಎಂದು ಶಾಸ್ತ್ರಿಯವರು ಹೇಳಿದರು. ಪ್ರಾಚಾರ್ಯ ಡಾ. ಎಂ. ಎಂ. ಹುರಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಎಂ ಜನಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರೊ. ಶಂಕರಮೂರ್ತಿ, ಡಾ. ಅತುಲಕುಮಾರ ಕಾಂಬಳೆ, ಪ್ರೊ. ನಾಯಕ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರೇ ಸ್ವಾಗತ, ಪರಿಚಯ, ನಿರೂಪಣೆ ಮತ್ತು ವಂದನಾರೆ್ಣ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 