ಭೈರ್ಪ ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ: ಡಾ. ಕಾಟ್ಕರ್
Bhairapa is a Marathi author who writes in Kannada: Dr. Katkar
ಭೈರ್ಪ ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ: ಡಾ. ಕಾಟ್ಕರ್
ಬೆಳಗಾವಿ 14: ಖ್ಯಾತ ಕಾದಂಬರಿಕಾರ ಭೈರ್ಪನವರು ಕನ್ನಡಕ್ಕಿಂತ ಮರಾಠಿ ಓದುಗ ಬಳಗ ಹೊಂದಿದ್ದು ಅವರ ಪ್ರೀತಿಗೆ ಪಾತ್ರರಾದವರು. ಭೈರ್ಪನವರ ಕೃತಿಗಳು ಕನ್ನಡಕ್ಕಿಂತ ಹೆಚ್ಚು ಮರಾಠಿ ಭಾಷೆಯಲ್ಲಿ ಮಾರಾಟವಾಗತ್ತವೆ. ಅದಕ್ಕೆ ಭೈರ್ಪನವರನ್ನು ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕರೆಂದು ಕರೆಯುತ್ತಾರೆ ಎಂದು ಹಿರಿಯ ಪತ್ರಕರ್ತ, ಲೇಖಕ ಡಾ. ಸರಜು ಕಾಟ್ಕರ್ ಇಂದಿಲ್ಲಿ ಹೇಳಿದರು.
ನಗರದ ಅಕಾಡಮಿ ಆಫ್ ಕಂಪರೇಟಿವ್ ಫಿಲಾಸಫಿ ಆಂಡ್ ರಿಲಿಜನ್ ಸಂಘಟನೆಯವರು ಹಿಂದವಾಡಿಯ ಗುರುದೇವ ರಾನಡೆದಲ್ಲಿ ಇದೇ ದಿ.13 ಸೋಮವಾರದಂದು ಖ್ಯಾತ ಕಾದಂಬರಿಕಾರ ಡಾ. ಎಸ್. ಎಲ್. ಭೈರ್ಪನವರ ನುಡಿ ನಮನ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕಾಟ್ಕರ್ ಮೇಲಿನಂತೆ ಅಭಿಪ್ರಾಯಪಟ್ಟರು.
ಅವರು ರಾಷ್ಟ್ರದ 23 ಭಾಷೆಗಳಲ್ಲಿ ಭೈರ್ಪನವರ ಎಲ್ಲ ಕೃತಿಗಳು ಭಾಷಾಂತರಗೊಂಡಿವೆ. ಇವರ ಪ್ರಸಿದ್ಧ ಕಾದಂಬರಿ ಪರ್ವ ರಷಿಯನ್, ಇಂಗ್ಲೀಷ ಅಲ್ಲದೇ ಚೀನಿ ಭಾಷೆಗೆ ಅನುವಾದಗೊಂಡಿವೆ. ಇವರೊಬ್ಬ ವಿಶ್ವ ಮಟ್ಟದ ಕಾದಂಬರಿಕಾರರು ಎಂದು ಹೇಳಿದರು.
ಡಾ. ರಾಮಕೃಷ್ಣ ಮರಾಠೆಯವರು ಮಾತನಾಡಿ ಡಾ.ಭೈರ್ಪನವರು ತುಂಬ ಕಷ್ಟದ ಜೀವನದಿಂದ ಮುಂದೆ ಬಂದವರು. ಬರಹಗಾರ ಹೇಗಿರಬೇಕು ಎಂಬುದಕ್ಕೆ ಅವರು ಮಾದರಿಯಾಗಿದ್ದರು ಎಂದು ಹೇಳಿದರು.
ಗುಂಡೇನಟ್ಟಿ ಮಧುಕರ ಮಾತನಾಡಿ ಭೈರ್ಪನವರು ಬೆಳಗಾವಿಗೆ ಬಂದಿದ್ದಾಗ ನಾನು ಅವರೊಂದಿಗೆ ಎರಡು ದಿನಗಳ ಕಾಲ ಇದ್ದೆ. ಅವರ ಪ್ರಶ್ನೆಗಳು ನನಗೆ ಹಲವಾರು ಹೊಸ, ಹೊಸ ವಿಷಗಳನ್ನು ತಿಳಿಸಿಕೊಟ್ಟಿದ್ದವು. ಅವರು ವಿಕ್ಷುಬ್ಧ ಸ್ವಭಾವದವರೆಂದು ಹೇಳುತ್ತಾರೆ ಆದರೆ ಆ ಅನುಭವ ನನಗೇನೂ ಆಗಲಿಲ್ಲ ಎಂದು ಹೇಳಿ ಅವರೊಂದಿಗೆ ಕಳೆದ ಕೆಲ ಪ್ರಸಂಗಗಳನ್ನು ಹಂಚಿಕೊಂಡರು.
ರಾ.ಚೆ. ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ, ಆರ್.ಎಸ್. ಎಸ್. ಪ್ರಾಂತ ಕಾರ್ಯನಿರ್ವಾಹಕ, ಕರ್ನಾಟಕ ಉತ್ತರ ಪ್ರಾಂತದ ರಾಘವೇಂದ್ರ ಕಾಗವಾಡ ಮಾತನಾಡಿದರು. ದಿ. ಎಸ್.ಎಲ್. ಭೈರ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರವಿ ಕೊಟಾರಗಸ್ತಿ, ಆರ್. ಜಿ. ಮುತಾಲಿಕ, ಸುಬ್ರಮಣ್ಯ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾರುತಿ ಝಿರಲಿ ವಂದಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 