ಲೋಕಾಪುರಗೆ ಅತ್ಯುತ್ತಮ ಸೇವಾ ಪದಕ
ಲೋಕದರ್ಶನ ವರದಿ
ಹಾವೇರಿ 06: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್. ಸಿ. ಸಿ. ಅಧಿಕಾರಿ ಲೆಫ್ಟಿನೆಂಟ್ ಬಸವರಾಜ ಎಮ್. ಲೋಕಾಪುರ ಅವರಿಗೆ ಅತ್ಯುತ್ತಮ ಸೇವಾ ಪದಕ ದೊರೆತಿದೆ. ಫೆ.02 ರಂದು ಬೆಂಗಳೂರಿನ ರಾಜ ಭವನದಲ್ಲಿ ಜರುಗಿದ ಕನರ್ಾಟಕ ಮತ್ತು ಗೋವಾ ಎನ್. ಸಿ. ಸಿ. ನಿದರ್ೇಶನಾಲಯ ಆಯೋಜಿಸಿದ್ದ 'ಡೆಪ್ಯುಟಿ ಡೈರೆಕ್ಟರ್ ಜನರಲ್-2019' ರ ಸನ್ಮಾನ ಸಮಾರಂಭದಲ್ಲಿ ರಾಜ್ಯಪಾಲರಾದ ಮಾನ್ಯಶ್ರೀ ವಾಜುಭಾಯ್ವಾಲಾ, ಬ್ರಿಗೇಡಿಯರ್ ಡಿ. ಎಮ್. ಪೂವರ್ಿಮಠ ಹಾಗೂ ಎರಡೂ ರಾಜ್ಯಗಳ ಉನ್ನತ ಅಧಿಕಾರಿಗಳು ಎನ್. ಸಿ. ಸಿ. ಸೇವಾವ್ಯಾಪ್ತಿಯನ್ನು ಪರಿಗಣಿಸಿ ಪ್ರಮಾಣ ಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿದರು. ಪ್ರಶಸ್ತಿ ವಿಜೇತರಿಗೆ ಕೆ.ಎಲ್.ಇ. ಸಂಸ್ಥೆಯ ಡಾ|| ಪ್ರಭಾಕರ ಬಿ. ಕೋರೆ ಮತ್ತು ಆಡಳಿತ ಮಂಡಳಿ, ಕಾಲೇಜು ಸ್ಥಾನಿಕ ಆಡಳಿತ ಮಂಡಳಿ, ಪ್ರಾಚಾರ್ಯರಾದ ಡಾ|| ಎಮ್. ಎಸ್. ಯರಗೊಪ್ಪ, ಪ್ರೊ. ಜೆ. ಆರ್. ಸಿಂಧೆ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಎನ್.ಸಿ.ಸಿ. ಕೆಡೆಟ್ಗಳು-ವಿದ್ಯಾಥರ್ಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 