ಬಳ್ಳಾರಿ ಪೊಲೀಸ್ ರನ್: ಮಾ.01 ರಂದು ಮ್ಯಾರಥಾನ್ ಮತ್ತು ವಾಕಥಾನ್
Bellary Police Run: Marathon and Walkathon on March 1st
ಬಳ್ಳಾರಿ 26: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜೆಎಸ್‌ಡಬ್ಲ್ಯೂ, ಬಿಎಂಎಂ ಸಹಯೋಗದಲ್ಲಿ ಸಾರ್ವಜನಿಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.01 ರಂದು ಬೆಳಿಗ್ಗೆ 07 ಗಂಟೆಗೆ ನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ “ಬಳ್ಳಾರಿ ಪೊಲೀಸ್ ರನ್” (ಮ್ಯಾರಥಾನ್ ಮತ್ತು ವಾಕಥಾನ್) ಆಯೋಜಿಸಲಾಗಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಎಂಬ ಘೋಷವಾಕ್ಯದಡಿ ಈ ಓಟ ಹಮ್ಮಿಕೊಳ್ಳಲಾಗಿದೆ.
*ಓಟದ ವಿಭಾಗ ಮತ್ತು ಮಾರ್ಗ:*
2ಕೆ ವಾಕಥಾನ್ (ಹಿರಿಯ ನಾಗರಿಕರಿಗಾಗಿ): ಡಿ.ಎ.ಆರ್ ಮೈದಾನ- ಸಂಗಮ್ ವೃತ್ತ- ಗಡಿಗಿ ಚೆನ್ನಪ್ಪ ವೃತ್ತ- ಹಳೆ ಕೋರ್ಟ್ ರಸ್ತೆ- ಡಿ.ಎ.ಆರ್ ಮೈದಾನ.
5ಕೆ ಮ್ಯಾರಥಾನ್: ಡಿ.ಎ.ಆರ್ ಮೈದಾನ- ಗಡಿಗಿ ಚೆನ್ನಪ್ಪ ವೃತ್ತ- ಬೆಂಗಳೂರು ರಸ್ತೆ- ಹೆಚ್.ಆರ್. ಗವಿಯಪ್ಪ ವೃತ್ತ- ರೈಲ್ವೆ ಸ್ಟೇಷನ್ ರಸ್ತೆ ಮೂಲಕ ಮರಳಿ ಡಿಎಆರ್ ಪೊಲೀಸ್ ಮೈದಾನಕ್ಕೆ ಅಂತ್ಯಗೊಳ್ಳಲಿದೆ.
10ಕೆ ಮ್ಯಾರಥಾನ್: ಡಿ.ಎ.ಆರ್ ಮೈದಾನದಿಂದ ಪ್ರಾರಂಭವಾಗಿ ಸಂಗಮ್ ವೃತ್ತ- ಗಡಿಗಿ ಚೆನ್ನಪ್ಪ ವೃತ್ತ- ಬೆಂಗಳೂರು ರಸ್ತೆ- ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗ- ಹೆಚ್.ಆರ್. ಗವಿಯಪ್ಪ ವೃತ್ತ- ಡಾ.ಬಿ.ಆರ್.ಅಂಬೇಡ್ಕರ್ ವೃತ್ತ- ವಾಲ್ಮೀಕಿ ವೃತ್ತ(ಎಸ್‌ಪಿ ವೃತ್ತ)- ಕನಕ ದುರ್ಗಮ್ಮ ದೇವಸ್ಥಾನ- ಮೋಕಾ ರಸ್ತೆ- ಭಾರತೀಯ ಮಿಲ್ಕ್ ಡೈರಿ ಮೂಲಕ ಮರಳಿ ಬಸವೇಶ್ವರ ನಗರ ಮುಖ್ಯ ರಸ್ತೆ- ಎಸ್.ಎನ್ ಪೇಟೆ ಫ್ಲೈ ಓವರ್ ಮೂಲಕ ಸಾಗಿ ಮರಳಿ ಡಿಎಆರ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ವಿತರಿಸಲಾಗುವುದು.
*ನಗದು ಬಹುಮಾನ ವಿವರ:*
5ಕೆ ಮ್ಯಾರಾಥಾನ್: ಪ್ರಥಮ-10,000, ದ್ವಿತೀಯ- 7,000 ಮತ್ತು ತೃತೀಯ- 4,000.
10ಕೆ ಮ್ಯಾರಾಥಾನ್: ಪ್ರಥಮ-15,000, ದ್ವಿತೀಯ- 10,000 ಮತ್ತು ತೃತೀಯ- 7,000.
ಇದರ ಜೊತೆಗೆ, ಓಟದ ನಂತರ ಡಿ.ಎ.ಆರ್ ಮೈದಾನದಲ್ಲಿ ಕ್ವಿಜ್ ಸ್ಪರ್ಧೆ ಏರಿ್ಡಸಲಾಗಿದ್ದು, ಸರಿಯಾದ ಉತ್ತರ ನೀಡಿದವರಿಗೆ ಹೆಲ್ಮೆಟ್ ಬಹುಮಾನವಾಗಿ ನೀಡಲಾಗುವುದು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ನೌಕರರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಿಳಿಸಿದ್ದಾರೆ. ಮ್ಯಾರಾಥಾನ್ ಓಟಕ್ಕಾಗಿ ಸಿದ್ಧಪಡಿಸಲಾದ ವಿಶೇಷ ಟಿ-ಶರ್ಟ್‌ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 