ಬಳ್ಳಾರಿ: ನಾಳೆ ರಂಗ ಮುಂಗಾರು ನಾಟಕೋತ್ಸವ: ಅಂಚೆ ಲಕೋಟಿ ಬಿಡುಗಡೆ

ಲೋಕದರ್ಶನ ವರದಿ

ಬಳ್ಳಾರಿ 24: ಮಹೋನ್ನತ ನಟ ವೀರಣ್ಣನವರಿಂದ ಗುಬ್ಬಿ ಪ್ರಸಿದ್ಧವಾದಂತೆ, ದೊಡ್ಡನಗೌಡರಿಂದ ಬಳ್ಳಾರಿ ಬಯಲು ಸೀಮೆಯ ಜೋಳದರಾಶಿ ಜಗತ್ ಪ್ರಸಿದ್ಧವಾಯಿತು. ನಾಟಕ ಬೆಂಬಿಡದ ಬ್ರಹ್ಮ ರಾಕ್ಷಸವೆಂದು ರಂಗಕ್ಕೆ ಬಂದು ಬಳ್ಳಾರಿ ರಾಘರ ಪರಮಶಿಷ್ಯರಾಗಿ ಚಿರಸ್ಥಾಯಿ ಆದ, ತಂದೆಯ ಮಾತಿನಂತೆ ಊರಿನಲ್ಲಿ ಶಾಲೆ, ಆಸ್ಪತ್ರೆ, ವಾಚನಾಲಯ, ಬಯಲು ರಂಗ ಮಂದಿರ ಕಟ್ಟಿಸಿ ಊರಿಗೆ ಉಪಕಾರಿ ಆದ ದೊಡ್ಡನಗೌಡರಿಗೆ ರಂಗ ಕಲೆ, ಅನಕೃ ಹೀಗೆ ಉದ್ದಾಮ ಪಂಡಿತರಿಂದ ಪ್ರಶಂಸಿಸಲ್ಪಟ್ಟ ದೊಡ್ಡನಗೌಡರು ಕನ್ನಡ ನಾಡಿನ ಸಾಂಸ್ಕೃತಿಕ ಸಾರ್ವಭೌಮರೇ ಸೈ. ಇಂತಹ ಮರೆಯಬಾರದ ಮಹಾನುಭಾವರನ್ನು ಸೃಜನಶೀಲ ರಂಗ ಸಂಸ್ಥೆ ರಂಗತೋರಣ, ಜೋಳದರಾಶಿಯ ರಾಮೇಶ ಟ್ರಸ್ಟ್ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಸಹಯೋಗದೊಂದಿಗೆ ಪ್ರತಿ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ, ರಂಗೋತ್ಸವ, ರಂಗ ಜ್ಯೋತಿಯಾತ್ರೆ, ರಂಗ ಪುರಸ್ಕಾರಗಳ ಮೂಲಕ ಸಾರ್ಥಕವಾಗಿ ಸ್ಮರಿಸುತ್ತಲಿದೆ. 

ರಂಗಮುಂಗಾರು ನಾಟಕೋತ್ಸವ-2019: 

ಜುಲೈ 26, 27 ಮತ್ತು 28 ರಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ, ಶಿವಮೊಗ್ಗ ರಂಗಾಯಣ ತಿರುಗಾಟದ ರಂಗತೇರುವಿನ ಮೂರು ನಾಟಕಗಳ 'ರಂಗಮುಂಗಾರು ನಾಟಕೋತ್ಸವ' ನಡೆಯಲಿದೆ. ದಿ. 26 ಶುಕ್ರವಾರ ಸಂಜೆ 6.30 ಗಂಟೆಗೆ ಬಿಪಿಎಸ್ಸಿ ಶಾಲೆ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ, ಅಂಚೆ ಇಲಾಖೆಯ ವಿಭಾಗೀಯ ಅಧೀಕ್ಷಕರಾದ ಕೆ.ಮಹಾದೇವಪ್ಪ, ಉಪನ್ಯಾಸಕ ಎನ್.ಎಸ್.ವೇಣುಗೋಪಾಲ ಅವರು ನಾಟಕೋತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದು, ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಸಿದ್ಧನಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ 'ಗೌರ್ನಮೆಂಟ್ ಬ್ರಾಹ್ಮಣ' ನಾಟಕ ನಡೆಯಲಿದೆ.

    ಈ ನಾಟಕ ಅರವಿಂದ ಮಾಲಗತ್ತಿ ಅವರ ಆತ್ಮಕಥೆ ಆಧಾರಿತವಾಗಿದ್ದು ನೀನಾಸಂನ ಡಾ.ಎಂ.ಗಣೇಶ ನಿದರ್ೆಶಿಸಿದ್ದಾರೆ. ಜುಲೈ 27 ಶನಿವಾರ ಸಂಜೆ ಪಾಂಡೀಚೇರಿಯ ಸವಿತಾರಾಣಿ ನಿದರ್ೆಶನದ 'ಟ್ರಾನ್ಸ್ನೇಷನ್ ನಾಟಕ ನಡೆಯಲಿದ್ದು ಹಿರಿಯ ರಂಗಕಲಾವಿದ ಡಾ.ಪಿ.ಎಲ್. ಗಾದಿಲಿಂಗನಗೌಡ, ಕೆಂಗಲ್ ರಾಜಶೇಖರಗೌಡ, ವೈ.ದೊಡ್ಡಬಸಪ್ಪ ಹಾಗೂ ಕಪ್ಪಗಲ್ಲು ಮೆಹತಾಬ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ದಿ. 28 ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಹಿರಿಯ ವೈದ್ಯ ಡಾ.ಹೆಚ್. ಮಲ್ಲಿಕಾಜರ್ುನಗೌಡ, ಡಾ. ಪರಸಪ್ಪ ಬಂದ್ರಕಳ್ಳಿ, ಚೆಳ್ಳಗುಕರ್ಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹನುಮಂತ ಹಾಗೂ ಕೆಂಗಲ್ ಬಸವನಗೌಡ ಅತಿಥಿಗಳಾಗಿ ಭಾಗವಹಿಸಲಿದ್ದು ನಂತರ ಬಂಗಾಲದ ಬಾದಲ್ ಸಕರ್ಾರ ರಚನೆಯ ಪಿ.ಗಂಗಾಧರ ಸ್ವಾಮಿ ನಿದರ್ೆಶನದ 'ಮೆರವಣಿಗೆ' ನಾಟಕ ಪ್ರದರ್ಶನವಾಗಲಿದೆ. 

ಜುಲೈ 27, ಶನಿವಾರ ರಂಗ ಜ್ಯೋತಿಯಾತ್ರೆ: 

ದೊಡ್ಡನಗೌಡರ 110ನೇಯ ಜನ್ಮದಿನದ ಅಂಗವಾಗಿ ಇದೇ ಶನಿವಾರ ಜುಲೈ 27 ರಂದು ದೊಡ್ಡನಗೌಡ ರಂಗ ಜ್ಯೋತಿಯಾತ್ರೆ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಚೆಳ್ಳಗುಕರ್ಿ ಎರ್ರಿತಾತನವರ ದೇವಸ್ಥಾನದಿಂದ ಹೊರಡುವ ಜ್ಯೋತಿಯಾತ್ರೆ, ದೊಡ್ಡನಗೌಡರ ಸಮಾಧಿ, ದೊಡ್ಡನಗೌಡರ ನಿವಾಸ ಜೋಳದರಾಶಿಯಿಂದ ಪರಮದೇವನಹಳ್ಳಿ, ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಲಹಳ್ಳಿ ಮೂಲಕ ಮಧ್ಯಾಹ್ನ 1.00 ಗಂಟೆಗೆ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿರುವ ಬಳ್ಳಾರಿ ರಾಘವರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಸಮಾಪ್ತಿಯಾಗಲಿದ್ದು ಯಾತ್ರೆಯ ಉದ್ದಕ್ಕೂ ವಿವಿಧ ಗ್ರಾಮಗಳ ಹಿರಿಯರು, ಗ್ರಾಮಸ್ಥರು, ಶಾಲಾ ವಿದ್ಯಾಥರ್ಿಗಳು, ಭಜನಾ ತಂಡಗಳ ಮೂಲಕ ಯಾತ್ರೆಯ ಮೆರಗು ಹೆಚ್ಚಿಸಲಿದ್ದಾರೆ 

    ಜೋಳದರಾಶಿ ದೊಡ್ಡನಗೌಡರ ವಿಶೇಷ ಅಂಚೆ ಲಕೋಟೆ: ನಗರದಲ್ಲಿ ಅಂಚೆ ಇಲಾಖೆಯಿಂದ 3 ದಿನ ನಡೆಯಲಿರುವ ಅಂಚೆಚೀಟಿ ಪ್ರದರ್ಶನದಲ್ಲಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಲಿದ್ದು ರಂಗತೋರಣ ಅದಕ್ಕಾಗಿ ತುಂಬು ಹೃದಯದಿಂದ ಶ್ರಮಿಸಿದೆ. ಹೀಗೆ ಗಮಕ ಕಲಾನಿಧಿ, ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡರ 110ನೇ ಜನ್ಮದಿನದ ನಾಟಕೋತ್ಸವ, ರಂಗಜ್ಯೋತಿ ಯಾತ್ರೆ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ 

ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ಗೌಡರ ಅಭಿಮಾನಿಗಳು, ನಗರದ ನಾಗರಿಕರು, ಆಗಮಿಸಬೇಕೆಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಮೇಶ ಟ್ರಷ್ಟ್ನ ಕೆ.ಪಂಪನಗೌಡ, ಗೌರವಾಧ್ಯಕ್ಷರಾದ ಬಿ.ಸಿದ್ದನಗೌಡ, ಕಾರ್ಯದಶರ್ಿ ಕಪಗಲ್ಲು ಪ್ರಭುದೇವ್ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು