ಲೋಕದರ್ಶನ ವರದಿ
ಬಳ್ಳಾರಿ 10: ನಗರದಲ್ಲಿ ದಿ: 10 ರಂದು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಂಸ್ಥೆಯ ಆವರಣದಲ್ಲಿ 30 ದಿನಗಳ ವರಗೆ ನಡೆಯುವ ಮಹಿಳೆಯರ ವಸ್ತ್ರ ವಿನ್ಯಾಸ (ಟೈಲರಿಂಗ್) ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯ ಉದ್ಘಾಟನಾ ಸಮಾರಂಭದ ಮುಖ್ಯ ಅಥಿತಿಗಳಾಗಿ ಮಾನ್ಯ ಹನುಮಂತ, ಮುಖ್ಯ ಪ್ರಬಂದಕರು, ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ ಬಳ್ಳಾರಿ. ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಈಗ ಟೈಲರಿಂಗ್ ಮಾಡುವ ಸ್ವ-ಉದ್ಯೋಗಕ್ಕೆ ತುಂಬಾ ಬೇಡಿಕೆಯಿದ್ದು, ಆಸಕ್ತಿಯಿಂದ ಕಲಿತು ಮಾದರಿ ಟೈಲರ್ಸ್ ಆಗಬೇಕೆಂದು ಮಾರ್ಗದರ್ಶನ ಮಾಡಿದರು. ಚಂದ್ರಶೇಖರ್ .ಎಮ್ ನಿದರ್ೇಶಕರು ಮಾತನಾಡಿ ತರಬೇತಿ ವೃತ್ತಿ ಕೌಶಲ್ಯದ ಜೊತೆಗೆ ಆತ್ಮ ವಿಶ್ವಾಸ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯವನ್ನು ಸಹ ಹೇಳಿಕೊಡಲಾಗುವದು. ಎಂದು ತಿಳಿಸಿದರು. ನಾಗೇಶ, ಜಡೇಪ್ಪ ಉಪನ್ಯಾಸಕರು, ಮಂಜುಳಾ, ಸಂಪನ್ಮೂಲ ವ್ಯಕ್ತಿಗಳು. ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ 48 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.