ಲೋಕದರ್ಶನ ವರದಿ
ಬಳ್ಳಾರಿ 01: ರಾಜ್ಯದಲ್ಲಿನ ನಾಲ್ಕು ಸಾರಿಗೆ ನಿಗಮ ಈ ಮೊದಲಿನಂತೆ ಏಕೀಕರಣ ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳ ಹೀಡೆರಿಕೆಗೆ ಆಗ್ರಹಿಸಿ ಜೂ.27ರಂದು ಬೆಂಗಳೂರು ಚೆಲೋ ಹಮ್ಮಿಕೊಳ್ಳುವುದಾಗಿ ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಆಂಡ್ವರ್ಕರ್ಸ್ ಪೆಡರೇಷನ್ ಅಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಸಾರಿಗೆ ಸಂಸ್ಥೆ ಮೊದಲು ಒಂದು ಇದ್ದಿದ್ದನ್ನು ನಾಲ್ಕು ಭಾಗವಾಗಿ ಆಡಳಿತಾತ್ಮಕ ವೆಚ್ಚ ಹೆಚ್ಚಿ ನಷ್ಟ ಅನುಭವಿಸುವಂತಾಗಿದೆ. ಅದಕ್ಕಾಗಿ ಒಂದೇ ನಿಗಮ ಆಗಬೇಕು. ನಿಗಮದಲ್ಲಿ ಜಾರಿಗೆ ತಂದಿರುವ ನಮೊನೆ 4 ರಿಂದ ಚಾಲಕ-ನಿರ್ವಾಹಕರ ಕೆಲಸದ ಬಾರ ಹೆಚ್ಚಿದೆ. ಈ ರೀತಿ ಅನೇಕ ಸಮಸ್ಯಗಳು ಕಂಡು ಬರುತ್ತಿವೆ. ನೌಕರರಿಗೆ ಈಗ ನೀಡುತ್ತಿರುವ ವೈದ್ಯಕೀಯ ಸಮರ್ಪಕವಾಗಿಲ್ಲ. ವೈದ್ಯಕೀಯ ಸೌಲಬ್ಯ ಹೆಚ್ಚಿಸಬೇಕು. ಆರೋಗ್ಯ ರಕ್ಷಣೆಗೆ ಅಗತ್ಯವಾದ ವೈದ್ಯಕೀಯ ವೆಚ್ಚ ನೀಡಬೇಕು. ಕಾರ್ಯ ಒತ್ತಡದಿಂದ ನೌಕರರು ಆತ್ಮಹತ್ಯ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ನಿಗಮಗಳಿಗೆ ಮೊಟರ್ ವೈಕಲ್ ತೆರಿಗೆ ರೀಯಾಯಿತಿ ನೀಡಬೇಕು. ಡಿಸೆಲ್ ಮೇಲಿನ ಶುಲ್ಕ ಕಡಿಮೆಮಾಡಬೇಕು. ವಿದ್ಯಾಥರ್ಿಗಳ ರೀಯಾಯಿತಿ ಬಸ್ಪಾಸ್ ಹಣ ನೀಡಬೇಕು. ಇನ್ನೂ ಹಲವಾರು ಬೇಡಿಕೆಗಳು ಸೇರಿದಂತೆ ಜೂನ್ 27ಕ್ಕೆ ಬೆಂಗಳೂರು ಚೆಲೋ ನಡೆಸುತ್ತಿದೆ. ರಾಜ್ಯದ ಎಲ್ಲಾ ಭಾಗಗಳಿಂದ ನೂರಾರು ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಸೌಹಾರ್ದಯುತವಾಗಿ ಸಂಘಟನೆಯೊಂದಿಗೆ ಚಚರ್ಿಸಿ ನೌಕರರ ಬೇಡಿಕೆಗಳನ್ನು ಈಡೆರೆಸಬೇಕು ಎಂದರು. ಈ ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಮುಖಂಡರುಗಳಾದ ಹೆಚ್.ಎ.ಆದಿಮೂತರ್ಿ, ಪಿ.ಚನ್ನಪ್ಪ, ಶಾಂತಯ್ಯ ಗುತ್ತರಗಿ ಮಠ, ಜಿ.ಶಿವಕುಮಾರ, ಶ್ರೀಶೈಲರೆಡ್ಡಿ, ರಾಜು ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.