ಲೋಕದರ್ಶನ ವರದಿ
ಬಳ್ಳಾರಿ 03: ನಗರದ ಬಸರಕೋಡು-ಗೂಳ್ಯಂ ವೇದಾವತಿ ನದಿ ಸೇತುವೆ ಹೋರಾಟ ಸಮಿತಿಯ ವತಿಯಿಂದ ಬಸರಕೋಡು ಗುಳ್ಯಂ ನಡುವೆ ಹಗರಿ ವೇದಾವತಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ, ಜೂನ್ 14, 2019 ನಡೆಯುವ ಪ್ರತಿಭಟನಾ ರ್ಯಾಲಿಗೆ ಪೂರಕವಾಗಿ ಬಸರಕೋಡು ಗ್ರಾಮದಲ್ಲಿ ಸಹಿ ಸಂಗ್ರಹಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದಶರ್ಿ ಕಾ.ರಾಧಾಕೃಷ್ಣ ಉಪಾಧ್ಯ ನೆರವೇರಿಸಿದರು. ಅವರು ಮಾತನಾಡುತ್ತಾ "ಬಸರಕೋಡು ಗ್ರಾಮವು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿದೆ. ಗೂಳ್ಯಂ ಗ್ರಾಮವು ಆಂಧ್ರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿದೆ. ಈ ಎರಡೂ ಗ್ರಾಮಗಳ ಮಧ್ಯೆ ವೇದಾವತಿ ನದಿಯು(ಹಗರಿ) ಹರಿದು ಹೋಗುತ್ತದೆೆ. ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಹೋಗುವ ವಾಹನಗಳಾಗಲೀ ಪಾದಾಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮಿ. ಅಂತರವನ್ನು ಕ್ರಮಿಸಬೇಕಾಗುತ್ತದೆ. ಜೊತೆಗೆ ಹಗರಿಯು ಉಸುಕಿನಿಂದ ಕೂಡಿರುವುದರಿಂದ ಈ ಒಂದು ಕಿ.ಮಿ. ಅಂತರವನ್ನು ಕಾಲ್ನಡಿಗೆಯಿಂದ ದಾಟಿ ಹೋಗಲು ಹರಸಾಹಸ ಮಾಡಬೇಕಾಗಿದೆ. ಉಸುಕಿನಲ್ಲಿ ಕಾಲುಸಿಕ್ಕಿ ಹಾಕಿಕೊಳ್ಳುತ್ತದೆ. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ಒಂದು ಕಿ.ಮಿ. ದಾಟುವುದರಲ್ಲಿ ಸುಸ್ತಾಗಿ ಹೋಗುತ್ತಾರೆ. ಪ್ರಸ್ತುತ ಎರಡೂ ಭಾಗದ ಜನರು ಈ ದಾರಿಯನ್ನೇ ಅವಲಂಭಿತವಾಗಿದ್ದು ಬಂಡಿ, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳು ಕೂಡ ಉಸುಕಿನಲ್ಲಿ ಸಿಕ್ಕಿ ಬಿದ್ದು ಹೊರಬರಲು ಹರಸಾಹಸ ಮಾಡಬೇಕಾಗಿದೆ.
ಗ್ರಾಮಗಳೂ ಆಂಧ್ರ-ಕನರ್ಾಟಕದ ಗಡಿಭಾಗಗಳಾಗಿರುವುದರಿಂದ ವ್ಯಾಪಾರ-ವಹಿವಾಟು ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ ಸಂಬಂಧಗಳಿರುವುದರಿಂದ ದಿನನಿತ್ಯ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ.
ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ" ಎಂದರು.
ಸಮಿತಿಯ ಸಂಚಾಲಕ ಈ.ಹನುಮಂತಪ್ಪ ಮಾತನಾಡುತ್ತಾ "ಈ ಯೋಜನೆಯನ್ನು ಜಾರಿಗೊಳಿಸಿ ವೇದಾವತಿ ನದಿಗೆ (ಹಗರಿ) ಶಾಶ್ವತ ಸೇತುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಬೇಡಿಕೆಯನ್ನು ಈಡೇರಿಸುವುದರ ಮೂಲಕ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಹೋರಾಟ ಸಮಿತಿಯ ಸಲಹೆಗಾರರಾದ ಎ.ದೇವದಾಸ್, ಸಮಿತಿಯ ಮತ್ತೊರ್ವ ಸಂಚಾಲಕರಾದ ಬಸರಕೋಡು ಗ್ರಾಮದ ಎರ್ರೆಪ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸರಕೋಡು ಗ್ರಾಮಸ ಬುಡ್ಡಪ್ಪ, ಸಿದ್ದಪ್ಪ, ಮಲ್ಲಿಕಾಜರ್ುನ ಗೌಡ ಹಾಗೂ ಗುಳ್ಯಂ ಗ್ರಾಮದ ದೊಡ್ಡಬಸಪ್ಪ, ಗಾದಿಲಿಂಗಪ್ಪ, ಪೂಜಾರಿ ಶಿವಪ್ಪ, ಹಂದ್ಯಾಳು ಗಾದಿಲಿಂಗಪ್ಪ, ಮಹಲಿಂಗಪ್ಪ, ಎಣ್ಣೆ ನಾಗರಾಜ್, ಗಂಗಾಧರ, ಪ್ರಭಾಕರ ಮುಂತಾದವರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ರೈತರು, ಮಹಿಳೆಯರು ಕಾಮರ್ಿಕರು, ವೃದ್ಧರು ಅತ್ಯಂತ ಉತ್ಸಾಹದಿಂದ ಬಂದು ಸಹಿ ಮಾಡುತ್ತಿದ್ದಾರಲ್ಲದೆ, ಹೋರಾಟ ನಿಧಿಗೆ ದೇಣಿಗೆಯನ್ನು ಸಹ ಉದಾರವಾಗಿ ನೀಡಿದರು.