ಲೋಕದರ್ಶನ ವರದಿ
ಬಳ್ಳಾರಿ 10: ಸಮಾಜದ ಜನರ ನೋವಿಗೆ ಸ್ಪಂಧಿಸುವ ಮನುಸು ಕೊಡುವ ಶಿಕ್ಷಣ ನಿಮ್ಮದಾಗಲಿ ಎಂದು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತಡಿದರು.ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಾಲಕಿಯರಿಗೆ ಶಿಕ್ಷಣ ನೀಡಿದರೆ ಮಾನವ ಸಂಪನ್ಮೂಲದ ಅರ್ಧಭಾಗ ಅಭಿವೃದ್ಧಿ ಹೊಂದಿದಂತೆ. ಅದಕ್ಕಾಗಿಬಾಲಕಿಯರ ಕಾಲೇಜಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೆ ಮೂರು ಕೋಟಿಯಲ್ಲಿ 36 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ,20 ಲಕ್ಷದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ, ಅದೇ ರೀತಿ ಶುದ್ಧ ಕುಡಿಯುವ ನೀರಿಗಾಗಿ 20 ಲಕ್ಷ ರೂಪಾಯಿಗಳಲ್ಲಿ ಆರ್.ಓ ನಿರ್ಮಿಸಲಾಗುತ್ತಿದೆ, ಈ ವéರ್ಷ 1900 ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಬಾಲಕಿಯರ ಪಿಯುಸಿಗೆ ತಮ್ಮ ಶಿಕ್ಷಣ ಮೊಟಕುಗೊಳಿಸದೆ, ಉನ್ನತ ಶಿಕ್ಷಣಕ್ಕೆ ಹೋಗಿ ಉತ್ತಮ ನೌಕರಿ ಪಡೆದು ಕುಟುಂಬಕ್ಕೆ ಹಾಸರೆ ಆಗುವುದಲ್ಲದೆ,ಸಮಾಜಕ್ಕೆ ಬೆನ್ನೇಲಬಾಗಲು ಕರೆನೀಡಿದರು.
ಅದ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಪ್ರಾಚಾರ್ಯರಾದ ಕೆ.ಎಂ. ಮಹಾಲಿಂಗನ ಗೌಡ ಇವರು ಶಿಕ್ಷಣ ಬಡತನ, ಅಜ್ಞಾನ ಹೋಗಲಾಡಿಸಲು ಅಸ್ತ್ರ ಮಾಡಿಕೊಂಡು ಸಮಾಜದ ಸಮತೆಗೆ ಕಾರಣರಾಗಲು ಕರೆ ನೀಡಿದರು. ಉಪನ್ಯಾಸಕರುಗಳಾದ ಡಾ.ಯು.ಶ್ರಿನಿವಾಸ ಮೂತರ್ಿ, ಪ್ರಾಸ್ತಾವಿಕ ಮಾತುಗಳಾಡಿದರು, ಶ್ಯಾಮಣ್ಣ ವಂದಿಸಿದರು, ಚಾಂದ ಪಾಷ ನಿರೂಪಿಸಿದರು ಶಶಿಧರ ವಂದಿಸಿದರು.