ಲೋಕದರ್ಶನ ವರದಿ
ಬಳ್ಳಾರಿ 24: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನದ ಬೆನ್ನ ಹಿಂದೆ ನಗರದಲ್ಲಿ ಬಿಜೆಪಿ ಪಕ್ಷದಿಂದ ಬುದವಾರ ಸದಸ್ಯತ್ವ ಅಭಿಯಾನಕ್ಕೆ ಆದ್ದೂರಿಯಾಗಿ ಚಾಲನೆ ನೀಡಿದೆ. ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಬಿಜೆಪಿಯ ನಗರ ಘಟಕದಿಂದ ಹಮ್ಮಿಕೊಂಡಿದ್ದ 2019 ಸಂಘಟನಾಪರ್ವ ಸದಸ್ಯತ್ವ ಅಭಿಯಾನ ನಡೆಯಿತು.
ನಗರ ಘಟಕದ ಅಧ್ಯಕ್ಷ ಕೆ.ಎಸ್ ಅಶೋಕ್ ಗಣ್ಯರನ್ನು ಸ್ವಾಗತಿಸಿ ಪಕ್ಷ ಈಗಾಗಲೇ ಜಿಲ್ಲೆಯಲ್ಲಿ ಸಮರ್ಪಕವಾಗಿ ಸಂಘಟನೆಗೊಂಡಿದ್ದು ಮತ್ತಷ್ಟು ಪ್ರಭಲಗೊಳಿಸಲು ಪಕ್ಷದ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯ ಪ್ರತಿಯೊಬ್ಬ ಕಾರ್ಯಕರ್ತನಿಂದ ನಡೆಯಬೇಕು ಎಂದರು.
ಅಭಿಯಾನದಲ್ಲಿ ಬಿಜೆಪಿ ಯುವಮೊರ್ಚದ ರಾಷ್ಟ್ರೀಯ ಉಪಾಧ್ಯಕ್ಷೆ ನಿಷ್ಠಿತ, ರಾಜ್ಯ ಬಿಜೆಪಿ ರೈತಮೊರ್ಚದ ಉಪಾಧ್ಯಕ್ಷ ಎಸ್.ಗುರುಲಿಂಗಗೌಡ, ಜಿಲ್ಲಾ ಘಟಕದ ಪ್ರಧಾನ ಕಾರ್ಯದಶರ್ಿ ರಾಮಲಿಂಗಪ್ಪ, ಇನ್ನೂ ಮೊದಲಾದವರು ಮಾತನಾಡಿದರು. ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ಷಾ ಅವರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತದ ಜೊತೆಗೆ ಪ್ರಭಲವಾಗಿ ಸಂಘಟನೆಯಾಗುತ್ತಿದೆ. ಕರ್ನಾಟಕದಲ್ಲೂ ಎಲ್ಲಾ ಹಂತದ ಚುನಾವಣೆಯಲ್ಲಿ ಪ್ರಭಲ ಶಕ್ತಿಯಾಗಿ ಹೊಮ್ಮುವಂತೆ ಪಕ್ಷ ಸಂಘಟನೆ ಆಗಬೇಕಿದೆ. ಮುಂಬರುವ ಪಾಲಿಕೆ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಭಾವುಟ ಕೋಟೆಯ ಮೇಲೆ ಹಾರಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಮೊರ್ಚ ಅಧ್ಯಕ್ಷ ಪ್ರಕಾಶರೆಡ್ಡಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸ ಮೊತ್ಕರ್, ವೀರಶೇಖರರೆಡ್ಡಿ, ಮುಖಂಡರುಗಳಾದ ಓಬಳೇಶ ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸದಸ್ಯತ್ವ ಪಡೆಯಬಹುದಾದ ಮೊಬೈಲ್ ನಂಬರ್ ಗೆ ಕರೆಮಾಡಿ ನೂರಾರು ಜನ ಸದಸ್ಯತ್ವ ಪಡೆಯಬೇಕೆಂದು ಕೆ.ಎಸ್.ಅಶೋಕ್ ಕುಮಾರ್ ಮನವಿ ಮಾಡಿದರು.