ನಾಗರಾಜ್ ಹರಪನಹಳ್ಳಿ
ಕಾರವಾರ 07: ಕಳೆದ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳು ಅಷ್ಟಾಗಿ ಪ್ರತಿಧ್ವನಿಸಿರಲಿಲ್ಲ. ಕಾರವಾರ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಭರವಸೆಗಳೂ ಬಂದಿರಲಿಲ್ಲ. ಹಾಗಂತ ಜಿಲ್ಲೆಯ ಸಮಸ್ಯೆಗಳಿಗೇನೂ ಬರವಿಲ್ಲ. ಬಗೆ ಹರಿಯದ ಸಮಸ್ಯೆಗಳು ಮೂರು ದಶಕಗಳಿಂದಲೂ ಹಾಗೆ ಇವೆ.
ಅರಣ್ಯ ಅತಿಕ್ರಮಣ ಸಕ್ರಮಾತಿ ಸಮಸ್ಯೆಯಲ್ಲಿ 16 ಸಾವಿರಕ್ಕೂ ಮಿಕ್ಕ ಅಜರ್ಿಗಳು ಬಗೆಹರಿಯದೇ ಉಳಿದಿವೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಬಿಗಿ ನಿಲುವಿನಿಂದ ರಾಜ್ಯ ಮತ್ತು ಕೇಂದ್ರ ಸಕರ್ಾರ ಬಗೆ ಹರಿಸಲಾಗದ ಕಗ್ಗಂಟು ಸಮಸ್ಯೆ ಇದು. ಅರಣ್ಯ ಅತಿಕ್ರಮಣ ಮಾಡಿ ಕಟ್ಟಿದ ಮನೆಗಳು ಸಕ್ರಮವಾಗಿಲ್ಲ. ಸಕ್ರಮಾತಿಗೆ ಬರುವುದೂ ಇಲ್ಲ. ಈ ಮನೆಗಳಿಗೆ ಆಸ್ತಿ ಸಂಖ್ಯೆ, ಇ-ಖಾತೆ ಮಾಡಿಸುವ ಸಮಸ್ಯೆ ಇದೆ. ಹಾಗೆ ಅತಿಕ್ರಮಣ ಮಾಡಿ ಕೃಷಿ ಮಾಡಿದ ಅರಣ್ಯ ಇಲಾಖೆಯ ಭೂಮಿ ಸಕ್ರಮಾತಿ ಸಮಸ್ಯೆ ಹಾಗೆ ಉಳಿದಿದೆ. ಪರಿಶಿಷ್ಟ ಜಾತಿ ವರ್ಗಗಳ ಭೂಮಿ ಅತಿಕ್ರಮಣ ಸಕ್ರಮಾತಿಯ 3 ಸಾವಿರ ಅಜರ್ಿಗಳು ಮಾತ್ರ ಇತ್ಯರ್ಥವಾಗಿದ್ದು, ಅವುಗಳಿಗೆ ಆಸ್ತಿ ಸಂಖ್ಯೆ ನೀಡಿ ಪಹಣಿ ವಿತರಿಸುವ ಕೆಲಸವಾಗಿದ್ದು, ಉಳಿದ 16 ಸಾವಿರ ಅಜರ್ಿಗಳು ಇತ್ಯರ್ಥಕ್ಕೆ ಕಾದಿವೆ. ಅತಿಕ್ರಮಣ ಭೂಮಿಯಲ್ಲಿ ಮನೆ, ಶೌಚಾಲಯ ಮಂಜೂರಾತಿ ಸಹ ಸಾಧ್ಯವಾಗುತ್ತಿಲ್ಲ. ಹಾಗಾಗಿ ಹಲವು ಸಕರ್ಾರಿ ಯೋಜನೆಗಳ ಅನುಷ್ಠಾನ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಷ್ಟಕರವಾಗಿದೆ.
ಈ ಸಮಸ್ಯೆಗೆ ಈ ಸಲದ ಬೆಳಗಾವಿ ಅಧಿವೇಶನದಲ್ಲಿ ಚಚರ್ೆಯಾಗಬಹುದು. ನಾಲ್ವರು ಬಿಜೆಪಿ ಶಾಸಕರು ಉತ್ತರ ಕನ್ನಡದ ಸಮಸ್ಯೆಗಳಿಗೆ ಧ್ವನಿ ಎತ್ತಿಯಾರು ಎಂಬ ನಿರೀಕ್ಷೆ ಜನತೆಯಲ್ಲಿದೆ. ಶಾಸಕ ಕಾಗೇರಿ ಹಿರಿಯ ಸದಸ್ಯರಾಗಿದ್ದು, ಅವರು ಜಿಲ್ಲೆಯ ಸಮಸ್ಯೆಗಳನ್ನು ಸದನದಲ್ಲಿ ಎತ್ತಿ ಸಕರ್ಾರದ ಗಮನ ಸೆಳೆದಾರು ಎಂಬ ಬಲವಾದ ನಿರೀಕ್ಷೆ ಇದೆ. ದಿನಕರ ಶೆಟ್ಟಿ ಶಾಸನ ಸಭೆಗೆ ಹಳಬರು. ಇನ್ನು ರೂಪಾಲಿ ನಾಯ್ಕ, ಸುನೀಲ ನಾಯ್ಕ ಹೊಸಬರಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳು ಸಮಸ್ಯೆ ಪ್ರಬಲವಾಗಿ ಕಾಡುತ್ತಿದೆ. ಜನರಿಗೆ ಮರಳು ಸಿಗದೇ ಮನೆ ನಿಮರ್ಾಣಕ್ಕೆ ಕಷ್ಟವಾಗಿದೆ. ಅರಣ್ಯ ಅತಿಕ್ರಮಣ ಸಕ್ರಮಾತಿ ಸಮಸ್ಯೆ ಇದೆ.
ಜೊತೆಗೆ ನಿರುದ್ಯೋಗ ಸಮಸ್ಯೆ ಇದ್ದು, ಕಾರವಾರದಲ್ಲಿ ಕಾಖರ್ಾನೆ ಸ್ಥಾಪನೆಗೆ ಪ್ರತಿಭಟನೆ ಹೋರಾಟಗಳು ನಡೆದಿವೆ. ಈ ಸಂಬಂಧ ಸಕರ್ಾರದಿಂದ ನಿಖರ ಉತ್ತರವನ್ನು ನೂತನ ಶಾಸಕರು ಪಡೆದಾರು ಎಂಬ ನಿರೀಕ್ಷೆ ಆಯಾ ಕ್ಷೇತ್ರದ ಜನರದ್ದು.
ಕಾರವಾರ ಬಂದರು ವಿಸ್ತರಣೆ:
ಕಾರವಾರ ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಅಲೆತಡೆಗೋಡೆ ವಿಸ್ತರಣೆ ಹಾಗೂ ಪಶ್ಚಿಮ ದಂಡೆಯಿಂದ 125 ಮೀಟರ್ ಹೊಸ ಅಲೆತಡೆಗೋಡೆ ನಿಮರ್ಾಣಕ್ಕೆ ಸಿದ್ಧರಾಮಯ್ಯ ಸಕರ್ಾರ ಇದ್ದಾಗಲೇ 125 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಮೀಸಲಿಟ್ಟಿತ್ತು. ಆ ಯೋಜನೆ ಸಹ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದೆ. ನಾನಾ ಕುಂಟು ನೆಪ ಹೇಳಿ ಮಂಜೂರಾದ ಅನುದಾನ ಖಚರ್ಾಗದೇ ಉಳಿದಿದೆ. ಆ ಬಗ್ಗೆ ಕಾರವಾರ ಶಾಸಕರು ಸದನದಲ್ಲಿ ಸಕರ್ಾರದ ಗಮನ ಸೆಳೆಯಬಹುದಾಗಿದೆ. ಅಲ್ಲದೇ ತದಡಿಯಲ್ಲಿ ಮೀನು ಸಂಸ್ಕರಣಾ ಘಟಕ ಹಾಗೂ ಗೇರು ಬೀಜ ಸಂಸ್ಕರಣಾ ಘಟಕಗಳ ಸ್ಥಾಪನೆಯ ವಿಷಯಗಳು ಸಿದ್ಧರಾಮಯ್ಯ ಬಜೆಟ್ನಲ್ಲಿ ಪ್ರಸ್ತಾಪವಾಗಿ, ಅನುದಾನ ಸಹ ನಿಗದಿಯಾಗಿದ್ದವು. ಆ ಯೋಜನೆಗಳ ಕತೆ ಏನು ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆ ಇದೆ. ಅಲ್ಲದೇ ನಗರೋತ್ಥಾನ ಯೋಜನೆ ಕುಮಟಾ ಪಟ್ಟಣದಲ್ಲಿ ಅದ್ವಾನವಾಗಿದ್ದು, ಅದರ ಕತೆ ಏನು ಏಂದು ಶಾಸಕರು ಸಕರ್ಾರದ ಗಮನ ಸೆಳೆಯುವುರೇ ಎಂದು ಜನತೆ ಕಾದು ನೋಡುತ್ತಿದ್ದಾರೆ. ಸಕರ್ಾರದಲ್ಲಿ ಕಂದಾಯ ಸಚಿವರಾಗಿರುವ ಆರ್.ವಿ.ದೇಶಪಾಂಡೆ ಹಳಿಯಾಳ ನೀರಾವರಿ ಯೋಜನೆಯ ಅನುಷ್ಠಾನದ ನಿಧಾನಗತಿಯ ಬಗ್ಗೆ ಸಕರ್ಾರದ ನಿಲುವು ಮತ್ತು ಬದ್ಧತೆಯನ್ನು ಪ್ರಸ್ತಾಪಿಸಬಹುದೇ ಎಂದು ಕಾದು ನೋಡಬೇಕಿದೆ.