ಇಂಟರ್ ನ್ಯಾಷನಲ್ ಕಾಲ್ ಸೆಂಟರ್ ವಂಚನೆಯನ್ನು ಬಯಲಿಗೆಳೆದ ಬೆಳಗಾವಿ ಪೊಲೀಸರು
Belgaum police uncover international call center fraud
ಬೆಳಗಾವಿಯಲ್ಲಿಯೇ ಕುಳಿತು ಅಮೇರಿಕೆಯ ಜನರಿಗೆ ಮೋಸದ ಕಾಲ್ ಮೂಲಕ ಹಣ ವಂಚನೆ ಮಾಡುತ್ತಿದ್ದ ಇಂಟರ್ ನ್ಯಾಷನಲ್ ವಂಚಕ ಕಾಲ್ ಸೆಂಟರ್ ಜಾಲವನ್ನು ಬೆಳಗಾವಿ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಹೇಳಿದರು.
ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿ ಮಾಹಿತಿಯನ್ನು ನೀಡಿದ ಬೋರಸೆ ಅವರು ಬೆಳಗಾವಿಯಲ್ಲಿ ವಂವನೆ ಮೋಸದ ಕಾಲ್ ಸೇಂಟರ್ ಒಂದು ಸಕ್ರಿಯಗೊಂಡಿದೆ ಎಂಬ ಖಚಿತ ಮಾಹಿತಿ ಮತ್ತು ಅನಾಮಧೇಯ ಅರ್ಜಿ ಹಿನ್ನೆಲೆ ಡಿಸಿಪಿ ನಾರಾಯಣ್ ಬರಮನಿ ನೇತೃತ್ವದಲ್ಲಿ ಎಸಿಪಿ ರಘು, ಮಾಳಮಾರುತಿ ಸಿಪಿಐ ಗಡ್ಡೇಕರ, ಎಪಿಎಂಸಿ ಪಿಐ ಉಸ್ಮಾನ್ ಓಟಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ, ನಗರದ ಬಾಕ್ಸೈಟ್ ರಸ್ತೆಯ ಕುಮಾರ ಹಾಲ್‌ನಲ್ಲಿ ನಡೆಯುತ್ತಿದ್ದ ಕಾಲ್ ಸೇಂಟರ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಇಂಟರನ್ಯಾಷನಲ್ ಫ್ರಾಡ್ ಕಾಲ್ ಸೇಂಟರ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 33 ಜನರನ್ನು ವಶಕ್ಕೆ ಪಡೆದು ಈ ಅಂತರಾಷ್ಟ್ರೀಯ ವಂಚನೆ ಪ್ರಕರಣವನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಳಿಯ ವೇಳೆ 37 ಲಾಪಟಾಪ್, 37 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಬೇರೆ ಬೇರೆ ರಾಜ್ಯದ ಒಟ್ಟು 33 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಮೇರಿಕಾದ ನಾಗರೀಕರ ಮಾಹಿತಿ ಪಡೆದು, ಅವರ ಹಣವನ್ನು ವಂಚಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿತ್ತು. ಗುಜರಾತ್ ಮತ್ತು ಪಶ್ಚಿಮ್ ಬಂಗಾಳದಲ್ಲಿ ಈ ರಾಕೇಟ್’ನ ಪ್ರಮುಖರಿದ್ದು, ಅವರನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಡಿಜಿ ಅವರಿಗೆ ಮನವಿ ಮಾಡಿ, ಸಿಐಡಿ ಸಹಾಯದಿಂದ ಮೋಸಕ್ಕೊಳಗಾದವರನ್ನು ಸಂಪರ್ಕಿಸಿ ಅವರ ಹೇಳಿಕೆ ಪಡೆದು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗುವುದು. ಈ ಕಾಲ್ ಸೇಂಟರ್‌ನಲ್ಲಿ ಸ್ಥಳೀಯರು ಯಾರು ಇಲ್ಲ. ಹೊರಗಿನಿಂದ ಬಂದು ಕೆಲಸ ಮಾಡುವರರಿಗೆ ಸಂಬಳದೊಂದಿಗೆ ವಸತಿಯನ್ನು ಕೂಡ ನೀಡಿದ ಮಾಹಿತಿಯಿದೆ, ಮಾರ್ಚ್ ತಿಂಗಳಿನಿಂದ ಸಿಬ್ಬಂದಿಗಳಿಗೆ ಸಂಬಳ ನೀಡಲಾಗಿದೆ. ಈ ಕುರಿತು ತನಿಖೆಯನ್ನು ಕೈಗೊಳ್ಳಾಗುವುದು ಎಂದು ಬೋರಸೆ ಅವರು ತಿಳಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 