ಲೋಕದರ್ಶನ ವರದಿ
ವಿಜಯಪುರ 27: ನಗರದ ಕೇಂದ್ರ ಕಾರಾಗೃಹದಲ್ಲಿ ರವಿವಾರ ಕಾರಾಗೃಹದ ಸಿಬ್ಬಂದಿಗಳಿಂದ "ಶೌರ್ಯಚಕ್ರ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಸಿಬ್ಬಂದಿ ಕುಟುಂಬ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಜರುಗಿದ ಈ ಕಾರ್ಯಕ್ರಮಕ್ಕೆ ಪುಲ್ವಾಮಾ ಘಟನೆಗೆ ಸಂಬಂಧಿಸಿದಂತೆ ಮೌನಾಚರಣೆ ಮಾಡುವುದರ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿ, ಕಾಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಂಬಾದಾಸ ಜೋಶಿಯವರ ನಿದರ್ೇಶನದ ನರೇಶ ಪೋತದಾರ ಸಹ ನಿದರ್ೇಶನ ಮತ್ತು ಅಂಬರೀಷ ಪೂಜಾರಿ ಅವರ ಸಂಭಾಷಣೆ ಹಾಗೂ ಪ್ರಭುಗುಡ್ಡದ ಮತ್ತು ಗುರುಸಪಂದಿ ಅವರ ಸಂಗೀತದಲ್ಲಿ ಮೂಡಿ ಬಂದ, ಕಾರಾಗೃಹದ ಸಿಬ್ಬಂದಿಗಳು ತಮ್ಮ ನಿರಂತರ ಕೆಲಸದ ಒತ್ತಡದ ಮಧ್ಯೆಯು ನಟಿಸಿದ ಶೌರ್ಯಚಕ್ರ ಎಂಬ ಸುಂದರ ಸಾಮಾಜಿಕ ನಾಟಕ ನೋಡುಗರಲ್ಲಿ ದೇಶಾಭಿಮಾನವನ್ನು ಇಮ್ಮಡಿಗೊಳಿಸಿತು.
ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಹಾಗೂ 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕಾರಾಗೃಹದ ಸಿಬ್ಬಂದಿ ಮಕ್ಕಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ನ್ಯಾಯಾಧೀಶ ಪ್ರಭಾಕರ್ರಾವ್ ಅವರು ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಎನ್.ಕಾಪ್ಸೆ, ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾಜರ್ುನ ಬಿ.ಸ್ವಾಮಿ ಸೇರಿದಂತೆ ಕಾರಾಗೃಹದ ಸಿಬ್ಬಂದಿ, ಖೈದಿಗಳು ಇತರರು ಉಪಸ್ಥಿತರಿದ್ದರು.