ಲೋಕದರ್ಶನ ವರದಿ
ಸಾಣೇಹಳ್ಳಿ06: ಸಳ್ಥೀಯ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ `ಧ್ಯಾನ, ಮೌನ, ಪ್ರಾರ್ಥನೆ, ಚಿಂತನಾ' ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮನುಷ್ಯನಿಗೆ ಸದಾ ಅಂತರಂಗ ಮತ್ತು ಬಹಿರಂಗದ ಎಚ್ಚರ ಇರಬೇಕು. ಹಾಗಾದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಓಲಂಪಿಕ್ ಕ್ರೀಡೆಯಲ್ಲಿ ಒಂದು ಸೆಕೆಂಡಿಗೂ ಎಷ್ಟು ಬೆಲೆ ಇದೆ ಎನ್ನುವುದನ್ನು ಅರಿಯಬಹುದು. ರೈತ ಹದ ತಪ್ಪಿ ವ್ಯವಸಾಯ ಮಾಡಿದರೆ ಅಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಮಾಡುವ ಕೆಲಸ ಕಾರ್ಯಗಳನ್ನು ನಾಳೆ, ನಾಳೆಗೆಂದು ಮುಂದೂಡ ಬೇಡ. ನಾಳೆ ನಿನ್ನ ಪಾಲಿಗೆ ಸೂಯರ್ೋದಯವಾಗುವುದೋ ತಿಳಿಯದು. ಉತ್ಸಾಹಗಳು ಕಾಯಕ ಮತ್ತು ಸಮಯ ಪ್ರಜ್ಞೆಯಿಂದ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾಲಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಾರ್ಥನಾ ಸಭೆಯಲ್ಲಿ `ಸಮಯ ಪ್ರಜ್ಞೆ' ಕುರಿತಂತೆ ಮಾತನಾಡಿದ ಹೊಸದುರ್ಗದ ಕ್ಷೇತ್ರಶಿಕ್ಷಣಾಧಿಕಾರಿ ಕೆ ಆರ್ ಉಮಾಮಹೇಶ್ ಮಾತನಾಡಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳುವವನೇ ನಿಜವಾದ ಜ್ಞಾನಿ. ಸಮಯ ಎಂದು ಪುನಃ ಬರದು. ಇರುವ ಸಮಯವನ್ನೇ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಪೋಷಕರು ಸರಿಯಾದ ಸಂಸ್ಕಾರದ ದೀಕ್ಷೆ ನೀಡಬೇಕು. ವ್ಯಕ್ತಿಯ, ಸಮಾಜದ ಉನ್ನತಿಗೆ ಸಮಯ ಪ್ರಜ್ಞೆ ಬಹಳ ಮುಖ್ಯವಾದುದು. ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಂ ಮಾಡಿಸು, ಅಜ್ಜರಿಯೊಳ್ ಸಿಲುಕಿದ ಅನಾಥರಂ ಬಿಡಿಸು. ಮುಂತಾದ ಜೀವನ ಮೌಲ್ಯಗಳನ್ನು ತಾಯಿ ಮಕ್ಕಳಿಗೆ ಎಳವೆಯಲ್ಲಿ ಸಮಯೋಚಿತವಾಗಿ ಹೇಳಬೇಕು. ಸಾಣೇಹಳ್ಳಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಸಮಯ ಪ್ರಜ್ಞೆಯಿಂದ ಕೂಡಿರುತ್ತವೆ. ಬರುವ ಅತಿಥಿ ಬರಲಿ, ಬಾರದಿರಲಿ ನಿಗದಿತ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ನಡೆಯುತ್ತವೆ. ಇದು ವಿದ್ಯಾಥರ್ಿಗಳಿಗೆ, ಸಮಾಜ ಬಾಂಧವರಿಗೆ ಮಾದರಿಯಾದುದು. ಇದನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾಥರ್ಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾಥರ್ಿಗಳು ಕಾರ್ಯಕ್ರಮ ನಿರ್ವಹಿಸಿದರು.