ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

Basavaraja Bommai, the sitting MP, started the program by lighting the lamp

ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ 

ಲಕ್ಷ್ಮೇಶ್ವರ 25 : ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿ  ಮಾತನಾಡಿದ ಅವರು ಸಿದ್ಧರಾಮೇಶ್ವರ ಜಯಂತಿ ಎಂದರೆ ನಮ್ಮ ಆತ್ಮ ಜಾಗೃತಿ ಮಾಡುವುದು ನಮ್ಮ ಕಾಯಕವನ್ನ ಎಷ್ಟರಮಟ್ಟಿಗೆ ನಾವು ನಿಷ್ಢೆಯಿಂದ ಮಾಡುತ್ತೇವೆ ಅನ್ನುವುದು.12 ನೇ ಶತಮಾನದಲ್ಲಿ ಕಾಯಕಯೋಗಿಗಳಾಗಿ ನಿಷ್ಠೆಯಿಂದ ಸೇವೆ ಮಾಡುತ್ತ ತಮ್ಮ ಅನುಭವದಿಂದ ಬಂದಿರುವ ವಿಚಾರಗಳು ವಚನಗಳಾಗಿ ಮೂಡಿಬಂದವು. ಸೊಲ್ಲಾಪುರದಲ್ಲಿ ಅತ್ಯಂತ ಬರಗಾಲವಿದ್ದ ಸಂದರ್ಭದಲ್ಲಿ 4 ಸಾವಿರ ಕೆರೆ ಕಟ್ಟೆಗಳನ್ನ ನಿರ್ಮಾಣ ಮಾಡಿದ ಶರಣ ಸೊನ್ನಲಿಗೆ   ಸಿದ್ಧರಾಮ ಎಂದರು. ಪ್ರತಿಯೊಂದು ದೇವಸ್ಥಾನದ ಮುಂದೆ ಕೆರೆ ಕಟ್ಟೆಗಳನ್ನ ನಿರ್ಮಾಣ ಮಾಡಿದ ಮಹಾನ್ ಶರಣನ ಸಮಾಜದಲ್ಲಿ ಹುಟ್ಟಿದ ತಾವು ಶ್ರೇಷ್ಠರು, ಭಗವಂತನ ಮೂರ್ತಿಗಳನ್ನ ನಿರ್ಮಿಸಿದ ಮಹಾನ್ ಶಕ್ತಿ, ಕಠಿಣ ಶ್ರಮ ವಹಿಸಿದ ಶರಣನ ಕುಲದವರು ತಾವು ಭೋವಿ ವಡ್ಡರ ಸಮಾಜ ಬಾಂಧವರು.     ಕಾಯಕವನ್ನ ಹೇಗೆ ಉಳಿಸಿಕೊಂಡು ಬಂದಿದ್ದಾರೆ ಎನ್ನುವುದು 10 ಶತಮಾನ ಕಳೆದರು ಕಾಯಕ ನಿಷ್ಠೆಯಲ್ಲಿ ತೊಡಗಿದ್ದು, ತಾವು ಮಾಡಿರುವ ಶಿಲೆ ಯಾವ ಮಳೆ ಗಾಳಿಗೆ ಅಲುಗಾಡದ ಮೂರ್ತಿಗಳು ಇಂದಿಗೂ ಪ್ರಸ್ತುತ.ಹೃದಯದ ಅಂತರಾಳದಿಂದ ಅನುಭವದಿಂದ ಅನುಭಾವ ಬರುತ್ತದೆ. ಯಾವುದೇ ಕಾರಣಕ್ಕೂ ಕಾಯಕವನ್ನ ಬಿಡಬಾರದು ಎಂದರು. ನಮ್ಮ ಕಾಯಕವಮ್ನ ನಾವು ಮಾಡಬೇಕು ಎನ್ನುವುದು ಪ್ರಸ್ತುತ.ನಿರಂತರ ಸಾಧನೆ ಮಾಡುವ ಕಾಯಕಯೋಗಿ ನಮಗೆ ದೊರಕಿದ್ದು ನಮ್ಮ ಪುಣ್ಯ, ಈಗಿನ ಕಾಲದಲ್ಲಿ ಸ್ವಾಭಿಮಾನ ಬಹಳ ಮಹತ್ವ ಇದೆ. ಕಷ್ಟ ಸುಖ ಎನೇ ಇದ್ದರೂ ನಾನು ನಿಮ್ಮ ಜೊತೆ ಇರುವುದಾಗಿ,ನಿಮ್ಮೆಲ್ಲರ ಒಗ್ಗಟ್ಟಿನಲ್ಲಿ ಬಲವಿದೆ,ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನ ಜಗದ್ಗುರು  ಇಮ್ಮಡಿ  ಸಿದ್ಧರಾಮೇಶ್ವರ ಸ್ವಾಮೀಜಿಗಳು ಭೋವಿ ಗುರುಪೀಠ ಬಾಗಲಕೋಟ-ಚಿತ್ರದುರ್ಗ, ಭೋವಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ, ಲಕ್ಷ್ಮೇಶ್ವರ ತಾಲೂಕ ಭೋವಿ ಸಮಾಜದ ಅಧ್ಯಕ್ಷ ರಾಜು ದುರಗಪ್ಪ ಕಳ್ಳಿ, ಉಪಾಧ್ಯಕ್ಷ ಮಲ್ಲೇಶ ವಡ್ಡರ,  ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಹಿಂದುಳಿದ ವರ್ಗಗಳ ಇಲಾಖೆ ಗದಗ ಜಿಲ್ಲಾ ಅಧಿಕಾರಿ ರವಿ ಎಲ್ ಗುಂಜೀಕರ, ಗದಗ ತಾಲೂಕ ಹಿಂದುಳಿದ ವರ್ಗಗಳ ಅಧಿಕಾರಿ ಬಸವರಾಜ ಬಳ್ಳಾರಿ, ಭೋವಿ ಸಮಾಜದ ಗದಗ ಜಿಲ್ಲಾಧ್ಯಕ್ಷ ಹುಚ್ಚಪ್ಪ ಸಂದಕದ, ಭೋವಿ ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ, ಶಿಗ್ಗಾಂವ ತಾಲೂಕ ಭೋವಿ ಸಮಾಜದ ಅಧ್ಯಕ್ಷ ಅರ್ಜುನ ಹಂಚಿನಮನಿ, ಮುಂಡರಗಿ ತಾಲೂಕ  ಅಧ್ಯಕ್ಷ ವೆಂಕಟೇಶ ಗೆಜ್ಜಿ, ಲಕ್ಷ್ಮೇಶ್ವರ ತಾಲೂಕ ಕರವೇ  ಅಧ್ಯಕ್ಷ ಲೊಕೇಶ ಸುತಾರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀಮತಿ ನಿರ್ಮಲಾ ಸುರೇಶ ಬರದೂರ, ಗ್ರಾಮ ಪಂಚಾಯತ ಸದಸ್ಯರಾದ ಹೊನ್ನಪ್ಪ ವಡ್ಡರ,ಶ್ರೀಮತಿ ಕಮಲವ್ವ ತುಂಬಣ್ಣವರ ಸೇರಿದಂತೆ ಭೋವಿ ಸಮಾಜದ ಮುಖಂಡರಾದ ಯಲ್ಲಪ್ಪ ಬಿಂಜಡಗಿ,ಯಲ್ಲಪ್ಪ ಕೋರದಾಳ, ಮಲ್ಲೇಶಪ್ಪ ಆಲಕುಂಟೆ,ಬಸಪ್ಪ ಅರಳಿಕಟ್ಟಿ, ಬಸವಣ್ಣೇಪ್ಪ ದೊಡ್ಡಮನಿ, ಸಿದ್ದಪ್ಪ ವಡ್ಡರ ಸೇರಿದಂತೆ ಜಿಲ್ಲೆಯ ಭೋವಿ ಸಮಾಜ ಬಾಂಧವರು, ಹಿರಿಯರು-ಯುವಕರು ತಾಯಂದಿರು  ಯುವಕರು ಸೇರಿದಂತೆ ಇತರರಿದ್ದರು.