ಬಡವರ ಮಕ್ಕಳು ಸಹ ಉನ್ನತ ಹುದ್ದೆಗೇರುವ ಅವಕಾಶ ನೀಡದ್ದೇ ಭಾರತ ಸಂವಿಧಾನಸಂವಿಧಾನದ ದಿನದ ಕಾರ್ಯಕ್ರಮದಲ್ಲಿ ಬಸವರಾಜ್ ಕೌಲಗಿ ಅಭಿಮತ

ಭಾರತ ಸಂವಿಧಾನ ದಿನದ ಕಾರ್ಯಕ್ರಮ

ಬಡವರ ಮಕ್ಕಳು ಸಹ ಉನ್ನತ ಹುದ್ದೆಗೇರುವ ಅವಕಾಶ ನೀಡದ್ದೇ ಭಾರತ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಬಸವರಾಜ್ ಕೌಲಗಿ ಅಭಿಮತ

ವಿಜಯಪುರ 27 :ಬಡತಾಯಿಯ ಮಗನೊಬ್ಬ ಜಿಲ್ಲಾಧಿಕಾರಿಯಾಗುವ ಕನಸು ಕಾಣುವುದಕ್ಕೆ ಹಾಗೂ ಕಂಡಂತ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಸಿದ್ದು ಭಾರತದ ಸಂವಿಧಾನ. ಜಗತ್ತಿನ ಶ್ರೇಷ್ಠ ಸಂವಿಧಾನಎಂದು ಗುರುತಿಸಿಕೊಳ್ಳುವ ನಮ್ಮ ಸಂವಿಧಾನಇಲ್ಲದೇ ಹೋಗಿದ್ದರೆ ಈ ದೇಶದ ಸ್ಥಿತಿ ಪಾತಾಳ ಗರಿಡಿಯಂತಾಗುತ್ತಿತ್ತು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು. 

ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಒಂದು ದೇಶದ ಆಡಳಿತ ಸೂತ್ರ ಹೇಗಿರಬೇಕು, ದೇಶದ ಪ್ರಜೆಗಳಿಗೆ ಯಾವರೀತಿಯ ಹಕ್ಕುಗಳಿರಬೇಕು, ಹಕ್ಕುಗಳಿಗೆ ಪ್ರತಿಯಾಗಿ ಎಂಥಹ ಕರ್ತವ್ಯಗಳನ್ನು ನಾವು ಮಾಡಬೇಕುಎನ್ನುವುದನ್ನು ತಿಳಿಸಿಕೊಡುವ ಭಾರತೀಯ ಸಂವಿಧಾನಜಗತ್ತುಕಂಡಂತಅತ್ಯುತ್ತಮವಾದ ಸಂವಿಧಾನಎಂದು ಗುರುತಿಸಿಕೊಳ್ಳುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಎಂಥಹ ಸಂವಿಧಾನ ಬೇಕು ಎನ್ನುವುದನ್ನು ತಿಳಿಸಿಕೊಟ್ಟರು. ಅಸ್ಪೃಶ್ಯತೆಯ ಬೆಂಕಿಯಲ್ಲಿ ಸ್ವತಃ ಬೆಂದಿದ್ದ ಬಾಬಾಸಾಹೇಬರು ಭಾರತದ ಸಂವಿಧಾನರಚನೆಯಲ್ಲಿಅತ್ಯಂತ ಪ್ರಮುಖ ಪಾತ್ರವನ್ನು ನಿಭಾಯಿಸುವುದರೊಂದಿಗೆ ಸಮಾನತೆಯ ಸಂವಿಧಾನ ಜಾರಿಯಾಗುವುದಕ್ಕೆ ಕಾರಣರಾದರು. ಇಷ್ಟು ಅದ್ಭುತವಾದ ಸಂವಿಧಾನವನ್ನು ಪಡೆದುಕೊಂಡಿದ್ದರೂ ಸಹ ಅದರಆಶಯವನ್ನು ಪೂರ್ಣಗಳಿಸುವಲ್ಲಿ ಭಾರತೀಯರುಇನ್ನೂ ಯಶಸ್ವಿಯಾಗುತ್ತಿಲ್ಲ ಎನ್ನುವುದುಖೇದಕರವಾಗಿದೆಎಂದು ಬೇಸರ ವ್ಯಕ್ತಪಡಿಸಿದರು. 

ಇತ್ತೀಚೆಗೆ ಲಂಡನ್‌ನಲ್ಲಿಜರುಗಿದ ಪಾರ್ಲಿಮೆಂಟ್ ನಾಯಕತ್ವ ಶೃಂಗ ಸಭೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಆಗಮಿಸಿದ ವಿಚಾರಗಳನ್ನು ಹಂಚಿಕೊಂಡ ಅವರು; ಒಂದುಕಾಲದಲ್ಲಿ ಭಾರತವನ್ನು ಬ್ರಿಟೀಷರು ಆಳ್ವಿಕೆ ಮಾಡಿದ್ದರು. ಭಾರತೀಯರನ್ನು ಕೊಳ್ಳೆ ಹೊಡೆದುಇಂಗ್ಲಂಡನ್ನು ಶ್ರೀಮಂತ ಮಾಡಿದರು. ಆದರೆ ಬದಲಾದಕಾಲಘಟ್ಟಕ್ಕೆಅನುಗುಣವಾಗಿ ಆ ದೇಶವನ್ನು ಆಳುವ ಕೆಲಸ ಭಾರತೀಯರು ಮಾಡುತ್ತಿದ್ದಾರೆ. ಭಾರತೀಯ ಮೂಲದವರು ಬ್ರಿಟನ್ ಪ್ರಧಾನಿಯಾಗಿ, ಸಂಸತ್ ಸದಸ್ಯರಾಗಿ, ಕಾರ​‍್ೋರೇಟರ್‌ಗಳಾಗಿ ಆ ದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಮತ್ತೆತಲೆಎತ್ತುವುದರಲ್ಲಿಎರಡು ಮಾತಿಲ್ಲ. ಹಾಗಾಗಾಬೇಕಾದರೆ ಭಾರತ ಸಂವಿಧಾನ ನಮಗೆ ನೀಡಿರುವ ಅವಕಾಶಗಳನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳದೆ, ಸಮಾಜ ಸುಧಾರಣೆಗೆ,ದೇಶದಅಭಿವೃದ್ಧಿಗೆ, ಸಂವಿಧಾನದಆಶಯಗಳ ಈಡೇರಿಕೆಗೆ ಬಳಸಿಕೊಂಡಿದ್ದೇ ಆದಲ್ಲಿಇಡೀಜಗತ್ತಿಗೆ ಭಾರತ ಹಿರಿಯಣ್ಣನಾಗುತ್ತಾನೆ. ಆಳ್ವಿಕೆ ಮಾಡಿದ ರಾಷ್ಟ್ರಗಳೆಲ್ಲ ಕೈ ಕಟ್ಟಿ ನಿಲ್ಲುತ್ತವೆ. ಆ ನಿಟ್ಟಿನಲ್ಲಿ ನಮ್ಮಯುವಕರು ಪ್ರಯತ್ನಿಸಬೇಕುಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ನವಜೀವನ ಬ್ಯಾಂಕ್‌ನ ಮ್ಯಾನೇಜರ್‌ವಿ.ಡಿ.ಮಾದನಶೆಟ್ಟಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವದೇಶಕ್ಕೆ ಆಗಮಿಸಿದ ಬಸವರಾಜ್ ಕೌಲಗಿ ಅವರನ್ನುಎಕ್ಸಲಂಟ್‌ಕಾಲೇಜಿನ ಸರ್ವ ಸಿಬ್ಬಂದಿ ಬಳಗ, ವಿದ್ಯಾರ್ಥಿ ನಿಲಯದ ನಿಲಯಪಾಕರು ಸನ್ಮಾನಿಸಿ ಅಭಿನಂದಿಸಿದರು. ವಿದ್ಯಾರ್ಥಿನಿ ಶೃತಿ ವಾಲೀಕಾರ ಪ್ರಾರ್ಥಿಸಿದರು, ಉಪನ್ಯಾಸಕರಮೇಶ ಬಾಗೇವಾಡಿ ಸ್ವಾಗತಿಸಿದರು, ಶರಣಗೌಡ ಪಾಟೀಲ್ ನಿರೂಪಿಸಿದರು, ರವಿ ಕಲ್ಲೂರಮಠ ವಂದಿಸಿದರು.