ಬ್ರೇಜಿಲ್ ನಲ್ಲಿ ಕೃತಕ ಬುದ್ಧಿಮತ್ತೆ ವಿಷಯವಾಗಿ ಗ್ಲೋಬಲ್ ಶೈಕ್ಷಣಿಕ ಸಮಾಗಮಕ್ಕೆ ಬಸವರಾಜ ಗುರಿಕಾರ ಪ್ರಯಾಣ
Basavaraj Gurikar travels to Brazil for global academic conference on artificial intelligence
ಧಾರವಾಡ 30: ಅಂತರ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಸಂಘಟನೆ ವತಿಯಿಂದ ಬ್ರೇಜಿಲ್ ದೇಶದ ರಾಜಧಾನಿ ಬ್ರೂಸೀಲ್ ನಲ್ಲಿ 2025 ರ ಡಿಸೆಂಬರ್ 1ರಿಂದ 5 ರ ವರೆಗೆ ಅಂತರ್ ರಾಷ್ಟ್ರೀಯ ಶಿಕ್ಷಕ ಸಂಘಟನೆಯ ಕಾರ್ಯಕಾರಿ ಸಮಿತಿಯ ಸಭೆ ಹಾಗೂ ಕೃತಕ ಬುದ್ಧಿಮತ್ತೆ ವಿಷಯವಾಗಿ ಗ್ಲೋಬಲ್ ಶೈಕ್ಷಣಿಕ ಸಮಾಗಮ ಜರುಗಲಿದೆ.ಭಾರತ ದೇಶದಿಂದ ಅಖಿಲ ಭಾರತ ಶಿಕ್ಷಕರ ಪೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಭಾಗವಹಿಸುವ ಹಿನ್ನೆಲೆಯಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಶಿಕ್ಷಕರ ಸಂಘದ ಪರವಾಗಿ ಸಮಾವೇಶದ ಯಶಸ್ವಿಯಾಗಿ ನಡೆಯಲು ಮತ್ತು ಬ್ರೇಜಿಲ್ ದೇಶದ ಪ್ರಯಾಣ ಶುಭವಾಗಲಿ ಎಂದು ಗುರಿಕಾರ ಅವರಿಗೆ ಸನ್ಮಾನಿಸಿ ಗೌವಿಸಲಾಯಿತು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಸುರೇಶ ಬೆಟಗೇರಿ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ನೌಕರರ ಸಂಘ ಪರಿಷತ್ತಿನ ಸದಸ್ಯರಾದ ದೇವಿದಾಸ ಶಾಂತಿಕರ, ಗೀರೀಶ ಚೌಡಕಿ, ಮಿಲಿಂದ ನಾಯಕ, ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ, ಅರುಣಕುಮಾರ ಶೀಲವಂತ, ನಾಗರಾಜ ದೇಶಾಯಿ, ನಾಗರಾಜ ಗುರಿಕಾರ, ಆನಂದ ಹಟ್ಟೆಣ್ಣವರ, ಗಣಪತಿ ದೇಶಪಾಂಡೆ, ಯೋಗೇಶ ಕುಮಾರ, ಎನ್ ಎಸ್ ಕಮ್ಮಾರ, ಎಮ್ ಆರ್ ಕಬ್ಬೇರ, ಶ್ರೀಶೈಲ ಚಿಕನಳ್ಳಿ, ಕೃಷ್ಣಮೂರ್ತಿ ಗೊಲ್ಲರ ಮತ್ತಿತರರು ಇದ್ದರು,
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 