ಕ್ಷೌರಿಕರು ಕೇಶಕರ್ತನದ ಜತೆಗೆ ದಂತವೈದ್ಯರಾಗಿ ಮತ್ತು ಶಸ್ತ್ರಚಿಕಿತ್ಸೆ ಸಹ ಮಾಡುತ್ತಿದ್ದರು: ಕೃಷ್ಣಾ ಹಡಪದ

ಕ್ಷೌರಿಕರು ಕೇಶಕರ್ತನದ ಜತೆಗೆ ದಂತವೈದ್ಯರಾಗಿ ಮತ್ತು ಶಸ್ತ್ರಚಿಕಿತ್ಸೆ ಸಹ ಮಾಡುತ್ತಿದ್ದರು: ಕೃಷ್ಣಾ ಹಡಪದ Barbers were not only hairdressers but also dentists and surgeons: Krishna Hadapada

ಗದಗ 02: ಯುರೋಪ್ ಖಂಡದಲ್ಲಿ ರೋಮನ್ನರ ಚಕ್ರಾಧಿಪತ್ಯದ ಅಂತ್ಯವಾಗಿ ಆಧುನಿಕ ಯುರೋಪ್ ನಾಗರೀಕತೆ ಆರಂಭವಾಗುವ ಮಧ್ಯಯುಗದ ಕಾಲಗಟ್ಟದಲ್ಲಿ ಕ್ಷೌರಿಕರು ಕೇವಲ ಕೇಶಕರ್ತನದ ಕಾಯಕವಲ್ಲದೇ ದಂತವೈದ್ಯರಾಗಿಯೂ, ಗಾಯಗೊಂಡ ಭಾಗಗಳನ್ನು ಶುದ್ದೀಕರಿಸಿ ಉಪಚರಿಸುವ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದರು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು      ಅವರು ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ಯವಾಗಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಗಂಗಿಮಡಿ. ಮತ್ತು  ನರಗುಂದ ರೋಡ್ ಮಧ್ಯದಲ್ಲಿರುವ ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ಮಾಲಾರೆ​‍್ಣ ಮಾಡಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ 

ಕಾರ್ಯಕ್ರಮದ ಅಧ್ಯಕ್ಷತೆ ಒಹಿಸಿ ಮಾತನಾಡಿ ಕ್ಷೌರಿಕರೇಲ್ಲಾ ಒಗ್ಗೂಡಿ ಒಂದು ಸಂಘಟನೆಯ ಅವಶ್ಯಕತೆಯನ್ನು ಆಲೋಚಿಸಿ 1096ರಲ್ಲಿ ಕ್ಷೌರಿಕರ-ಶಸ್ತ್ರಚಿಕಿತ್ಸಕರ ಸಂಟನೆಯನ್ನು ಆರಂಭಿಸಿದರು. ಇಂತಹದೊಂದು ಸಂಘಟನೆಯನ್ನು ಅಂದಿನ ಕಾಲದಲ್ಲಿ ಒಗ್ಗೂಡಿಸಿದ ವಿಷಯ ಹೆಮ್ಮೆಯಲ್ಲವೆ ! ಈ ಸಂಘಟನೆಯ ಆರಂಭದ ಸವಿನೆನಪಿಗಾಗಿ ಸೆಪ್ಟೆಂಬರ್ (09) ತಿಂಗಳ 16ನೇ ತಾರೀಖನ್ನು (1096) ಸಂಯೋಜಿಸಿ ಪ್ರತೀ ವರ್ಷದ ಸೆಪ್ಟೆಂಬರ್ 16 ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲಾಗುತ್ತದೆ ಎಂದ ಅವರು ಈ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಕ್ಷೌರಿಕರ ದಿನಾಚರಣೆಯನ್ನು ನಮ್ಮೆಲ್ಲರ ಹೆಮ್ಮೆಯಾದ ರಾಜ್ಯದ ಪ್ರಥಮ ಗದಗಿನ ಸವಿತಾ ಮಹರ್ಷಿ ವೃತ್ತದಲ್ಲಿ ಅತೀ ವಿಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕೃಷ್ಣಾ ಎಚ್ ಹಡಪದ ಹೇಳಿದರು.     

  ಹಿರಿಯರಾದ ಹನುಮಂತಪ್ಪ ರಾಂಪೂರ. ಶಿರಹಟ್ಟಿ ಮುಖಂಡರಾದ ಕುರುಮಯ್ಯ ಬಾರಬಾರ. ಲಕ್ಷ್ಮೇಶ್ವರ ಅಧ್ಯಕ್ಷರಾದ ಹನುಮಂತಪ್ಪ ನಾವಿ. ನರಗುಂದ ಅಧ್ಯಕ್ಷರಾದ ಶ್ರೀನಿವಾಸ ಲಂಕಾಲ್‌. ಅವರು ಮಾತನಾಡಿ ಸಾಮಾಜಿಕ ನೆಲೆಗಟ್ಟಿನಿಂದ ಕುಗ್ಗಿಹೋಗಿರುವ ಸವಿತಾ ಸಮಾಜದ ಕ್ಷೌರಿಕರು ಹೆಮ್ಮೆಯಿಂದ ನಾನೊಬ್ಬ ಕ್ಷೌರಿಕ ಸವಿತಾ ಬಂದು ನಾವೆಲ್ಲ ಒಂದು ಎಂದು ಹೇಳಿಕೊಳ್ಳುವ ಕಾಲ ಕೂಡಿಬಂದಿದೆ. ಮತ್ತೊಮ್ಮೆ ನಾವು ಕುಗ್ಗಿದ ಮನಸ್ಥಿತಿಯನ್ನು ಕಿತ್ತೊಗೆದು ಒಡೆದ ಕವಲುಗಳನ್ನು ಒಟ್ಟಗೂಡಿಸಿ ಗಟ್ಟಿಯಾಗಿ ಸಂಘಟಿತರಾಗಿ ಅಶಕ್ತರನ್ನು ಶಕ್ತರನ್ನಾಗಿಸಿ ಸಮಾಜವನ್ನು ಬಲಗೊಳಿಸುವುದೆ ನಮ್ಮ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್‌. ಹಡಪದ ನೆತೃತ್ವದ ನಿಯೋಗದ ಸಂಕಲ್ಪವಾಗಿದೆ ಎಂದು ಹೇಳಿದರು.       ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ.

ಶ್ರೀ ಸಂತ ಸೇನಾ ಮಹಾರಾಜ್ ನಾಭಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷರುಗಳಾದ ರಾಜು ಮಾನೆ. ವಿಕಾಸ ಕ್ಷೀರಸಾಗರ.  ಹಿರಿಯರಾದ ಬಾಲರಾಜ ಕೊಟೇಕಲ್ಲ. ಮಾತನಾಡಿ ವಿಶ್ವ ಕ್ಷೌರಿಕ ದಿನಾಚರಣೆಯ ಜೊತೆಗೆ ಸವಿತಾ ಮಹರ್ಷಿ ದಿನಾಚರಣೆಯೂ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಬೇಕಾಗಿದೆ. ಇದರೊಂದಿಗೆ ಗತಕಾಲದ ರಾಜ್ಯವಾಳಿದ. ಶಸ್ತ್ರಚಿಕಿತ್ಸಕರಾದ, ದಂತವೈದ್ಯರಾದ ಇತ್ಯಾದಿ ಇತಿಹಾಸಗಳನ್ನು ಮನನ ಮಾಡಿ ನಮ್ಮೊಳೊಗೆ ಬೇರು ಬಿಟ್ಟಿರುವ ಸಂಕುಚಿತತೆಯನ್ನು ತೊಡೆದುಹಾಕಿ ಮತ್ತೊಮ್ಮೆ ಇತಿಹಾಸದ ವೈಭವ ಮರುಕಳಿಸುವಂತೆ ಮಾಡಲು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್‌. ಹಡಪದ ನೆತೃತ್ವದ ನಿಯೋಗದೂಂದಿಗೆ ಸಮಸ್ತ ಸವಿತಾ ಕ್ಷೌರಿಕ ಬಂಧುಗಳು ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.     

  ದಾವಣಗೆರಿ ಹಿರಿಯರಾದ ವೆಂಕಟೇಶ ಅವರು ಮತ್ತು ಜಿಲ್ಲಾ ಸವಿತಾ ಸಮಾಜದ ಖಜಾಂಚಿಗಳಾದ ಅರುಣ  ರಾಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.      ಈ ಸಂದರ್ಭದಲ್ಲಿ ಶಿರಹಟ್ಟಿ  ಹಿರಿಯರಾದ ಬಾಲಕೃಷ್ಣಯ್ಯ ಬಾರಬಾರ. ವೆಂಕಟೇಶ ಬಾರಬಾರ ಸರ್ಕಾರಿ ನೌಕರರು ಈರಣ್ಣ ಬಾರಬಾರ. ನರಗುಂದ ಹಿರಿಯರಾದ ಹನುಮಂತಪ್ಪ ಶ್ರೀರಾಮನಗರ. ಬಾಲ ಸ್ವಾಮಿ ಲಂಕಾಲ್ ಉಪಾಧ್ಯಕ್ಷರಾದ ಸಂದೀಪ ಬಾಲಗುಡ್ಡ.   ಲಕ್ಷ್ಮೇಶ್ವರ ಹಿರಿಯರಾದ ವೆಂಕಟೇಶ ನಾವಿ. ನಾಗರಾಜ ನಾವಿ. ವಿನೋದ್ ಎಸ್ ಹೆಚ್‌. ಗದಗ-ಬೆಟಗೇರಿ ಹಿರಿಯರಾದ ಪರಶುರಾಮ (ಬಜ್ಜು) ರಾಂಪುರ. ಬಾಲರಾಜ ಕೋಟೆಕಲ್ಲ. ಕೃಷ್ಣಾ ಬಾಯಲಗುಡ್ಡ. ಜಂಬಣ್ಣ ಕಡಮೂರ. ಹೇಮಂತ ವಡ್ಡೆಪಲ್ಲಿ. ವೆಂಕಟೇಶ ಬಳ್ಳಾರಿ. ರಮೇಶ ರಾಂಪೂರ. ರಾಮಣ್ಣ ಗುರುಜಾಲಕರ್‌. ದೀಪಕ ಮಾನೆ. ಪಾಂಡು ಕಾಳೆ. ಅಶೋಕ ಮಾನೆ.

ಜ್ಞಾನೇಶ್ವರ ಕಾಳೆ. ಶಿವಾಜಿ ಮಾನೆ. ದತ್ತು ಮಾನೆ ಜ್ಯೋತಿರಾಮ ಮಾನೆ. ವಸಂತ ಮಾನೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಂಜುನಾಥ ಮಾನೆ. ಪ್ರಮುಖ ಮುಖಂಡರಾದ ಕಿರಣ ರಾಂಪುರ. ಕುಮಾರ ಆದೋನಿ. ಪರಶುರಾಮ ಆದೋನಿ. ಕುಮಾರ ಹಡಪದ (ಬೂದೂರ) ಸುಧೀರ ಮಾನೆ.  ಮಾಧು ಮಾನೆ. ತುಕಾರಾಮ ಮಾನೆ. ಸವಿತಾ ಮಹರ್ಷಿ ಜಯಂತಿ ಆಚರಣೆ ನಿರ್ವಹಣೆ ಸಮಿತಿಯ ನಾಯಕರುಗಳಾದ ಸುನಿಲ ರಾಯಚೂರ. ಮಂಜುನಾಥ ಆರ್ ಮಾನೆ. ಗಣೇಶ ಕಡಮೂರ. ಪ್ರಕಾಶ ಬೂದೂರ. ಸಾಗರ ಹಡಪದ. ವಿಕ್ರಂ ಕ್ಷೀರಸಾಗರ. ಕೃಷ್ಣಾ ಬೂದೂರ. ಪ್ರೇಮ ರಾಂಪೂರ. ಪ್ರೇಮ ಬೂದೂರ. ಅಭಿನಾಶ ಆದೋನಿ. ಯಶವಂತ ಬೂದೂರ. ನಿಂಗರಾಜ ಕಡಮೂರ. ಅಕ್ಷಯ ಮಾನೆ. ಗದಗ ಜಿಲ್ಲಾ ಸವಿತಾ ಸಮಾಜದ ನೂರಾರು ಬಾಂಧವರು ಹಾಜರಿದ್ದರು ನವೀನ ಕೋಟೆಕಲ್ಲ ಸ್ವಾಗತಿಸಿದರು. ವಿಜಯ ಬೂದೂರ ನಿರೂಪಿಸಿದರು. ವಿನಾಯಕ ರಾಯಚೂರ ವಂದನಾರೆ​‍್ಣ ಮಾಡಿದರು.ಕೃಷ್ಣಾ ಎಚ್ ಹಡಪದ9845650612