ಕೃಷ್ಣ ಪಾರಿಜಾತ ಕಲೆಯಲ್ಲಿ ಬರಮಣ್ಣನ ಸಾಧನೆ ಅಪಾರ: ಯತ್ತಿನಮನಿ
Baramanna's achievement in Krishna Parijata art is immense: Yattinamani
ಕೃಷ್ಣ ಪಾರಿಜಾತ ಕಲೆಯಲ್ಲಿ ಬರಮಣ್ಣನ ಸಾಧನೆ ಅಪಾರ: ಯತ್ತಿನಮನಿ
ನೇಸರಗಿ 27: ಶ್ರೀ ಕೃಷ್ಣ ಪಾರಿಜಾತ ಕಲಾ ಪ್ರದರ್ಶನ ತನ್ನ ಬಾಲ್ಯದ ಅವಧಿಯಲ್ಲಿ ರೂಢಿಸಿಕೊಂಡು ಜಿಲ್ಲೆಯ ಜಾತ್ರೆಗಳಲ್ಲಿ ಶ್ರೀಕೃಷ್ಣ ಪಾರಿಜಾತ ಕಲೆ ಜನರಿಗೆ ತೋರಿಸಿದ ಹೆಮ್ಮೆ ಬರಮಣ್ಣ ಸತ್ತೇನ್ನವರ ಅವರಿಗೆ ಸಲ್ಲುತ್ತದೆ ಎಂದು ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕರು, ಪಿಕೆಪಿಎಸ್ ಅಧ್ಯಕ್ಷ ಆರ್ ಎಮ ಯತ್ತಿನಮನಿ ಹೇಳಿದರು.
ಅವರು ಮಂಗಳವಾರದಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇತೀಚೆಗೆ ರಾಜ್ಯ ಮಟ್ಟದ ಬಯಲಾಟ ಅಕ್ಯಾಡೆಮಿ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಪಾರಿಜಾತ ಜನರಿಗೆ ಪರಿಚಯ ಮಾಡಿದ ವ್ಯಕ್ತಿ, ತನ್ನ ಸ್ವಂತ ಖರ್ಚಿನಿಂದ ಜನರಿಗೆ ನಾಟಕದ ರುಚಿ ತೋರಿಸಿದ್ದರು ಎಂದರು.
ವಕೀಲರಾದ ಎಮ್ ವಾಯ ಸೋಮಣ್ಣವರ ಮಾತನಾಡಿ ಬರಮಣ್ಣ ಒಬ್ಬ ಹುಟ್ಟು ಪಾರಿಜಾತ ಕಲಾವಿದ ಅವರಿಗೆ ಪ್ರಶಸ್ತಿ ದೊರಕಿರುವದು ನಮ್ಮ ಹೆಮ್ಮೆ ಎಂದರು.
ಅಡಿವಪ್ಪ ಮಾಳಣ್ಣವರ, ಎಸ್ ವಿ ಸೋಮಣ್ಣವರ, ಬಾಳಪ್ಪ ಮಾಳಗಿ, ಬಸನಗೌಡ ಚಿಕ್ಕನಗೌಡ್ರ, ಮಲ್ಲಪ್ಪ ಮಾಳಣ್ಣವರ, ಎಮ್ ಟಿ. ಪಾಟೀಲ, ಜಗದೀಶ ಗೆಜ್ಜಿ, ಸೋಮನಗೌಡ ಪಾಟೀಲ, ಗುರು ತುಬಚಿ, ನಿಂಗಪ್ಪ ತಳವಾರ, ನಜೀರ್ ತಹಶೀಲ್ದಾರ, ಸಿದ್ದಪ್ಪ ಇಂಚಲ, ಮಲ್ಲಿಕಾರ್ಜುನ ಕಲ್ಲೋಳಿ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 