ಬ್ಯಾಂಕಿನ ಚುನಾವಣೆಯಲ್ಲಿ ಗೆಲುವು: ಸದಸ್ಯರಿಂದ ಸಿಹಿ ವಿತರಣೆ
ತಾಳಿಕೋಟಿ 22: ಪಟ್ಟಣದ ಪ್ರತಿಷ್ಠಿತ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಗೆಲವು ಸಾಧಿಸಿ ಆಯ್ಕೆಯಾದ ಹಳೆಯ ಪೆನಲ್ ನ ಸದಸ್ಯರು ಪಟ್ಟಣದಲ್ಲಿ ಸಿಹಿ ವಿತರಿಸಿ ಕೃತಜ್ಞತೆ ಸಲ್ಲಿಸಿದರು. ಬುಧವಾರ ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಓಲ್ಡ್ ಈಸ್ ಗೋಲ್ಡ್ ( ಹಳೆಯ ಪೆನಲ್) ನ ಸದಸ್ಯರು ಹಾಗೂ ಅವರ ಬೆಂಬಲಿಗರು ಸೇರಿಕೊಂಡು ಎಲ್ಲ ಅಡತ್ ಅಂಗಡಿಗಳಿಗೆ ತಲುಪಿ ಆಯ್ಕೆ ಮಾಡಿದ್ದಕ್ಕಾಗಿ ಸಿಹಿ ವಿತರಿಸಿ ಕೃತಜ್ಞತೆಗಳನ್ನು ತಿಳಿಸಿದರು. ಈ ಸಮಯದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕ ಮುರಿಗೆಪ್ಪ ಸರಸಟ್ಟಿ ಮಾತನಾಡಿ ತೀವ್ರ ಪೈಪೋಟಿಯಿಂದ ಕೂಡಿದ ಈ ಬಾರಿಯ ಬ್ಯಾಂಕಿನ ಚುನಾವಣೆಯಲ್ಲಿ ಬ್ಯಾಂಕಿನ ಶೇರುದಾರ ಮತದಾರ ಬಾಂಧವರು ಮತ್ತೇ ನಮ್ಮ ಮೇಲೆ ವಿಶ್ವಾಸ ಇಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ ನಮ್ಮ ಪೆನಲ್ ನ 13 ಜನ ಸದಸ್ಯರಲ್ಲಿ 12 ಜನ ಸದಸ್ಯರನ್ನು ಆಯ್ಕೆ ಮಾಡಿ ಮತ್ತೇ ಸೇವೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ,
ಅವರು ನಮ್ಮ ಮೇಲಿಟ್ಟ ವಿಶ್ವಾಸವನ್ನು ಕೆಡದಂತೆ ನೋಡಿಕೊಂಡು ಬ್ಯಾಂಕಿನ ಅಭಿವೃದ್ಧಿಗಾಗಿ ಈ ಮೊದಲು ಶ್ರಮಿಸಿದಕ್ಕಿಂತಲೂ ಹೆಚ್ಚಿಗೆ ಶ್ರಮಿಸಿ ಬ್ಯಾಂಕಿನ ಇನ್ನಷ್ಟು ಅಭಿವೃದ್ಧಿಯನ್ನು ಮಾಡುತ್ತೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.ಈ ಸಮಯದಲ್ಲಿ ನೂತನ ನಿರ್ದೇಶಕರಾದ ಈಶ್ವರ್ಪ ಬಿಳೇಭಾವಿ,ಬಾಬು ಹಜೇರಿ, ದ್ಯಾಮನಗೌಡ ಪಾಟೀಲ, ರಾಮಪ್ಪ ಕಟ್ಟಿಮನಿ, ಸಂಜೀವಪ್ಪ ಬರದೇನಾಳ,ಶಸಾಪ ಯುವ ಘಟಕ ಅಧ್ಯಕ್ಷ ಜಗದೀಶ ಬಿಳೆಭಾವಿ, ಸುರೇಶ್ ಪಾಟೀಲ,ಕುಶಾಲ್ ದತ್ತಾತ್ರೇಯ ಹೆಬಸೂರ,ರಾಜು ಕೊಡಗಾನೂರ,ಬಿ.ಎಸ್. ಪಂಚಗಲ್ಲ ಮತ್ತಿತರರು ಇದ್ದರು.