ಮಹಿಳಾ ಗ್ರಾಮ ಸಭೆ
ಯಮಕನಮರಡಿ 22: ಸ್ಥಳೀಯ ಗ್ರಾಮಪಂಚಾಯತಿ ಕಾರ್ಯಾಲಯದಲ್ಲಿ ದಿ. 22ರಂದು ಮಹಿಳಾ ಗ್ರಾಮ ಸಭೆಯನ್ನು ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರು ವಹಿಸಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗ ಡಂಗ್ ಹಾಗೂ ಸಿಬ್ಬಂದಿ ವರ್ಗ ಮತ್ತು ತಾಲೂಕ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ಸಿಡಿಪಿಓ ಮಹಾದೇವ ಕೋಳಿ ಉಪಸ್ಥಿತರಿದ್ದರು.
ಮಹಿಳಾ ಸಂಜೀವಿನಿ ಸ್ವ ಸಹಾಯ ಸಂಘಗಳ ಕಾರ್ಯದರ್ಶಿ ಅನುರಾಧಾ ಕಾಪಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದದ್ದು ಅಲ್ಲದೇ ಮಹಿಳಾ ಮೀಸಲಾತಿ ಹೆಚ್ಚಿಸಲಾಗಿದೆ. ಆದರೇ ಗ್ರಾಮೀಣ ಪ್ರದೇಶದ ಮಹಿಳೆಯರು ಇನ್ನೂ ಸಾಕಷ್ಟು ಬದಲಾವಣೆ ಹೊಂದಬೇಕಾಗಿದೆ. ಮೂಡನಂಬಿಕೆ ಬಾಲ್ಯ ವಿವಾಹ ದೆವದಾಸಿ ಪದ್ದತಿ, ನಿರ್ಮೂಲನೆ ಆಗಬೇಕಾಗಿದೆ. ಅದಕ್ಕಾಗಿ ಸರ್ಕಾರವು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಕರೆದು ಮಹಿಳೆಯರಲ್ಲಿ ಜಾಗೃತೆ ಮೂಡಿಸುತ್ತಿದ್ದರೂ, ಸಹಿತ ಸ್ವ ಸಹಾಯ ಸಂಘದ ಮಹಿಳಾ ಸಂಘ ಧರ್ಮಸ್ಥಳ ಸಂಘ ಅಲ್ಲದೇ ಇತರೇ ಸಂಘ ಸಂಸ್ಥೆಗಳಲ್ಲಿ ಸಾಲದ ರೂಪದಲ್ಲಿ ಧನ ಸಹಾಯ ಪಡೆದಿರುವ ಹಣವನ್ನು ಉತ್ತಮ ಸದುಪಯೋಗ ಪಡೆಸಿಕೊಳ್ಳಬೇಕೆಂದು ಹೇಳಿದರು.
ಜೊತೆಗೆ ಮಹಿಳೆಯರು ಮೈ ತುಂಬ ಉತ್ತಮ ವಸ್ತ್ರಗಳನ್ನು ಧರಿಸಿ ಸಂಸ್ಕಾರ ವಂತರಾಗಿರಬೇಕು ಅಲ್ಲದೇ ತಮ್ಮ ಮಕ್ಕಳಿಗೂ ಸಹಿತ ಉತ್ತಮ ಸಂಸ್ಕಾರ ರೂಢಿಸಬೇಕೆಂದು ವಿನಂತಿಸಿಕೊಂಡರು.