ಬಾಣಂತಿಯರ ಸಾವು ಸರ್ಕಾರಿ ಪ್ರಯೋಜಿತ ಕೊಲೆ: ಮಂಜುಳ
ಬಳ್ಳಾರಿ 07: ನಗರದಲ್ಲಿ ಬಾಣಂತಿ ಸಾವಿನ ಪ್ರಕರಣ ಇಲ್ಲಿನ ಜಿಲ್ಲಾಸ್ಪತ್ರೆಗೆ ಬಿಜೆಪಿ ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳ , ಮಾಜಿ ಶಾಸಕಿ ರೂಪಾಲಿನಾಯ್ಕ, ಎಂಎಲ್ಸಿ ಹೇಮಲತ ನಾಯ್ಕ ಮೊದಲಾದವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಇದೊಂದು ಸರ್ಕಾರಿ ಪ್ರಯೋಜಿತ ಕೊಲೆ ಎಂದು ಆರೋಪಿಸಿದ ಅವರು ಇಷ್ಟೇಲ್ಲ ಸಾವಾಗ್ತಿದ್ರು ಸರ್ಕಾರ ಎಚ್ಚತ್ತುಕೊಂಡಿಲ್ಲ. ಆರೋಗ್ಯ ಸಚಿವರ ನಿರ್ಲಕ್ಷ್ಯದಿಂದಲೇ ಸಾವಾಗಿದೆ. ಮೃತರ ಕುಟುಂಬಕ್ಕೆ ಕೇವಲ ಎರಡು ಲಕ್ಷ ರೂ ಪರಿಹಾರ ನೀಡಿದರೆ ಯಾರಿಗೆ ಸಾಲುತ್ತದೆ. ಮಕ್ಕಳ ಜವಾಬ್ದಾರಿ ಯಾರು ಹೊರಬೇಕು ಎಂದು ಪ್ರಶ್ನಿಸಿದರು.ಸರ್ಕಾರದ ನಿರ್ಲಕ್ಷ್ಯಕ್ಕೆ ಐದು ಬಲಿಯಾಗಿವೆ. ಇನ್ನಷ್ಟು ಸಾವಾಗಬೇಕೆ. ಇನ್ನಾದ್ರೂ ಸಾವಿನ ಸರಣಿ ನಿಲ್ಲಲಿ ಎಂದು ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಕನಿಷ್ಟ 25 ಲಕ್ಷ ರೂ ನೀಡಬೇಕು ಎಂದು ಆಗ್ರಹಿಸಿದರು.