ಬಾಳೆ ಬೆಳೆ ರೋಗ ನಿಯಂತ್ರಣ ಕ್ರಮಗಳು: ರೈತರಿಗೆ ಸಲಹೆ
Banana crop disease control measures: Advice to farmers
ಬಾಳೆ ಬೆಳೆ ರೋಗ ನಿಯಂತ್ರಣ ಕ್ರಮಗಳು: ರೈತರಿಗೆ ಸಲಹೆ
ಶಿರಹಟ್ಟಿ 29: ಇತ್ತೀಚಿನ ವರ್ಷಗಳಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಬಾಳೆ ಬೆಳೆಗಾರರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಉದ್ದಿಮೆ ನಿರ್ವಹಣೆಗೆ ಹೆಚ್ಚು ಆದಾಯ ನೀಡಬಲ್ಲ ಬೆಳೆ ಎಂಬ ಕಾರಣದಿಂದಾಗಿ ರೈತರು ಈ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ಸದ್ಯಕ್ಕೆ ಎರಡೂ ತಾಲೂಕುಗಳಲ್ಲಿ ಒಟ್ಟು 200 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ವ್ಯಾಪಕವಾಗಿ ಬೆಳೆದಿದೆ.
ಇದರಲ್ಲಿ ಸಂತೋಷಕರ ಬೆಳವಣಿಗೆಗಳೊಂದಿಗೆ ಕೆಲವೊಂದು ಆತಂಕಕಾರಿ ಅಂಶಗಳೂ ಕಾಣಿಸಿಕೊಳ್ಳುತ್ತಿವೆ. ಈ ಮಧ್ಯೆ, ಈ ಭಾಗದ ಹಲವಾರು ರೈತರ ತೋಟಗಳಲ್ಲಿ ಸೊರಗು ರೋಗ (ಪನಾಮಾ ಅಥವಾ ಸಿಗಟೋಕ) ಕಂಡುಬಂದಿದ್ದು, ಬೆಳೆ ನಾಶದ ಹಂತ ತಲುಪುವಂತಾಗಿದೆ.
ರೋಗದ ಲಕ್ಷಣಗಳು: ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ.ಕಾಂಡದ ಬಳಿ ಹಳದಿಹಿಕೆಂಪು ಬಣ್ಣದ ಗೆರೆಗಳು ಗೋಚರಿಸುತ್ತವೆ.ಕಾಂಡವನ್ನು ಕತ್ತರಿಸಿದರೆ ಒಳಗೆ ಕಪ್ಪು/ಕೆಂಪು ತೇಪೆಗಳು ಕಾಣಿಸುತ್ತವೆ.ಗಿಡಗಳ ನೈಸರ್ಗಿಕ ಚಟುವಟಿಕೆಗೆ ಅಡ್ಡಿಯಾಗುತ್ತದೆ.ಕೊನೆಗೆ ಸಂಪೂರ್ಣವಾಗಿ ಗಿಡ ಸೊರಗುತ್ತದೆ.
ಶಿಫಾರಸು ಮಾಡಿರುವ ಓಷಧೋಪಚಾರ: ಸೊರಗು/ಸಿಗಟೋಕ ರೋಗ ನಿಯಂತ್ರಣಕ್ಕೆ:
ಕವಚ:2.5 ಗ್ರಾಂ/ಲೀಟರ್, 7 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು.ಮತ್ತೊಂದು ಓಷಧ: 1 ಮಿಲೀ/ಲೀಟರ್, 7 ದಿನಗಳ ನಂತರ 2 ಬಾರಿ ಸಿಂಪಡಿಸಬೇಕು.
ಫೋಟ್ಯಾಶ್ ಕೊರತೆಯ ನಿಯಂತ್ರಣಕ್ಕೆ:
0:0:50 ದ್ರವ ಗೊಬ್ಬರ: 5 ಗ್ರಾಂ/ಲೀಟರ್ ಸಿಂಪಡಿಸಬೇಕು.ಅಥವಾ ಮ್ಯೂರೇಟೆ ಆಫ್ ಪೊಟಾಶ್ : 100 ಗ್ರಾಂ ಪ್ರತಿಗಿಡಕ್ಕೆ ಹಾಕಬೇಕು.
ಕಾಂಡುಕೊಳೆ ರೋಗ:
ರೋಗಬಾಧಿತ ಎಲೆಗಳ ಹೊರ ಕವಚಗಳನ್ನು ತೆಗೆದು ಹಾಕಬೇಕು.ನಂತರ ಬೋರ್ಡು ಪೇಸ್ಟ್ ಬಳಸಿ ಕಾಂಡವನ್ನು ಉಪಚರಿಸಬೇಕು.
ಮುಂಜಾಗ್ರತಾ ಕ್ರಮಗಳು:
ನಿರೋಧಕ ಪ್ರಭೇದಗಳ ನಾಟಿ ಮಾಡುವುದು.ಉತ್ತಮ ಒಳಚರಂಡಿ ವ್ಯವಸ್ಥೆ ನಿರ್ಮಿಸಿಕೊಳ್ಳುವುದು.ಸೋಂಕಿತ ಗಿಡಗಳನ್ನು ಬೇರಿ್ಡಸಿ ಸ್ಥಳದಲ್ಲೇ ನಾಶಪಡಿಸುವುದು. ಉಪಕರಣಗಳು ಮತ್ತು ಪಾದರಕ್ಷೆಗಳನ್ನು ಸೋಡಿಯಂ ಹೈಪೋಕ್ಲೋರೈಟ್‌ನಿಂದ ಶುದ್ಧಪಡಿಸಬೇಕು.ಜೈವಿಕ ನಿಯಂತ್ರಣ ಏಜೆಂಟ್‌ಗಳಾದ ಟ್ರೈಕೋಡರ್ಮಾ ವೈರೈಡ್ ಅಥವಾ ಸೂಡೊಮೊನಸ್ ಫ್ಲೋರೋಸೆನ್ಸ್ ಅನ್ನು ಮಣ್ಣಿನಲ್ಲಿ ಬಳಸಬೇಕು.ಸೋಂಕು ಕಂಡುಬಂದ ಮಣ್ಣಿನಲ್ಲಿ 3-4 ವರ್ಷ ಬಾಳೆ ಬಿತ್ತನೆ ಮಾಡಬಾರದು.
ಬಾಳೆ ಬೆಳೆಯಲ್ಲಿ ಸೊರಗು ರೋಗವು ಮಾರಕವಾಗಿದ್ದು, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರು ತಕ್ಷಣ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ಓಷಧೋಪಚಾರ ಹಾಗೂ ಜೈವಿಕ ತಂತ್ರಜ್ಞಾನವನ್ನು ಅನುಸರಿಸಿ ಬೆಳೆ ರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದೆ.
ಕೋಟಾ-1
"ಸದ್ಯಕ್ಕೆ ಬಾಳೆ ಬೆಳೆಗಳಲ್ಲಿ ಸೊರಗು ರೋಗವು ಕಾಣಿಸಿಕೊಂಡಿದ್ದು, ರೈತರು ಎಚ್ಚರಿಕೆಯಿಂದ ವರ್ತಿಸಬೇಕು. ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಸೂಕ್ತ ಓಷಧ ಸಿಂಪಡಣೆ ಮಾಡುವುದು ಅವಶ್ಯಕವಾಗಿದೆ. ನಮ್ಮ ತಾಂತ್ರಿಕ ಶಿಫಾರಸುಗಳಂತೆ ಮುಂದಿನ ಕ್ರಮ ಕೈಗೊಂಡರೆ ರೋಗ ನಿಯಂತ್ರಣ ಸಾಧ್ಯ" ಎಂದರು.
ಪ್ರಶಾಂತ್ ಕುಲಕರ್ಣಿ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 