ಲೋಕದರ್ಶನ ವರದಿ
ಬಾಗಲಕೋಟೆ 09: ರಾಷ್ಟ್ರೀಯ ಆರೋಗ್ಯ ಅಭಿಯಾದಡಿ ಹುನಗುಂದ ತಾಲೂಕಾ ಆಸ್ಪತ್ರೆಯಲ್ಲಿ ಇರುವ ಎಂ.ಎನ್.ಆರ್.ಸಿ ಕೇಂದ್ರ ಪುನಶ್ಚೇತನದಿಂದ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2012ರಲ್ಲಿಯೇ ಎಂ.ಎನ್.ಆರ್.ಸಿ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೆ ಹಾಜರಾಗಿ ಪ್ರಮಾಣದಲ್ಲಿ ಕಡಿಮೆ ಇದ್ದದ್ದನ್ನು ಮನಗಂಡ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಸದರಿ ಎಂ.ಎನ್.ಆರ್.ಸಿ ಕೇಂದ್ರವನ್ನು ಪುನಶ್ಚೇತನಗೊಳಿಸಲು ಮಾರ್ಗದರ್ಶನ ನೀಡಿದ್ದರು. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಕರ್ಷಣೀಯವಾಗಿ ಕಾಣಲೂ ವಿವಿಧ ಗೋಡೆ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೇ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಒದಗಿಸಲಾಗಿದೆ.
ಮಗುವಿನ ಜೊತೆ ಬರುವ ತಾಯಂದಿರಿಗೆ ಎನ್.ಆರ್.ಇ.ಜಿ ದರದ ಪ್ರಕಾರ 14 ದಿನ ಹಣ ಸಂದಾಯ ಮಾಡಲಾಗುತ್ತಿದೆ. ಪುನಶ್ಚೇತನಗೊಂಡ ಕೇಂದ್ರವನ್ನು ಬಸವ ಜಯಂತಿ ದಿನದಂದು ಪ್ರಾರಂಭಿಸಲಾಗಿದ್ದು, ಪ್ರಾಂಭವಾದ ದಿನದಿಂದ ಮೇ ಅಂತ್ಯಕ್ಕೆ ಒಟ್ಟು 8 ಮಕ್ಕಳು ಚಿಕಿತ್ಸೆ ಪಡೆದಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.