ಟಿಎಪಿಸಿಎಂ ನಿರ್ದೇಶಕರಾಗಿ ಬಗಲಿ ಅವಿರೋಧ ಆಯ್ಕೆ
Bagali elected unopposed as TAPCM director
ಟಿಎಪಿಸಿಎಂ ನಿರ್ದೇಶಕರಾಗಿ ಬಗಲಿ ಅವಿರೋಧ ಆಯ್ಕೆ
ತಾಳಿಕೋಟಿ 15: ಮುದ್ದೇಬಿಹಾಳ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಐದು ವರ್ಷದ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನ ತಮದಡ್ಡಿ ಗ್ರಾಮದ ಬಸವರಾಜ ಚನ್ನಮಲ್ಲಪ್ಪ ಬಗಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸ್ಥಾನದ ನಿರ್ದೇಶಕ ಮಂಡಳಿಯ ಈ ಚುನಾವಣೆಯಲ್ಲಿ ಬಸವರಾಜ ಬಗಲಿ ಅವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈಗಾಗಲೇ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮನ್ನು ಅವಿರೋಧ ಆಯ್ಕೆಗೆ ಎಲ್ಲ ರೀತಿಯಿಂದಲೂ ಸಹಕರಿಸಿದ ಕೆ ಎಸ್ ಡಿ ಎಲ್ ಅಧ್ಯಕ್ಷರು, ಶಾಸಕರಾದ ಅಪ್ಪಾಜಿ ನಾಡಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿಎಸ್ ಪಾಟೀಲ(ಯಾಳಗಿ), ಮುಖಂಡರಾದ ಗುರು ತಾರನಾಳ, ಎಂ.ಎಸ್.ಮೇಟಿ, ಸಂಗನಗೌಡ ಪಾಟೀಲ (ಕವಡಿಮಟ್ಟಿ), ನಾನಾಗೌಡ ಹೊಸಳ್ಳಿ (ತಮದಡ್ಡಿ),ರಾಜುಗೌಡ ಕನಕರೆಡ್ಡಿ ಚಂದ್ರಶೇಖರ ಸಾಸ್ನೂರ ಅವರಿಗೆ ಬಗಲಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 