ಧಾರವಾಡ 06: ಕರ್ನಾ ಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಮಟ್ಟದಲ್ಲಿ ಜರುಗಿದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಡಿ.ಎಫ್. ಇರಗಾರ ತಂಡದವರು ಪ್ರಥಮ ಸ್ಥಾನ, ಪ್ರಶಸ್ತಿ ಪಡೆದುಕೊಂಡರು.
40 ವರ್ಷ ಮೇಲ್ಪಟ್ಟ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾಯರ್ೆ ಕವಿತ ಎ.ಎಸ್. ಅವರು ಡಬಲ್ಸ್ನಲ್ಲಿ ಚಿನ್ನದ ಪದಕ ಹಾಗೂ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ ಪಡೆದರು.
ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ ಯಲ್ಲಿ ಶಿಕ್ಷಣ ಇಲಾಖೆಯ ಲತಾದೇವಿ ಬ.ಬೆನಕನಹಳ್ಳಿ ಪ್ರಥಮ ಸ್ಥಾನ ಪಡೆದರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಧಾರವಾಡ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಬಹುಮಾನ ಗಳಿಸಿತು.