ಬಿ.ಎಲ್‌.ಡಿ.ಇ ಧ್ವನಿ 98.6 ಈಒ ರೇಡಿಯೋ ಕೇಂದ್ರದ ಉದ್ಘಾಟನೆ

ಬಿ.ಎಲ್‌.ಡಿ.ಇ ಧ್ವನಿ 98.6 ಈಒ ರೇಡಿಯೋ ಕೇಂದ್ರದ ಉದ್ಘಾಟನೆ  BLDE Voice 98.6 EO Radio Station Inauguration

         ವಿಜಯಪುರ 08: ಪ್ರತಿಷ್ಟಿತ ಬಿ.ಎಲ್‌.ಡಿ.ಇ ಸಂಸ್ಥೆಯ “ಬಿ.ಎಲ್‌.ಡಿ.ಇ ಧ್ವನಿ 98.6 ಈಒ“ ಸಮುದಾಯ ಬಾನುಲಿ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಮತ್ತು ಬಿ.ಎಲ್‌.ಡಿ.ಇ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಪಾಟೀಲ ಉದ್ಘಾಟಿಸಿದರು.   

ಬಿ.ಎಲ್‌.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದಲ್ಲಿ ನೂತನವಾಗಿ ಆರಂಭವಾಗುತ್ತಿರುವ “ಬಿ.ಎಲ್‌.ಡಿ.ಇ ಧ್ವನಿ 98.6 ಈಒ” ಆಕಾಶವಾಣಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ, ಯುವಕರು, ಮಹಿಳೆಯರು ಮತ್ತು ರೈತ ಸಮುದಾಯಗಳಿಗಾಗಿ ವಿನೂತನ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ರೇಡಿಯೋ ಮೂಲಕ ಶುಭ ಹಾರೈಸಿದರು.   

         ನಮ್ಮ ಭಾಗದ ರೈತರಿಗೆ ಇರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವುದು, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ನೀಡಿಸುವುದರ ಜೊತೆಗೆ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ಮಹಿಳೆಯ ಆರೋಗ್ಯ ಮತ್ತು ಗುಡಿ ಕೈಗಾರಿಕೆಗಳು ಸಣ್ಣ ಮಟ್ಟದ ಉದ್ಯೋಗವಕಾಶ ಎಲ್ಲ ಬಗೆಯ ಬೆಳವಣಿಗೆ ಬಗ್ಗೆ ತಿಳಿಸುವಂತಾಗಬೇಕು ಎಂದರು. ಮಾಹಿತಿ ಮತ್ತು ಮನೋರಂಜನೆಯೊಂದಿಕೆ ನೂತನ ರೇಡಿಯೋ ಬಹಳಷ್ಟು ಜನರನ್ನು ತಲುಪಲಿ ಎಂದು ಆಶಿಸಿದರು.   ಇದೇ ಸಂದರ್ಭದಲ್ಲಿ ವಿಜಯಪುರದ ಆಟೋ ಚಾಲಕರಿಗೆ ರೇಡಿಯೋಗಳನ್ನು ವಿತರಿಸಲಾಯಿತು.   

           ಕಾರ್ಯಕ್ರಮದಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯ ನಿರ್ದೇಶಕರಾದ ಡಾ.ಆನಂದ ಪಾಟೀಲ, ಶ್ರೀ. ಎಸ್ ಜಿ ಸಜ್ಜನ, ಶ್ರೀ. ಎಸ್ ಎನ್ ಮಠ, ಬಿಎಲ್‌ಡಿಇ ವಿವಿ ಸಮ-ಕುಲಾಧಿಪತಿ ಡಾ.ವೈ.ಎಂ.ಜಯರಾಜ್, ಮುಖ್ಯ ಸಲಹೆಗಾರ ಹಾಗೂ ವಿವಿ ರಿಜಿಸ್ಟ್ರಾರ್ ಡಾ.ಆರ್‌. ವಿ. ಕುಲಕರ್ಣಿ, ಆಡಳಿತಾಧಿಕಾರಿ ಶ್ರೀ. ವಿ ಎಸ್ ಬಗಲಿ, ಶ್ರೀ. ಐ ಎಸ್ ಕಾಳಪ್ಪನವರ್, ಯೋಜನೆಯ ಸಲಹೆಗಾರ ರಾಘವೇಂದ್ರ  ಉಡುಪಿ, ರೇಡಿಯೋ ಕೇಂದ್ರದ ಸಂಯೋಜಕ ಅಚ್ಯುತ ಯರಗಲ್ಲ, ರೇಡಿಯೋ ಜಾಕಿಗಳಾದ ಮುತ್ತುರಾಜ ಯಲಗಟ್ಟಿ, ಮಹಾಂತೇಶ ಕೋತಿನ, ಶುಭಾ ಹತ್ತಳ್ಳಿ ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.