ಬಿಜೆಪಿ ಕಾರ್ಯಕರ್ತರ : ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರಾ​‍್ಯಲಿ

ಬಿಜೆಪಿ ಕಾರ್ಯಕರ್ತರ : ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರಾ​‍್ಯಲಿ  BJP workers: Bike rally on the occasion of Ghar Tiranga Yatra

ಬಿಜೆಪಿ ಕಾರ್ಯಕರ್ತರ : ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರಾ​‍್ಯಲಿ  

ವಿಜಯಪುರ 10: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರಾ​‍್ಯಲಿ ಉತ್ಸಾಹದಿಂದ ನಡೆಯಿತು. 

ಬಿಜೆಪಿಯ ನೂರಾರು ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತಾ ಕೀ ಜೈ...ಭಾರತ ಮಾತಾ ಕೀ ಜೈ.... ವಂದೇ ಮಾತರಂ...ವಂದೇ ಮಾತರಂ.....ಹೀಗೆ ಅನೇಕ ದೇಶಭಕ್ತಿ ಪ್ರತೀಕವಾದ ಘೋಷಣೆಗಳನ್ನು ಕೂಗಿ ಉತ್ಸಾಹದಿಂದ ರಾ​‍್ಯಲಿಯಲ್ಲಿ ಭಾಗವಹಿಸಿದರು. ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಅನೇಕ ನಾಯಕರು ಬೈಕ್ ಮೇಲೆ ಸಂಚರಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮೊದಲಾದ ನಾಯಕರು ಸ್ವತ: ಬೈಕ್ ಚಲಾಯಿಸಿ ಯುವಕರಲ್ಲಿ ಉತ್ಸಾಹ ತುಂಬಿದರು.  

ನಗರದ ಅಥಣಿ ರಸ್ತೆಯಲ್ಲಿರುವ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಆರಂಭಗೊಂಡ ರಾ​‍್ಯಲಿ ಶಿವಾಜಿ ವೃತ್ತ, ಮುಲ್ಕ್‌-ಏ-ಮೈದಾನ ತೋಪು, ಉಪಲಿ ಬುರ್ಜ, ಅಣ್ಣಾ ಇಡ್ಲಿ, ಗಾಂಧಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಂಚರಿಸಿ ಪುನ: ಶ್ರೀ ಶಿವಾಜಿ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.  

ರಾ​‍್ಯಲಿಗೆ ಚಾಲನೆ ನೀಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರಕರ ಸೇರಿದಂತೆ ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದರು, ಕಠಿಣಾತಿಕಠಿಣ ಜೈಲು ಶಿಕ್ಷೆ ಅನುಭವಿಸಿದರು. ಅವರೆಲ್ಲರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ದೇಶಭಕ್ತಿ ಎನ್ನುವುದು ನಮ್ಮ ಉಸಿರಾಗಬೇಕು, ದೇಶಭಕ್ತಿ ಜಾಗೃತಿಗಾಗಿ ಹರ್ ಹರ್ ಘರ್ ತಿರಂಗಾ ಎನ್ನುವ ಕಾರ್ಯಕ್ರಮ ಇಡೀ ಭಾರತೀಯರ ಮನ ಗೆದ್ದಿದೆ ಎಂದರು.  

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಮಖರಾದ ಭೀಶಂಕರ ಹದನೂರ, ಡಾ.ಸುರೇಶ ಬಿರಾದಾರ, ಚಂದ್ರಶೇಖರ್ ಕವಟಗಿ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಸಂಜಯ ಕನಮಡಿ, ಸ್ವಪ್ನಾ ಕಣಮುಚನಾಳ, ಉಮೇಶ್ ಕಾರಜೋಳ,  ಉಮೇಶ್ ಕೋಳಕೂರ, ಈರಣ್ಣ ಪಟ್ಟಣಶೆಟ್ಟಿ, ಗೋಪಾಲ್ ಘಟಕಾಂಬಳೆ, ರಾಹುಲ ಜಾಧವ, ವಿಠ್ಠಲ ಹೊಸಪೇಟೆ, ಚಿದಾನಂದ ಚಲವಾದಿ, ಭರತ್ ಕೋಳಿ,   ಮಂಜುನಾಥ್ ಮೀಸೆ, ಬಸವರಾಜ್ ಬೈಚಬಾಳ, ಕಾಸುಗೌಡ ಬಿರಾದಾರ, ಮಹೇಂದ್ರ ನಾಯಕ್, ಸಂದೀಪ್ ಪಾಟೀಲ್, ವಿಕಾಸ ಪದಕಿ, ರಾಜಕುಮಾರ್ ಸಗಾಯಿ, ವಿಜಯ ಜೋಶಿ, ತಾವಸೆ, ಕಾಂತು ಸಿಂಧೆ, ವಿನಾಯಕ್ ಗೌಳಿ, ಸಂತೋಷ್ ನಿಂಬರಗಿ, ರವಿ ಬಿರಾದಾರ, ಉಮೇಶ್ ವೀರಕರ, ಪಾಪು ಸಿಂಗ್ ರಜಪೂತ, ಆನಂದ್ ಮುಚ್ಚಂಡಿ, ಅನಿಲ್ ಉಪ್ಪಾರ, ಸಾಗರ್ ಶೇರಖಾನೆ, ಸಂಗು ಉಕಲಿ, ಭಾರತಿ ಶಿವಣ್ಣಗಿ, ವಿಠ್ಠಲ ಹೊಸಪೇಟೆ, ಸಂತೋಷ ಜಾಧವ ಪಾಲ್ಗೊಂಡಿದ್ದರು.