ನಗರಸಭೆ ಸ್ಥಾಯಿ ಸಮಿತಿ ರಚನೆಗೆ ಬಿಜೆಪಿ ಆಕ್ಷೇಪ

BJP objects to the formation of Municipal Standing Committee

ನಗರಸಭೆ ಸ್ಥಾಯಿ ಸಮಿತಿ ರಚನೆಗೆ ಬಿಜೆಪಿ ಆಕ್ಷೇಪ  

ರಾಣೆಬೆನ್ನೂರ  21 : ಇಲ್ಲಿನ ನಗರಸಭೆಯಲ್ಲಿ ಗುರುವಾರ ಮುಂಜಾನೆ  ಜರುಗಿದ ಸಾಮಾನ್ಯ ಸಭೆಯಲ್ಲಿ  ಆಡಳಿತ ಪಕ್ಷದವರು ಸ್ಥಾಯಿ ಸಮಿತಿ ರಚನೆ ಕುರಿತಾದ  ವಿಷಯ ಮಂಡನೆ ಮಾಡಿದಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಾಯಿ ಸಮಿತಿ ರಚನೆ ಮಾಡಿಕೊಂಡರೆ ಅದು ಸಂಖ್ಯಾ ಬಲವಿಲ್ಲದೇ ಕಾನೂನುಬಾಹೀರವಾಗಿದ್ದು, ಇದನ್ನು ವಿರೋಧಿಸಿ ಕಾನೂನಿನ ಮೊರೆ ಹೋಗುವುದಾಗಿ ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ ಹೇಳಿದರು.    ಅವರು ಗುರುವಾರ ರಾತ್ರಿ ಬಿಜೆಪಿ ಕಾರ್ಯಾಲಯದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಆಡಳಿತ ಪಕ್ಷದವರು ಅಜೆಂಡಾದಲ್ಲಿ 100 ವಿಷಯಗಳನ್ನು ತೆಗೆದುಕೊಂಡಿದ್ದು , ಅದರಲ್ಲಿ 87 ವಿಷಯಗಳನ್ನು ಚರ್ಚೆ ನಡೆಸಿ ಪಾಸ್ ಮಾಡಲಾಯಿತು.    88 ನೇ ವಿಷಯದಲ್ಲಿ ಸ್ಥಾಯಿ ಸಮಿತಿ ರಚನೆ ಮಾಡುವ ಬಗ್ಗೆ  ವಿಷಯವನ್ನು ಓದಿ ಅನುಮೋದನೆ ನೀಡಿದ ಬಳಿಕ ವಿರೋಧ ಪಕ್ಷದವರು ಉಪಸೂಚನೆ  ನೀಡಿದ ಬಳಿಕ ಮತಕ್ಕೆ ಹಾಕಲು ಕೇಳಿದಾಗ ಅಧ್ಯಕ್ಷರು ತಮ್ಮಸಂಖ್ಯಾ ಬಲ ಇಲ್ಲದನ್ನು ಮನಗೊಂಡು  ತಮ್ಮ ಸ್ಥಾನದಿಂದ  ಎದ್ದು ಅರ್ಧ ಗಂಟೆ ಸಭೆ ಮುಂದೂಡಿದೆ ಎಂದು ಹೇಳಿ ಹೊರಗೆ ಹೋದರು ಎಂದರು.   ಉಪ ಸೂಚನೆ ಕೊಟ್ಟರೂ ಅದಕ್ಕೆ ಅಧ್ಯಕ್ಷರು ಉತ್ತರ ನೀಡಲಿಲ್ಲ.ಅಧ್ಯಕ್ಷೆ ಚಂಪಕ ರವರು ಇದನ್ನು ಮತಕ್ಕೆ ಹಾಕಬೇಕಿತ್ತು ಅಥವಾ ಉಪ ಸೂಚನೆಯಂತೆ ಸ್ಥಾಯಿ ಸಮಿತಿ ರಚನೆ ಮಾಡಬೇಕಿತ್ತು. ಮೊದಲೇ ವಿಷಯ ಮಂಡನೆ ಮಾಡಬಾರದಾಗಿತ್ತು. ಆದರೆ ಅಧ್ಯಕ್ಷರು ತಮ್ಮ ಸಂಖ್ಯಾಬಲ ಕಡಿಮೆ ಇರುವುದು ಖಾತ್ರಿಯಾದ ಕೂಡಲೇ ಸಭೆ ಮುಂದೂಡಲು ಕಾರಣವೇನು ಎಂದು ಬುರುಡಿಕಟ್ಟಿ  ಪ್ರಶ್ನಿಸಿದರು.  ಪೌರಾಡಳಿತ ಕಾಯ್ದೆ ವಿರುದ್ಧವಾಗಿ ಅಧ್ಯಕ್ಷರು ನಡೆದುಕೊಂಡಿದ್ದಾರೆ ಎಂದು ಬಲವಾಗಿ ಆರೋಪಿಸಿದರು. ಮಾಧ್ಯಮ ಗೋಷ್ಠಿಯಲ್ಲಿ ಸದಸ್ಯರಾದ ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ರೂಪಾ ಚಿನ್ನಿಕಟ್ಟಿ, ನಾಗರಾಜ ಅಡ್ಮನಿ, ಪಾಂಡುರಂಗ ಗಂಗಾವತಿ, ಹನುಮಂತಪ್ಪ ಹೆದ್ದೇರಿ, ಪ್ರಭಾವತಿ ತಿಳವಳ್ಳಿ, ರತ್ನವ್ವ ಪೂಜಾರ, ಕವಿತಾ ಹೆದ್ದೇರಿ , ಗಂಗಮ್ಮ ಹಾವನೂರ, ಸಿದ್ದಪ್ಪ ಬಾಗಲವರ ಮತ್ತಿತರರು ಇದ್ದರು.