ಜಿ.ಟಿ ದೇವೇಗೌಡಗೆ ಬಿಜೆಪಿ ಸೇರಲು ಆಹ್ವಾನ


ಬೆಂಗಳೂರು 15: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಸಚಿವ ಜಿಟಿ ದೇವೇಗೌಡ ಅವರಿಗೆ ಸ್ವಾಗತ ಎಂದು ಕೆಲ ಬಿಜೆಪಿ ಕಾರ್ಯಕರ್ತರು ಸೋಮವಾರ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.  

  ಬಿಜೆಪಿಗೆ ಬರುತ್ತಿರುವ ಸಚಿವ ಜಿಟಿ ದೇವೇಗೌಡರಿಗೆ ಸ್ವಾಗತ. ಜೆಡಿಎಸ್ ತೊರೆದು ಬಿಜೆಪಿಗೆ ಬನ್ನಿ.  ಸಮ್ಮಿಶ್ರ ಸಕರ್ಾರ ನಿಮಗೆ ಮೋಸ ಮಾಡಿದೆ. ಒಬ್ಬ ಮುಖ್ಯಮಂತ್ರಿ ಯನ್ನು ಸೋಲಿಸಿದ ನಿಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಹುಣಸೂರಿನಲ್ಲಿ ನಿಮ್ಮ ಮಗನಿಗೆ ಅನ್ಯಾಯವಾಗಿದೆ. ಮರಳಿ ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿರುವ ಬಿಜೆಪಿ ಕಾರ್ಯಕರ್ತರ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಜಿಟಿ ದೇವೇಗೌಡರು ಬಿಜೆಪಿಯಲ್ಲಿದ್ದರು. ಕೆಲ ವರ್ಷಗಳ ಹಿಂದೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು. ಇತ್ತೀಚೆಗೆ ಜಿಟಿಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಈ ಪೋಸ್ಟ್ ಚರ್ಚೆ  ಗ್ರಾಸವಾಗಿದೆ.